Home » White hair: ಹೇರ್ ಡೈ ಮಾಡೋ ಅಗತ್ಯವೇ ಇಲ್ಲ: ಈ ತರಕಾರಿಗಳ ಪೇಸ್ಟ್ ಬಳಸಿ – ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗಿಸಿ

White hair: ಹೇರ್ ಡೈ ಮಾಡೋ ಅಗತ್ಯವೇ ಇಲ್ಲ: ಈ ತರಕಾರಿಗಳ ಪೇಸ್ಟ್ ಬಳಸಿ – ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗಿಸಿ

by Mallika
0 comments
White hair

White hair: ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ನಮ್ಮ ಕೂದಲಿನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಮಗೆಲ್ಲಾ ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿ. ಆದರೆ ಪ್ರಸ್ತುತ ಬದಲಾದ ಆಹಾರ ಕ್ರಮ ಮತ್ತು ಕೆಟ್ಟ ಜೀವನಶೈಲಿಯಿಂದ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲಾರಂಭಿಸಿವೆ.

ಮಾರುಕಟ್ಟೆಯಲ್ಲಿ ನಾನ ಬಗೆಯ ಕೆಮಿಕಲ್’ಯುಕ್ತ ಉತ್ಪನ್ನಗಳು ಮತ್ತು ಹೇರ್ ಡೈಗಳನ್ನು ಬಳಸುವುದರಿಂದ ಲಾಭದ ಬದಲು ಹಾನಿಯೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ತಜ್ಞರು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಶಿಫಾರಸ್ಸು ಮಾಡುತ್ತಾರೆ. ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲನ್ನು(White hair) ಕಪ್ಪಾಗಿಸಲು ಕೆಲವೊಂದು ಮನೆಮದ್ದುಗಳನ್ನು ನಿಮಗೆ ತಿಳಿಸಲಿದ್ದೇವೆ. ಈ ತರಕಾರಿಗಳ ಪೇಸ್ಟ್ ಬಳಸಿದರೆ ಸಾಕು; ಹೇರ್ ಡೈ ಮಾಡೋ ಅಗತ್ಯವೇ ಇಲ್ಲ. ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗುತ್ತದೆ.

ಈರುಳ್ಳಿ: ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಈರುಳ್ಳಿ ಕೂಡ ವರದಾನವೆಂದೇ ಹೇಳಬಹುದು. ಸಾಮಾನ್ಯವಾಗಿ ಕೂದಲಿನ ಬಲವರ್ಧನೆ ಮತ್ತು ಕೂದಲಿನ ಬೆಳವಣಿಗೆಗೆ ಈರುಳ್ಳಿ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿರುವ ಗಂಧಕವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಎರಡು ಚಮಚ ಈರುಳ್ಳಿಯ ಜೊತೆಗೆ ನಿಂಬೆ ರಸವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿರಿ. 30 ನಿಮಿಷಗಳ ನಂತರ ಹಾಗೆ ಬಿಟ್ಟು ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಹಚ್ಚಿದರೆ ಸಾಕು ಕಡು ಕೂದಲು ನಿಮ್ಮದಾಗುತ್ತದೆ.

ನೆಲ್ಲಿಕಾಯಿ: ನೆಲ್ಲಿಕಾಯಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ ಮತ್ತು ಕೂದಲಿಗಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ . ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವುದಕ್ಕೆ ನೆಲ್ಲಿಕಾಯಿಯನ್ನು ಹೇರ್ ಡೈ ಮತ್ತು ಇತರ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ನೆಲ್ಲಿಕಾಯಿಯಿಂದ 2 ಟೇಬಲ್ ಸ್ಪೂನ್ ನಷ್ಟು ಪೇಸ್ಟ್ ತಯಾರಿಸಿ. ಇದಕ್ಕೆ 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ , ಕೆಲವು ಹನಿ ನಿಂಬೆ ರಸ ಸೇರಿಸಿ. ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಡಿ. ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿ. ಬಿಳಿ ಕೂದಲಿನ ಸಮಸ್ಯೆ ಮಾಯವಾಗುತ್ತದೆ.

ಕಪ್ಪು ಚಹಾ: ಬ್ಲಾಕ್ ಟೀ ಅಂದರೆ ಕಪ್ಪು ಚಹಾದೊಂದಿಗೆ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಕಪ್ಪು ಚಹಾದಲ್ಲಿ ಟ್ಯಾನಿಕ್ ಆಮ್ಲ ಸಮೃದ್ಧವಾಗಿದೆ. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.

1 ಕಪ್ ನೀರಿನಲ್ಲಿ 5 ಟೀ ಚಮಚ ಕಪ್ಪು ಚಹಾವನ್ನು ಹಾಕಿ. ಇದರ ನಂತರ, 5 ರಿಂದ 6 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಚೆನ್ನಾಗಿ ಕುದಿಯುವಾಗ, ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಇದರ ನಂತರ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ನಿಮ್ಮ ಕೂದಲು ಮಿರ ಮಿರ ಮಿಂಚುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ಹರಿವೆ ಸೊಪ್ಪು: ಹರಿವೆ ಸೊಪ್ಪಿನಲ್ಲಿ ಸಾಕಷ್ಟು ಕಬ್ಬಿನ ಅಂಶವಿದ್ದು ಇದು ದೇಹಕ್ಕೂ ಪ್ರಯೋಜನಕಾರಿ. ಅಲ್ಲದೆ ಇದು ನಿಮ್ಮ ಬಿಳಿ ಕೂದಲ ಸಮಸ್ಯೆಗೆ ರಾಮಬಾಣ. ಒಂದು ಸಣ್ಣ ಪಾತ್ರೆಯಲ್ಲಿ ಹರಿವೆ ಸೊಪ್ಪುಗಳನ್ನು ತೆಗೆದುಕೊಂಡು ಪುಡಿಮಾಡಿ ಕೂದಲಿಗೆ ಹಚ್ಚಿರಿ. ಒಂದು ಗಂಟೆಯ ವರೆಗೆ ಒಣಗಲು ಬಿಡಿ ಇದು ನಿಮ್ಮ ಕೂದಲಿನ ಬಣ್ಣವನ್ನು ಕಪ್ಪಾಗಿಸುತ್ತದೆ.

ಪ್ರತಿ ದಿನ ನಿಯಮಿತವಾಗಿ ನಿಮ್ಮ ಕೂದಲಿಗೆ ಈ ರೀತಿ ಆರೈಕೆ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

 

ಇದನ್ನು ಓದಿ: Bike Wheeling: ಎಚ್ಚರ, ಇನ್ಮುಂದೆ ತಮಾಷೆಗೂ ಬೈಕ್ ವ್ಹೀಲಿಂಗ್ ಮಾಡಿದ್ರೆ ಬೀಳೋದು ಕ್ರಿಮಿನಲ್ ಕೇಸೇ ! 

You may also like

Leave a Comment