Sleeping Tips: ವ್ಯಕ್ತಿ ಆರೋಗ್ಯದಿಂದ ಇರಬೇಕು ಅಂದ್ರೆ ಅದಕ್ಕೆ ನಿದ್ದೆ ಕೂಡ ಮುಖ್ಯ. ಸರಿಯಾದ ಪ್ರಮಾಣದ ನಿದ್ದೆ ಮಾಡಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯ. ಎಷ್ಟೋ ಜನರಿಗೆ ರಾತ್ರಿಯ ವೇಳೆ ಸರಿಯಾಗಿ ನಿದ್ದೆ ಬರುವುದಿಲ್ಲ. ಹಾಗಂತ ಚಿಂತೆ ಬೇಡ!. ನೀವು ಮಲಗುವ ಮುನ್ನ ಇವುಗಳನ್ನು ಕುಡಿದರೆ ಸಾಕು ಸಖತ್ ಆಗಿ ನಿದ್ದೆ (Sleeping Tips) ಬರುತ್ತೆ!
ಅರಿಶಿನದ ಹಾಲು: ಅರಿಶಿನದಲ್ಲಿ ‘ ಕರ್ಕ್ಯುಮಿನ್ ‘ ಎಂಬ ಅಂಶವಿದ್ದು, ಇದು ನಮ್ಮ ದೇಹಕ್ಕೆ ಆಂಟಿ – ಇಂಪ್ಲಾಮೇಟರಿ, ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒದಗಿಸಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ. ಅರಿಶಿನದ ಹಾಲು ಆರೋಗ್ಯಕರ ಪೋಷಕಾಂಶಗಳಿಂದ ತುಂಬಿದ್ದು, ಪ್ರತಿ ರಾತ್ರಿ ಹಾಲಿಗೆ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ಸ್ನಾಯುಗಳ ನೋವನ್ನು ಗುಣಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರತಿ ರಾತ್ರಿ ಅರಿಶಿನ ಮಿಶ್ರಿತ ಹಾಲು ಕುಡಿಯುವ ಅಭ್ಯಾಸದಿಂದ ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ. ಇದು ನಿಮಗೆ ಒಳ್ಳೆಯ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿನಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದ್ದು, ಅದು ನಿಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸಲು ಸೆರೊಟೋನಿನ್ ಆಗಿ ಪರಿವರ್ತಿಸುತ್ತದೆ, ಅರಿಶಿನವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ಕೇಸರಿ ನೀರು: ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳ ಸಾಲಿಗೆ ಸೇರುವ ಕೇಸರಿಯನ್ನು ಕ್ರೋಕಸ್ ಸ್ಯಾಟಿವಸ್ ಎಂಬ ಹೂವಿನಿಂದ ಪಡೆಯಲಾಗುತ್ತದೆ. ಕೇಸರಿ, ಹಲವಾರು ಆರೋಗ್ಯ ಸಮಸ್ಯೆಗಳಿಂದ ಕಾಪಾಡಬಲ್ಲ ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ. ಕೇಸರಿಯು ಕ್ರೋಸಿನ್, ಸ್ಯಾಫ್ರನಾಲ್ ಮತ್ತು ಪಿಕ್ರೋಕ್ರೋಸಿನ್ ಎಂಬ ಆ್ಯಂಟಿಆ್ಯಕ್ಸಿಡೆಂಟ್‍ಗಳ ಅತ್ಯುತ್ತಮ ಮೂಲವಾಗಿದೆ. ಅವು ನಿದ್ರಾ ಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕೇಸರಿಯ ಒಂದು ಅಥವಾ ಎರಡು ಎಳೆ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ ಕೇಸರಿಯ ಕೆಲವು ಎಳೆಗಳನ್ನು ಸೇರಿಸುವ ಮೂಲಕ ನೀವು ಡಿಟಾಕ್ಸ್ ಪಾನೀಯವನ್ನು ತಯಾರಿಸಬಹುದು. ಇದರ ನಿದ್ರಾಜನಕ ಗುಣಗಳು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜಾಯಿಕಾಯಿಯ ನೀರು: ಜಾಯಿಕಾಯಿ ಅಥವಾ ಜಾಯಿಫಲ ಎನ್ನುವುದು ಒಂದು ಸಾಂಬಾರ ಪದಾರ್ಥ. ಇದು ಅಡುಗೆಗೆ ರುಚಿ ಹಾಗೂ ಸುವಾಸನೆ ನೀಡುವ ಜತೆಗೆ ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಕೂಡ ಹೊಂದಿದೆ. ನಿದ್ರಾಹೀನತೆ ಸಮಸ್ಯೆಗೆ ಜಾಯಿಕಾಯಿಯು ತುಂಬಾ ಲಾಭಕಾರಿ. ಜಾಯಿಕಾಯಿಯನ್ನು ಬಳಸಿಕೊಂಡರೆ ಅದು ನಿದ್ರೆಯ ಅವಧಿಯನ್ನು ಹೆಚ್ಚಿಸುವುದು.
