Home » Baby movie poster issues: ಮಡಚಿದ ಬೆರಳ ಮಧ್ಯೆ ಎದ್ದು ನಿಂತ ಮಧ್ಯದ ಐಟಂ, ಏನಿದು ಹಾಟ್ ಆಂಡ್ ಡರ್ಟಿ ಮ್ಯಾಟರ್ ?!

Baby movie poster issues: ಮಡಚಿದ ಬೆರಳ ಮಧ್ಯೆ ಎದ್ದು ನಿಂತ ಮಧ್ಯದ ಐಟಂ, ಏನಿದು ಹಾಟ್ ಆಂಡ್ ಡರ್ಟಿ ಮ್ಯಾಟರ್ ?!

by ಹೊಸಕನ್ನಡ
0 comments
Baby movie poster issues

Baby movie poster issues: ಬಹಳ ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟ ವಿಜಯ್ ದೇವರಕೊಂಡ(Vijay devarkond). ಅರ್ಜುನ್ ರೆಡ್ಡಿ ಸಿನಿಮಾ ವಿಜಯ್ ದೇವರಕೊಂಡಗೆ ಒಳ್ಳೆಯ ತಿರುವು ನೀಡಿತು. ಈ ಸಿನಿಮಾದಲ್ಲಿ ಲೈಂಗಿಕ ವಿಚಾರದ ಸೀನ್‌ಗಳು ಅತಿಯಾದವು ಎಂಬ ಟಾಕ್ ಕೇಳಿಬಂದಿತ್ತು. ಆದರೀಗ ವಿಜಯ್ ಅವರ ತಮ್ಮ ಆನಂದ್ ದೇವರಕೊಂಡ(Anand devarakonda) ಸಿನಿಮಾ ಪೋಸ್ಟರ್(Poster) ಕೂಡ ವಿವಾದಕ್ಕೆ ಕಾರಣವಾಗಿದೆ.

ಹೌದು, ಸಿನಿಮಾ ರಂಗದ ಮೇಲೆ ಅಸಹ್ಯ ಹುಟ್ಟಿಸುವಂತಹ ಅನೇಕ ಸಂಗತಿಗಳು ಜರುಗುತ್ತಿವೆ. ಅಂತೆಯೇ ಇದೀಗ ವಿಜಯ್ ದೇವರಕೊಂಡ ತಮ್ಮ ಆನಂದ್ ದೇವರಕೊಂಡ ಸಿನಿಮಾದ ಪೋಸ್ಟರ್ ಒಂದು ಇಂತದೇ ಘಟನೆಗೆ ಸಾಕ್ಷಿಯಾಗಿದ್ದು ನೆಟ್ಟಿಗರೆಲ್ಲರೂ ಅಸಹ್ಯ, ಅಸಹ್ಯ ಅನ್ನುತ್ತಿದ್ದಾರೆ. ಹಾಗಿದ್ರೆ ಆ ಪೋಸ್ಟರ್ ನಲ್ಲಿ ಅಂತದ್ದೇನಿದೆ ಗೊತ್ತಾ?

ಅಂದಹಾಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅವರು ‘ಬೇಬಿ’ ಎಂಬ (Baby movie poster issues) ಸಿನಿಮಾದಲ್ಲಿ ನಟಿಸಿದ್ದಾರೆ. ಈ ‘ಬೇಬಿ’ (Baby) ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ನಾಯಕನ ಮಧ್ಯದ ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ವೈರಲ್(Viral) ಆಗುತ್ತಿದೆ. ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಸಿನಿಮಾ ಟೀಮ್ ಈ ಪೋಸ್ಟರ್ ಮೂಲಕ ಏನನ್ನ ಹೇಳಲು ಹೊರಟಿದೆ? ಇಂತಹ ಅಸಹ್ಯ ಬೇಕಾ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಇನ್ನು ಇಂದಿನ ದಿನಗಳಲ್ಲಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ ನಿಲ್ಲಿಸಲಾಗಿದೆ. ಈ ಕುರಿತು ನಾಯಕಿ ವೈಷ್ಣವಿ ಚೈತನ್ಯ (Vaishnavi Chaitanya) ಯಾವುದೇ ಮಾತುಗಳನ್ನು ಆಡದೇ ಇರುವುದು ಅಚ್ಚರಿ ಕೂಡ ತಂದಿದೆ. ಆದ್ರೆ ವಿಜಯ್ ದೇವರಕೊಂಡ ಅವರ ಫ್ಯಾನ್ಸ್ ಅಂತೂ ಸಖತ್ ಗರಂ ಆಗಿದ್ದಾರೆ.

You may also like

Leave a Comment