Mixie jar cleaning: ಮನೆಯಲ್ಲಿ ಅಡುಗೆಗೆ ಬಳಸುವ ಪ್ರತಿಯೊಂದು ವಸ್ತುಗಳನ್ನು ಕ್ಲೀನ್ ಮಾಡುವುದೆಂದರೆ ಮಹಿಳೆಯರಿಗೆ ದೊಡ್ಡ ತಲೆನೋವು. ಅದರಲ್ಲೂ ಮಿಕ್ಸಿ ಜಾರ್ ಮತ್ತು ಅದರೊಳಗಿನ ಬ್ಲೆಂಡರ್ಸ್ ಕ್ಲೀನ್ ಮಾಡುವುದಂತೂ ಮಹಿಳೆಯರಿಗೆ ಸಾಕು ಸಾಕು ಎನಿಸಿಬಿಡುತ್ತಿದ್ದೆ. ಆದರೆ ಆ ಚಿಂತೆ ಬಿಡಿ. ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿಕೊಂಡು ಕ್ಷಣಮಾತ್ರದಲ್ಲೇ ಮಿಕ್ಸಿ ಜಾರನ್ನು ಪಳಪಳ ಹೊಳೆಯುವಂತೆ ಕ್ಲೀನ್ ಮಾಡಿ.
ಹೌದು, ಬ್ಲೆಂಡರ್ ಸ್ವಚ್ಛಗೊಳಿಸಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬಿಸಿನೀರು ಮತ್ತು ನಿಂಬೆಹಣ್ಣು. ಬ್ಲೆಂಡರ್ ಜಾರ್‌ಗೆ ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಕೆಲವು ಹನಿ ಡಿಶ್ ಲಿಕ್ವಿಡ್ ಸೇರಿಸಿ. ಜೊತೆಗೆ ಅರ್ಧ ನಿಂಬೆಹಣ್ಣಿನಿಂದ ರಸವನ್ನೂ ಹಿಂಡಿ. ಈಗ ಬ್ಲೆಂಡರ್ ಅನ್ನು 1 ನಿಮಿಷ ರನ್ ಮಾಡಿ. ಇದು ಯಾವುದೇ ಕೊಳಕಿದ್ದರೆ ಮತ್ತು ಗ್ರೀಸ್ ಇದ್ದರೆ ಬಹಳ ಬೇಗ ತೆಗೆದುಹಾಕುತ್ತದೆ. ಈಗ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
ಇನ್ನು ಹೆಚ್ಚಾಗಿ ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಸಾಲೆಗಳನ್ನು ಬ್ಲೆಂಡರ್‌ನಲ್ಲಿ ರುಬ್ಬಿದ ನಂತರ ಸಿಕ್ಕಾಪಟ್ಟೆ ವಾಸನೆ ಬರುತ್ತದೆ. ಈ ಸಮಸ್ಯೆಗೆ ವಿನೆಗರ್ ಉತ್ತಮ ಪರಿಹಾರವಾಗಿದೆ. ಒಂದು ಕಪ್ ನೀರು ಮತ್ತು ಎರಡು ಚಮಚ ಬಿಳಿ ವಿನೆಗರ್ ಅನ್ನು ಒಂದು ಜಾರ್‌ಗೆ ಸೇರಿಸಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬ್ಲೆಂಡರ್ ಅನ್ನು ರನ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಇದು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.
ಅಲ್ಲದೆ ಅರಿಶಿನ ಅಥವಾ ಮಸಾಲೆ ಕಲೆಗಳು ಸಂಗ್ರಹವಾಗಿದ್ದರೆ ಅಡುಗೆ ಸೋಡಾ ತುಂಬಾ ಉಪಯುಕ್ತವಾಗಿದೆ. ಬ್ಲೆಂಡರ್ ಜಾರ್‌ಗೆ ಒಂದು ಚಮಚ ಅಡುಗೆ ಸೋಡಾ ಸೇರಿಸಿ, ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ. ಅದನ್ನು ಹಾಗೇ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ಲೆಂಡರ್ ಅನ್ನು ನಿಧಾನವಾಗಿ ರನ್ ಮಾಡಿ. ನಂತರ ಬ್ರಷ್‌ನಿಂದ ಸ್ವಚ್ಛಗೊಳಿಸಿ. ಇದು ಕಲೆಗಳು ಮತ್ತು ವಾಸನೆ ಎರಡನ್ನೂ ತೆಗೆದುಹಾಕುತ್ತದೆ.
