Home » Kitchen Tips: ಅಡುಗೆ ಕೋಣೆ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ರೆ ಈ ರೀತಿ ಕ್ಲೀನ್ ಮಾಡಿ ನೋಡಿ!

Kitchen Tips: ಅಡುಗೆ ಕೋಣೆ ಗೋಡೆ ಮೇಲೆ ಎಣ್ಣೆ ಜಿಡ್ಡಿನ ಕಲೆ ಇದ್ರೆ ಈ ರೀತಿ ಕ್ಲೀನ್ ಮಾಡಿ ನೋಡಿ!

0 comments
Kitchen Tips

Kitchen Tips: ಮನೆಯಲ್ಲಿ ಕ್ಲೀನಿಂಗ್ ಕೆಲಸ ಅನ್ನೋದು ದಿನನಿತ್ಯ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರಿಗೆ ಅಡುಗೆ ಕೋಣೆಯ ಕ್ಲೀನಿಂಗ್ ಮಾಡೋದು ದೊಡ್ಡ ಸವಾಲು. ಯಾಕೆಂದರೆ ಏನೇ ಹೇಳಿ, ಅಡುಗೆ ಮಾಡುವ ಸಮಯದಲ್ಲಿ ಎಣ್ಣೆ ಹಾಗೂ ಸಾಂಬಾರು ಪದಾರ್ಥವು ಗೋಡೆಯನ್ನು ಸ್ಪರ್ಶ ಮಾಡದೇ ಇರಲು ಸಾಧ್ಯವಿಲ್ಲ. ಇಂತಹ ಕಲೆಗಳನ್ನು ಉಜ್ಜಿ ಉಜ್ಜಿ ಸೋಲು ಒಪ್ಪಿಕೊಂಡಿರುವ ನಿಮಗಾಗಿ ಇಂತಹ ಕಲೆಗಳನ್ನು ಮಾಯ ಮಾಡಲು ನಿಮಗಾಗಿ ಇಲ್ಲಿ ಸೂಪರ್ ಟಿಪ್ಸ್ ಗಳನ್ನು ನೀಡಲಾಗಿದೆ.

Pavitra Gowda: ಜೈಲಿನೊಳಗೆ ಪವಿತ್ರಾ ಗೌಡ ಪ್ರೆಗ್ನೆಂಟ್? ಪರಪ್ಪನ ಅಗ್ರಹಾರದಲ್ಲಿ ಭಾರೀ ಸಂಚಲನ, ಯಾರು ಇದಕ್ಕೆ ಕಾರಣ?

ಹೌದು, ಎಣ್ಣೆ ಬಿದ್ದ ಕಲೆಗಳ ಮೇಲೆ ಕಾಗದವನ್ನು ಇರಿಸಿ ಹೇರ್ ಡ್ರೈಯರ್ ಅನ್ನು ಉಜ್ಜುತ್ತ ಬಂದರೆ, ಕಲೆ ಮಾಯ ಮಾಡಲು ಸಹಕಾರಿಯಾಗಿದೆ. ಅಡುಗೆ ಮನೆಯ ಗೋಡೆಯ ಮೇಲೆ ಎಣ್ಣೆಯ ಕಲೆಗಳಿದ್ದರೆ ಉಪ್ಪು ನೀರಿನಿಂದ ತಿಕ್ಕಿದರೆ ಕಲೆಗಳು ಮಾಯವಾಗಿ ಬಿಡುತ್ತದೆ. ಅಥವಾ ಅಡುಗೆ ಮನೆಯ ಗೋಡೆಯ ಮೇಲಿರುವ ಕಲೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಜಿಡ್ಡಿನ ಕಲೆಗಳು ಇಲ್ಲವಾಗಿಸಬಹುದು.

ಇನ್ನು ಟೈಲ್ಸ್ ಅಥವಾ ಗೋಡೆಗಳ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಲಿಕ್ವಿಡ್ ಡಿಶ್ ವಾಶ್ ಬಳಸಬಹುದು. ದ್ರವರೂಪದ ಡಿಶ್ ವಾಶ್ ಗೋಡೆಯ ಮೇಲೆ ಸ್ಪ್ರೇ ಮಾಡಿ ಒಂದು ಗಂಟೆಗಳ ಕಾಲ ಬಿಡಿ. ಆ ಬಳಿಕ ಬಟ್ಟೆಗೆ ಡಿಶ್ ವಾಶ್ ಹಾಕಿ ಒರೆಸಿದರೆ ಎಲ್ಲಾ ಕಲೆಯು ಮಾಯಾವಾಗುತ್ತದೆ. ಇನ್ನು ಎಣ್ಣೆಯ ಕಲೆಯಿರುವ ಜಾಗಕ್ಕೆ ಟೂತ್ಪೇಸ್ಟ್ ಅನ್ವಯಿಸಿ, ಐದು ನಿಮಿಷಗಳವರೆಗೆ ಹಾಗೆಯೇ ಬಿಡಬೇಕು. ಆ ಬಳಿಕ ಉಜ್ಜಿ ತೊಳೆದರೆ ಕಲೆಯು ಹೋಗುತ್ತದೆ.

ಇನ್ನು ನಿಂಬೆ ಮತ್ತು ವಿನೆಗರ್ ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ, ಈ ನೀರಿನಿಂದ ತಿಕ್ಕಿ ತೊಳೆದರೆ ಕಲೆಯು ಹೋಗಿ, ಗೋಡೆ ಶುಚಿ ಆಗುತ್ತದೆ.

Donald Trump: ಡೊನಾಲ್ಡ್‌ ಟ್ರಂಪ್‌ ಹತ್ಯೆ ಯತ್ನ ಪ್ರಕರಣ; ಆರೋಪಿ ಭಾವಚಿತ್ರ ಬಿಡುಗಡೆ

You may also like

Leave a Comment