ಆಯುರ್ವೇದದ ಪ್ರಕಾರ, ಜಾಯಿಕಾಯಿಯನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡರೆ ಮೆದುಳನ್ನು ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ. ನಿದ್ರೆಯನ್ನು ಪ್ರಚೋದಿಸಲು ಮತ್ತು ಒತ್ತಡವನ್ನು ನಿವಾರಿಸಲು ಇದನ್ನು ಸಾಂಪ್ರದಾಯಿಕ ವೈದ್ಯಕೀಯ ಅಭ್ಯಾಸದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಜಾಯಿಕಾಯಿ ಯನ್ನು ಬಳಸಿಕೊಂಡರೆ, ಅದರಲ್ಲಿ ಇರುವ ಟ್ರಿಮೈರಿಸ್ಟಿನ್ ಎನ್ನುವ ಅಂಶವು ಸ್ನಾಯು ಹಾಗೂ ನರಗಳಿಗೆ ಆರಾಮ ನೀಡುವುದು ಹಾಗೂ ನಿದ್ರೆ ಬರುವಂತೆ ಮಾಡುವುದು.
ನೀವು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಜಾಯಿಕಾಯಿಯನ್ನು ಬೆರೆಸಿಕೊಂಡು ಕುಡಿಯಬಹುದು. ಕೆಲವರು ಇದನ್ನು ಬೆಚ್ಚಗಿನ ಹಾಲಿಗೆ ಸೇರಿಸಿಕೊಂಡು ಮಲಗುವ ಮೊದಲು ಕುಡಿಯುತ್ತಾರೆ.
ಬಾದಾಮ್ ಹಾಲು: ಬಾದಾಮಿ ಹಾಲು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬಾದಾಮಿ ಹಾಲು ಸೇವನೆಯು ಅಧಿಕ ರಕ್ತದೊತ್ತಡ ತಡೆದು ಹೃದಯ ಕಾಯಿಲೆಯಿಂದ ರಕ್ಷಿಸುತ್ತದೆ. ಬಾದಾಮಿಯಲ್ಲಿ ಟ್ರಿಪ್ಟೋಫಾನ್ ಮತ್ತು ಮೆಗ್ನೀಸಿಯಮ್ ಇದ್ದು, ಇದು ನಿಮ್ಮ ಹೃದಯದ ಲಯವನ್ನು ಸ್ಥಿರವಾಗಿರಿಸುತ್ತದೆ ಮತ್ತು ನಿಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತಿಗೊಳಿಸುತ್ತದೆ. ಉತ್ತಮ ನಿದ್ದೆಯೂ ಬರುತ್ತದೆ.
ಮೂಳೆಗಳನ್ನು ಆರೋಗ್ಯವಾಗಿಡಲು ಬಾದಾಮಿ ಹಾಲಿನ ಸೇವನೆ ಸಹಕಾರಿ. ಇದರಲ್ಲಿ ಕ್ಯಾಲ್ಸಿಯಂ ಇದೆ. ಬಾದಾಮಿ ಹಾಲು ಕುಡಿಯುವುದರಿಂದ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆ ಮಾಡುತ್ತದೆ. ಬಾದಾಮಿ ಹಾಲು ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.
