Home » Chanakya Niti: ಜೀವನದಲ್ಲಿ ಸಾಧಿಸಿ ತೋರಿಸಬೇಕೆಂಬ ಛಲ ಇರುವವರಿಗೆ ಇಲ್ಲಿದೆ ಚಾಣಕ್ಯನ ಪವರ್ ಫುಲ್ ನೀತಿ!

Chanakya Niti: ಜೀವನದಲ್ಲಿ ಸಾಧಿಸಿ ತೋರಿಸಬೇಕೆಂಬ ಛಲ ಇರುವವರಿಗೆ ಇಲ್ಲಿದೆ ಚಾಣಕ್ಯನ ಪವರ್ ಫುಲ್ ನೀತಿ!

by ಹೊಸಕನ್ನಡ
0 comments
Chanakya Niti

Chanakya Niti: ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಲು ಕಷ್ಟಪಟ್ಟು ಪ್ರಯತ್ನಿಸುತ್ತಾರೆ. ಇದರಲ್ಲಿ ಕೆಲವರು ಯಶಸ್ವಿಯಾಗಬಹುದು ಮತ್ತೆ ಕೆಲವರು ವಿಫಲರಾಗಬಹುದು. ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೇವೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದು ಕೂಡಾ ಮುಖ್ಯ. ಹೀಗೆ ಜೀವನವನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಜ್ಞಾನಿಗಳ ಮಾರ್ಗದರ್ಶನ, ಮಾತು ನಮಗೆ ದಾರಿ ದೀಪವಾಗುತ್ತದೆ.ಅಂತೆಯೇ, ಭಾರತದ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಚಾಣಕ್ಯನು ನೀತಿ (Chanakya Niti) ಗ್ರಂಥದಲ್ಲಿ ಹೇಳಿದ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.

ಆತ್ಮವಿಶ್ವಾಸ (Self confidence):
ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಬಹಳ ಮುಖ್ಯ. ಜತೆಗೆ, ಧನಾತ್ಮಕ ಚಿಂತನೆ ಕೂಡಾ. ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡುವ ಆತ್ಮವಿಶ್ವಾಸದ ಜತೆಗೆ ನನ್ನಿಂದ ಇದು ಸಾಧ್ಯ ಎಂಬ ದೃಢತೆ, ಧನಾತ್ಮಕತೆ ಕೂಡಾ ಬಹಳ ಮುಖ್ಯ. ಒಂದೊಮ್ಮೆ ಇಡೀ ಜಗತ್ತು ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬದಿದ್ದರೂ ನಿಮಗೆ ಮಾತ್ರ ನಿಮ್ಮಲ್ಲಿ ನಂಬಿಕೆ ಬೇಕು. ಜತೆಗೆ, ಎಲ್ಲದರಲ್ಲೂ ಧನಾತ್ಮಕತೆಯನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು. ಸಕಾರಾತ್ಮಕ ಯೋಚನೆಗಳು ಮನಸ್ಸನ್ನು ಇನ್ನಷ್ಟು ಶುದ್ಧಗೊಳಿಸುತ್ತದೆ. ಆತ್ಮವಿಶ್ವಾಸ ನಿಮ್ಮನ್ನು ಯಶಸ್ಸಿನ ದಡ ಸೇರಿಸುತ್ತದೆ

ನೇರ ವ್ಯಕ್ತಿತ್ವ (Straight forward):
ಒಬ್ಬ ವ್ಯಕ್ತಿಯ ಹೆಚ್ಚು ನೇರ ವ್ಯಕ್ತಿತ್ವದಿಂದಾಗಿ ಕೆಲವೊಮ್ಮೆ ಅವನಿಗೆ ತೊಂದರೆಯಾಗಬಹುದು. ಚಾಣಕ್ಯ ನೀತಿಯ ಪ್ರಕಾರ, ಅನೇಕ ಬಾರಿ ಇತರ ಜನರು ವ್ಯಕ್ತಿಯ ನೇರತೆಯನ್ನು ತಪ್ಪಾಗಿ ಬಳಸಿಕೊಳ್ಳುತ್ತಾರೆ. ಅವರ ನೇರ ವ್ಯಕ್ತಿತ್ವವನ್ನೇ ಜನರು ಅಹಂಕಾರವೆಂದು ಭಾವಿಸುತ್ತಾರೆ. ಅದಕ್ಕಾಗಿಯೇ ಸ್ವಲ್ಪ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಬಹಳ ಮುಖ್ಯ.

ಒಳ್ಳೆಯವರ ಗೆಳೆತನ(Good friends):
ಒಬ್ಬ ವ್ಯಕ್ತಿಯು ಒಳ್ಳೆಯ ಒಡನಾಟವನ್ನು ಮಾಡಿದಾಗ, ಅವನ ಪ್ರತಿಭೆ ಹೊಳೆಯುತ್ತದೆ, ಜ್ಞಾನವು ಹೆಚ್ಚಾಗುತ್ತದೆ. ಕೆಟ್ಟವರ ಗೆಳೆತನ ಮಾಡಿದರೆ ವ್ಯಕ್ತಿಯು ಕೆಟ್ಟ ಕಾರ್ಯಗಳ ಕಡೆಗೆ ಆಕರ್ಷಿತನಾಗುತ್ತಾನೆ. ಕೆಟ್ಟ ಅಭ್ಯಾಸಗಳು ಅರಳುತ್ತವೆ, ಒಬ್ಬರಿಗೆ ಗೌರವ ಸಿಗುವುದಿಲ್ಲ ಮತ್ತು ಎಲ್ಲರೂ ಅಂತರವನ್ನು ಕಾಯ್ದುಕೊಳ್ಳುತ್ತಾರೆ.

