Home » Love Harmone: ಲವ್‌ ಹಾರ್ಮೋನ್‌ ಬಗ್ಗೆ ನಿಮಗೆ ತಿಳಿದಿದೆಯೇ? ಇದರಿಂದ ಹೃದಯದಲ್ಲಿ ಮೊಳಗುತ್ತೆ ಪ್ರೀತಿಯ ಧ್ವನಿ!

Love Harmone: ಲವ್‌ ಹಾರ್ಮೋನ್‌ ಬಗ್ಗೆ ನಿಮಗೆ ತಿಳಿದಿದೆಯೇ? ಇದರಿಂದ ಹೃದಯದಲ್ಲಿ ಮೊಳಗುತ್ತೆ ಪ್ರೀತಿಯ ಧ್ವನಿ!

by Mallika
0 comments
Love Harmone

Love Harmone: ಈ ಪ್ರೀತಿ, ಪ್ರೇಮದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಬಲೆಗೆ ಬಿದ್ದವರೇ. ಆದರೆ ಈ ಸಂಕೇತ ಹೇಗೆ ಗೊತ್ತಾಗುತ್ತದೆ? ಆತ/ಆಕೆ ಯನ್ನು ನಾವು ಪ್ರೀತಿಸುತ್ತಿದ್ದೇವೆ ಎಂದು. ಓರ್ವ ವ್ಯಕ್ತಿಯನ್ನು ನೋಡಿದಾಗ ಯಾಕೆ ಕುಚ್‌ ಕುಚ್‌ ಹೋತಾ ಹೈ ಎಂಬ ಫೀಲ್‌ ಬರುವುದು?. ಇದಕ್ಕೊಂದು ಉತ್ತರ ಈಗ ದೊರಕಿದೆ. ವಿಜ್ಞಾನದ ದೃಷ್ಟಿಕೋನದಿಂದ ನೋಡಿದರೆ ಪ್ರೀತಿಯ ಸಂಬಂಧ ಹೃದಯದಿಂದ ಅಲ್ಲ ಬೆಸೆದಿರುವುದು ಮನಸ್ಸಿನಿಂದ ಎಂದು ಪರಿಗಣಿಸಲಾಗಿದೆ.

ಇದೊಳ್ಳೆ ವಿಚಿತ್ರವಾಯಿತಲ್ಲ? ಈ ಪ್ರೀತಿಯ ವಿಷಯ ಹೃದಯಕ್ಕೆ ಬದಲಾಗಿ ಮೆದುಳಿಗೆ ಹೇಗೆ ಸಂಬಂಧಿಸಿದೆ? ಎಂದು ನಿಮಗೆ ಅನಿಸಿರಬಹುದು. ಆದರೆ, ವಾಸ್ತವವೇನೆಂದರೆ, ನಾವು ಯಾರಿಗಾದರೂ ವಿಭಿನ್ನ ರೀತಿಯ ಭಾವನೆ ಉಂಟು ಮಾಡಿದರೆ ಅದಕ್ಕೆ ಮೆದುಳಿನಿಂದ ಬರುವ ಹಾರ್ಮೋನ್‌ ಕಾರಣ ಎಂದು ಹೇಳಲಾಗುತ್ತದೆ. ಇದರಿಂದ ತಿಳಿಯುವುದೇನೆಂದರೆ, ಪ್ರೀತಿಯ ಭಾವನೆ ಬರುವುದು ಹೃದಯದಿಂದಲ್ಲ ಬದಲಾಗಿ ಮನಸ್ಸಿನಿಂದ.

ಹಾಗಾದರೆ ಈ ಮೆದುಳಿನಿಂದ ಉಂಟಾಗುವ ಹಾರ್ಮೋನ್‌ ಅಂದರೆ ಪ್ರೀತಿಯ ಹಾರ್ಮೋನ್‌ ಯಾವುದು?
ಈ ಹಾರ್ಮೋನ್ ಮೆದುಳಿನಲ್ಲಿರುವ ಹೈಪೋಥಾಲಮಸ್‌ನ ಕೆಳಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಹೊರಬರುತ್ತದೆ. ‘ಆಕ್ಸಿಟೋಸಿನ್’ ಹಾರ್ಮೋನ್ ಆಗಿದ್ದು ಇದನ್ನು ಸಾಮಾನ್ಯ ಭಾಷೆಯಲ್ಲಿ ಲವ್ ಹಾರ್ಮೋನ್ ಅಥವಾ ಪ್ರೀತಿಯ ಹಾರ್ಮೋನ್ ಎಂದು ಕರೆಯಲಾಗುತ್ತದೆ.

ಈ ಹೃದಯ, ದಿಲ್‌ ಅಂತಾರಲ್ಲ ಇದರ ಮುಖ್ಯ ಕೆಲಸ ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಿಯಾಗಿ ಮಾಡುವುದು. ಸಾಮಾನ್ಯವಾಗಿ ನಾವು ಹೆಚ್ಚು ಹೆದರಿದಾಗ, ಸಂತೋಷದಿಂದ ಇದ್ದಾಗ, ಬಹಳ ಉತ್ಸುಕರಾದಾಗ, ಕ್ಯಾಟೆಕೊಲಮೈನ್ಸ್‌ ಎಂಬ ರಾಸಾಯನಿಕ ದೇಹದಲ್ಲಿ ಸಕ್ರಿಯವಾಗುತ್ತದೆ. ಈ ರಾಸಾಯನಿಕ ಮೂತ್ರಪಿಂಡದ ʼಎಂಡೋಕ್ರೈನ್‌ʼ ಬಳಿಯ ಗ್ರಂಥಿಯಿಂದ ಹೊರಬರುತ್ತದೆ. ಇದು ನರಗಳಲ್ಲಿ ಸಂಕೇತದಂತೆ ಕೆಲಸ ಮಾಡುತ್ತದೆ. ಅಂದ ಹಾಗೆ ಈ ಮನಸ್ಸು ಮತ್ತು ಹೃದಯಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಮೆದುಳಿನಿಂದ ಸಂಕೇತವನ್ನು ಸ್ವೀಕರಿಸಿದ ನಂತರ ಹೃದಯದ ಬಡಿತ ಹೆಚ್ಚಾಗುತ್ತದೆ. ಇದು ಹೃದಯದ ಮೇಲೆ ಮೆದುಳಿನಿಂದ ನೇರ ಪರಿಣಾಮ ಬೀರುತ್ತದೆ.

 

ಇದನ್ನು ಓದಿ: Anna Bhagya guarantee: ಪಡಿತರದಾರರಿಗೆ ಸಿಹಿ ಸುದ್ದಿ : ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ ರಾಗಿ, ಜೋಳ ಕೂಡಾ ಫ್ರೀ !! 

You may also like

Leave a Comment