Home » Tips and Tricks: ಆಭರಣಗಳನ್ನು ಫಳಫಳ ಮಿಂಚುವಂತೆ ಮಾಡಲು ಮನೆಯಲ್ಲೇ ಲಭ್ಯವಿರುವ ಈ 5 ವಸ್ತುಗಳನ್ನು ಬಳಸಿ!

Tips and Tricks: ಆಭರಣಗಳನ್ನು ಫಳಫಳ ಮಿಂಚುವಂತೆ ಮಾಡಲು ಮನೆಯಲ್ಲೇ ಲಭ್ಯವಿರುವ ಈ 5 ವಸ್ತುಗಳನ್ನು ಬಳಸಿ!

0 comments
Tips and Tricks

Tips and Tricks: ಅನೇಕ ಮಹಿಳೆಯರು ಆಭರಣಗಳನ್ನು ಧರಿಸಲು ತುಂಬಾ ಇಷ್ಟಪಡುತ್ತಾರೆ. ವಿವಿಧ ರೀತಿಯ ಆಭರಣಗಳನ್ನು ವಿವಿಧ ಬಟ್ಟೆಗಳೊಂದಿಗೆ ಧರಿಸಲಾಗುತ್ತದೆ. ಆಭರಣಗಳು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಆದರೆ ಇದನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಅಥವಾ ಇಡುವುದರಿಂದ ಆಭರಣದ ಹೊಳಪು ಹೋಗುತ್ತದೆ.

ಜನರು ಹೆಚ್ಚಾಗಿ ಆಭರಣಗಳನ್ನು ಸ್ವಚ್ಛಗೊಳಿಸಲು, ಅಥವಾ ಹೊಳಪು ಹೆಚ್ಚಿಸಲು ಜ್ಯುವೆಲರ್ಸ್ಗೆ ಹೋಗುತ್ತಾರೆ. ಆದರೆ ನಾವಿಲ್ಲಿ ನಿಮಗೆ ಜ್ಯುವೆಲ್ಲರ್‌ ಶಾಪ್‌ಗೆ ಹೋಗದೆ ಮನೆಯಲ್ಲಿಯೇ ಆಭರಣವನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ನೀವು (Tips and Tricks) ಆಭರಣಗಳನ್ನು ಸ್ವಚ್ಛಗೊಳಿಸಬಹುದು. ಬನ್ನಿ ಅದ್ಯಾವ ವಸ್ತುಗಳೆಂದು ತಿಳಿಯೋಣ.

ಅಡಿಗೆ ಸೋಡಾ: ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಒಂದು ಬಟ್ಟಲಿನಲ್ಲಿ 2 ಚಮಚ ಅಡಿಗೆ ಸೋಡಾ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಈಗ ಈ ಆಭರಣಗಳನ್ನು ಸ್ಪಂಜಿನ ಸಹಾಯದಿಂದ ಸ್ವಚ್ಛಗೊಳಿಸಿ. ಶುಚಿಗೊಳಿಸುವಾಗ ಕೈಗೆ ಏನಾದರೂ ಗ್ಲವ್‌ಸ್‌ ಧರಿಸಿಕೊಳ್ಳಿ.

ಟೊಮೆಟೊ ಕೆಚಪ್ : ಆಕ್ಸಿಡೀಕೃತ ಆಭರಣಗಳನ್ನು ಸ್ವಚ್ಛಗೊಳಿಸಲು ನೀವು ಟೊಮೆಟೊ ಕೆಚಪ್ ಅನ್ನು ಬಳಸಬಹುದು. ಟೂತ್ ಬ್ರಶ್ ಸಹಾಯದಿಂದ ಆಭರಣವನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಆಭರಣಗಳಿಗೆ ಹೊಳಪನ್ನು ನೀಡುತ್ತದೆ.

ಟೂತ್‌ಪೇಸ್ಟ್‌ (Tooth Paste): ಆಭರಣವನ್ನು ಸ್ವಚ್ಛಗೊಳಿಸಲು ನೀವು ಟೂತ್ಪೇಸ್ಟ್ ಅನ್ನು ಬಳಸಬಹುದು. ವಜ್ರದ ಉಂಗುರ ಅಥವಾ ಕಿವಿಯೋಲೆಗಳನ್ನು ಸ್ವಚ್ಛಗೊಳಿಸಲು, ಅದರ ಮೇಲೆ ಸ್ವಲ್ಪ ಟೂತ್ಪೇಸ್ಟ್ ಅನ್ನು ಹಾಕಿ ಸ್ವಲ್ಪ ಸಮಯ ಉಜ್ಜಿಕೊಂಡರೆ, ನಂತರ, ಸ್ವಚ್ಛವಾದ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಿದರೆ ಸಾಕು.

ಸೋಡಾ(Soda): ಕಲ್ಲಿನ ಆಭರಣಗಳನ್ನು ಸ್ವಚ್ಛಗೊಳಿಸಲು ನೀವು ಸೋಡಾವನ್ನು ಸಹ ಬಳಸಬಹುದು. ನೀವು ಇದನ್ನು ಬಣ್ಣದ ಮತ್ತು ಬಿಳಿ ಕಲ್ಲುಗಳಿಗೆ ಬಳಸಬಹುದು. ಇದಕ್ಕಾಗಿ, ರಾತ್ರಿಯಲ್ಲಿ ಒಂದು ಪಾತ್ರೆಯಲ್ಲಿ ಕುಡಿಯುವ ಸೋಡಾವನ್ನು ಹಾಕಿ. ಇಡೀ ರಾತ್ರಿ ಆಭರಣವನ್ನು ಅದರಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಶುಭ್ರವಾದ ಬಟ್ಟೆಯಿಂದ ಆಭರಣವನ್ನು ಸ್ವಚ್ಛಗೊಳಿಸಿ.

ವಿನೆಗರ್ : ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ನೀವು ಬಿಳಿ ವಿನೆಗರ್ ಅನ್ನು ಸಹ ಬಳಸಬಹುದು. ಅರ್ಧ ಕಪ್ ಬಿಳಿ ವಿನೆಗರ್ ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಅಡಿಗೆ ಸೋಡಾ ಸೇರಿಸಿ. ಇದರಲ್ಲಿ ಆಭರಣಗಳನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ಇದರ ನಂತರ ಆಭರಣವನ್ನು ತೆಗೆದುಹಾಕಿ. ನೀರಿನಿಂದ ಅದನ್ನು ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಆಭರಣಗಳು ತುಂಬಾ ಸ್ವಚ್ಛವಾಗಿರುತ್ತವೆ.

 

ಇದನ್ನು ಓದಿ: Weather Updates: ಕೇರಳಕ್ಕೆ ಇಂದಿನಿಂದ ಮುಂಗಾರು ಪ್ರವೇಶ: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ನಿರಂತರ ಮಳೆ !

You may also like

Leave a Comment