ಕೆಟ್ಟ ಜನರ ಸಹವಾಸವು ವಿಷವಿದ್ದಂತೆ ಎನ್ನುತ್ತಾರೆ ಚಾಣಕ್ಯ ನೀತಿ. ಅದರಿಂದ ದೂರವಿರುವುದು ಒಳ್ಳೆಯದು, ತಪ್ಪು ಸಹವಾಸವನ್ನು ಬಿಡಲು ಸಾಧ್ಯವಾಗದವರು ಜೀವನದಲ್ಲಿ ತೊಂದರೆ ಅನುಭವಿಸುತ್ತಾರೆ. ಮನುಷ್ಯನ ಯಶಸ್ಸಿನಲ್ಲಿ ಜೊತೆಗಾರರ ವಿಶೇಷ ಕೊಡುಗೆಯನ್ನು ಹೊಂದಿದೆ. ಅಲ್ಲದೆ, ಕೇವಲ ಹಣವನ್ನು ಗಳಿಸುವುದು ಸಾಕಾಗುವುದಿಲ್ಲ, ಆದರೆ ಹಣವನ್ನು ಖರ್ಚು ಮಾಡುವ ಸರಿಯಾದ ಮಾರ್ಗವನ್ನು ಸಹ ನೀವು ತಿಳಿದಿರಬೇಕು. ಈ ಅಭ್ಯಾಸಗಳಿಂದಾಗಿ, ನಿಮ್ಮ ಭವಿಷ್ಯವನ್ನು ನೀವು ಅಲಂಕರಿಸಬಹುದು.

ಸರಿ ತಪ್ಪುಗಳ ಯೋಚನೆ :
ಆಚಾರ್ಯ ಚಾಣಕ್ಯರು ಹೇಳುವಂತೆ ಪ್ರತಿಯೊಬ್ಬ ವ್ಯಕ್ತಿಯೂ ಏನಾದರೊಂದು ಪಡೆಯಬೇಕೆಂಬ ದುರಾಸೆಯನ್ನು ಹೊಂದಿರುತ್ತಾರೆ. ದುರಾಶೆಯಿಂದಾಗಿ ತನಗೆ ಬೇಕಾದದ್ದನ್ನು ಪಡೆಯಬೇಕೆಂಬ ಹಠದಿಂದಾಗಿ ಅನೇಕ ಬಾರಿ ಜನರು ತಪ್ಪನ್ನು ಬೆಂಬಲಿಸುತ್ತಾರೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ನಿರ್ಧಾರ ತೆಗೆದುಕೊಳ್ಳುವಾಗ, ಅದು ಸರಿ ಮತ್ತು ತಪ್ಪು ಎರಡರ ಬಗ್ಗೆ ಯೋಚಿಸಿದ ನಂತರವೇ ಮುಂದಿನ ಕಾರ್ಯವನ್ನು ಮಾಡಬೇಕು.

ಉತ್ತಮ ಗುಣನಡತೆ (Good behaviour):
ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ವ್ಯಕ್ತಿಯಲ್ಲಿ ಸದ್ಗುಣಗಳಿರಬೇಕು. ಒಬ್ಬ ವ್ಯಕ್ತಿಯು ತನ್ನ ಗುಣದಿಂದಾಗಿ ಎಂತಹ ಮನುಷ್ಯರ ನಡುವೆಯೂ ತನ್ನದೇ ಆದ ಗುರುತನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಸ್ಥಾನ ಮತ್ತು ಸಂಪತ್ತಿನಿಂದ ಶ್ರೇಷ್ಠನಾಗುವುದಿಲ್ಲ ಆದರೆ ಅವನ ಗುಣಗಳಿಂದ ಶ್ರೀಮಂತನಾಗುತ್ತಾನೆ. ಆತನು ಉತ್ತಮ ಗುಣಗಳಿಂದ ಕೂಡಿದ್ದರೆ ಎಲ್ಲರಿಂದಲೂ ಗೌರವವನ್ನು ಗಳಿಸುತ್ತಾನೆ. ಎಂದು ಚಾಣಕ್ಯ ಹೇಳಿದ್ದಾನೆ.

 

ಇದನ್ನು ಓದಿ: Cheaper Gold: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ! ಇಲ್ಲಿ ಭಾರತಕ್ಕಿಂತಲೂ ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಚಿನ್ನ!! ಖರೀದಿಗೆ ಜನ ಮುಗಿ ಬೀಳೋದಂತೂ ಪಕ್ಕಾ!!! 

You may also like

Leave a Comment