Home » Cooking Tips: ಮಾಡಿದ ಅಡುಗೆಗೆ ಉಪ್ಪು ಜಾಸ್ತಿ ಆಯ್ತಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಉಪ್ಪು ಹದ ಮಾಡ್ಕೊಳ್ಳಿ !

Cooking Tips: ಮಾಡಿದ ಅಡುಗೆಗೆ ಉಪ್ಪು ಜಾಸ್ತಿ ಆಯ್ತಾ ? ಚಿಟಿಕೆ ಹೊಡೆಯುವಷ್ಟರಲ್ಲಿ ಉಪ್ಪು ಹದ ಮಾಡ್ಕೊಳ್ಳಿ !

0 comments
Cooking Tips

Cooking Tips: ಅಡುಗೆ ಅದೆಷ್ಟೇ ರುಚಿಯಾಗಿ ಮಾಡಿದ್ದರೂ ಉಪ್ಪು ಹೆಚ್ಚಾದರೆ ಮಾಡಿದ ಅಡುಗೆ ಕೆಡುತ್ತದೆ. ಉಪ್ಪು ಕಡಿಮೆಯಾದರೆ ಇನ್ನಷ್ಟು ಸೇರಿಸಬಹುದು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡಲು ಸಾಧ್ಯವಿಲ್ಲ. ಅದರಿಂದ ತೆಗೆಯೋದಂತು ಅಸಾಧ್ಯ. ಹಾಗಾದ್ರೆ ಏನು ಮಾಡಬಹುದು? ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾದ್ರೆ ಅದಕ್ಕೆ ಈ ಸಿಂಪಲ್ ಟ್ರಿಕ್ (Cooking Tips) ಫಾಲೋ ಮಾಡಿ. ಚಿಟಿಕೆ ಹೊಡೆಯುವಷ್ಟರಲ್ಲಿ ಉಪ್ಪು ಹದ ಮಾಡ್ಕೊಳ್ಳಿ !

ಆಲೂಗಡ್ಡೆ: ಹಸಿ ಆಲೂಗಡ್ಡೆಯನ್ನು ಕತ್ತರಿಸಿ, ನಂತರ ಅದನ್ನು ಉಪ್ಪು ಹೆಚ್ಚಾದ ಅಡುಗೆಯಲ್ಲಿ ಸೇರಿಸಿ, ಆದರೆ ಆಲೂಗೆಡ್ಡೆ ಹಾಕುವಾಗ ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಹಾಕಿ. ಇದು ನಿಮ್ಮ ಆಹಾರದಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಹಾಗೆಯೇ, ಈ ಆಲೂಗೆಡ್ಡೆಯನ್ನು ಕೇವಲ 20 ನಿಮಿಷಗಳ ಕಾಲ ಆಹಾರದ ಮೇಲೆ ಬಿಡಿ, ನಂತರ ತೆಗೆಯಿರಿ. ಸೂಪ್, ನಾರು ಮುಂತಾದವುಗಳಲ್ಲಿ ಈ ಟ್ರಿಕ್ ಸಹಕಾರಿಯಾಗಿದೆ. ಇದಲ್ಲದೆ ಬೇಯಿಸಿದ ಆಲೂಗೆಡ್ಡೆಯನ್ನು ಸಹ ಉಪ್ಪು ಹೆಚ್ಚಾದ ಆಹಾರಕ್ಕೆ ಸೇರಿಸಿದರೆ, ರುಚಿ ಸರಿಯಾಗುತ್ತದೆ.

ನಿಂಬೆ ರಸ: ನಿಂಬೆ ರಸದಿಂದಲೂ ಅಡುಗೆಯಲ್ಲಿ ಹೆಚ್ಚಾದ ಉಪ್ಪನ್ನು ಕಡಿಮೆ ಮಾಡಬಹುದು. ಹೌದು, ಉಪ್ಪಾದ ಅಡುಗೆಗೆ ನಿಂಬೆ ರಸ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿದರೆ ಇದು ಉಪ್ಪಿನಂಶವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಡೈರಿ ಉತ್ಪನ್ನಗಳು: ಡೈರಿಯು ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಇದು ಉಪ್ಪಿನ ರುಚಿಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಓಟ್ಸ್ ಹಾಲು ಅಥವಾ ತೆಂಗಿನ ಹಾಲು ಮುಂತಾದ ಡೈರಿ ಉತ್ಪನ್ನಗಳಲ್ಲದ ಹಾಲುಗಳನ್ನು ಸಹ ಉಪ್ಪಾದ ಅಡುಗೆಗೆ ಸೇರಿಸಬಹುದು. ಅಲ್ಲದೆ, ಆಹಾರದಲ್ಲಿ ಹೆಚ್ಚಿರುವ ಉಪ್ಪನ್ನ ಕಡಿಮೆ ಮಾಡಲು, ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನೂ ಸೇರಿಸಬಹುದು.

ಟೊಮೇಟೊ: ಈಗ ಟೊಮೆಟೋಗೆ ಕೈ ಹಾಕಿದರೆ ಕೈ ಸುಡೋದು ಗ್ಯಾರಂಟಿ. ಆದರೂ ಅಡುಗೆಯಲ್ಲಿ ಉಪ್ಪು ಹೆಚ್ಚಾದಾಗ ಈ ಟೊಮೊಟೊ ಸಹಕಾರಿಯಾಗಿದೆ. ಹೌದು, ಮಾಡಿದ ಅಡುಗೆಗೆ ಸಣ್ಣಗೆ ಹೆಚ್ಚಿದ ಟೊಮೇಟೊ ಅಥವಾ ಟೊಮೇಟೊ ರಸ ಹಾಕಿ ಸ್ವಲ್ಪ ನಿಮಿಷ ಸಾಂಬಾರು ಕುದಿಸಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.

ಕಡಲೆ ಹಿಟ್ಟು : ತರಕಾರಿ ಸಾಂಬರ್ ಅಥವಾ ಬೇರೆ ಯಾವುದೇ ಬಗೆಯ ಗ್ರೇವಿಗೆ ಉಪ್ಪು ಜಾಸ್ತಿಯಾಗಿ ಬಿಟ್ಟರೆ, ಒಂದು ಟೇಬಲ್ ಚಮಚದಷ್ಟು ಹರಿದ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿಕೊಂಡರೆ ಸರಿಯಾಗುತ್ತದೆ. ಉಪ್ಪು ಹೆಚ್ಚಿರುವ ಆಹಾರದಲ್ಲಿ ಮೈದಾಹಿಟ್ಟು ಹಾಕಿದರೂ ಉಪ್ಪು ಕಡಿಮೆ ಆಗುತ್ತೆ!

 

ಇದನ್ನು ಓದಿ: Adhar card: ಆಧಾರ್ ಕಾರ್ಡಿನಲ್ಲಿ ಫೋನ್ ನಂಬರ್ ಬದಲಿಸ್ಬೇಕಾ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ, ರಿಸ್ಕ್ ಇಲ್ದೆ ಚೇಂಜ್ ಮಾಡ್ಕೊಳ್ಳಿ.

You may also like

Leave a Comment