Home » Reverse Your Age: ಈ ಕಾಕ್ ಟೈಲ್ ಕುಡಿದ್ರೆ ಸಾಕು ಚಿರ ಯೌವನ ಖಚಿತ | ಹಾರ್ವರ್ಡ್ ಡಿಸ್ಕವರಿ ತಂದಿದೆ ಹೊಸ ಕೆಮಿಕಲ್ ಶೇಕ್ !

Reverse Your Age: ಈ ಕಾಕ್ ಟೈಲ್ ಕುಡಿದ್ರೆ ಸಾಕು ಚಿರ ಯೌವನ ಖಚಿತ | ಹಾರ್ವರ್ಡ್ ಡಿಸ್ಕವರಿ ತಂದಿದೆ ಹೊಸ ಕೆಮಿಕಲ್ ಶೇಕ್ !

0 comments
Reverse Your Age

Cocktail: ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದಾದ ಅಥವಾ ಹಿಂತಿರುಗಿಸಬಹುದಾದ ಭವಿಷ್ಯದ ಭರವಸೆಯನ್ನು ನೀಡುವ ಹೊಸ ಆವಿಷ್ಕಾರಗಳು ನಿಮ್ಮ ಮುಂದಿದೆ. ಹೌದು, ಅಸಾಧ್ಯವೆಂಬುದೂ ಸಾಧ್ಯವಾಗುತ್ತಿದೆ.

ಹೌದು, ಹಾರ್ವರ್ಡ್‌ನ ವಿಜ್ಞಾನಿಗಳ ತಂಡವು ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿರುವ ರಾಸಾಯನಿಕ ಕಾಕ್‌ಟೈಲ್ ಅನ್ನು (Cocktail) ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ.

“ಕೆಮಿಕಲ್‌ ಇಂಡ್ನೂಸ್ಡ್ ರೀ ಪ್ರೋಗ್ರಾಮಿಂಗ್‌ ಟು ರಿವರ್ಸ್‌ ಸೆಲ್ಯುಲರ್‌ ಏಜಿಂಗ್‌’ ಶೀರ್ಷಿಕೆಯ ಅಧ್ಯಯನ ವರದಿಯನ್ನು ಏಜಿಂಗ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದ್ದು, ಅದರಲ್ಲಿ ಕಂಡುಬರುವ ತಂಡವು 6 ಕೆಮಿಕಲ್ ಕಾಕ್‌ಟೈಲ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಮನುಷ್ಯರು ಹಾಗೂ ಇಲಿಗಳ ಚರ್ಮದಲ್ಲಿರುವ ಕೋಶಗಳನ್ನು ಯೌವನಕ್ಕೆ ಮರಳಿಸಿದೆ.

ಈ ಕುರಿತು ಹಾರ್ವರ್ಡ್‌ ಸಂಶೋಧಕ ಡೇವಿಡ್‌ ಸಿಂಕ್ಲೇರ್‌ ಕೂಡ ಟ್ವಿಟರ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದು, ವಂಶವಾಹಿ ಚಿಕಿತ್ಸೆ ಮೂಲಕ ಯೌವನಕ್ಕೆ ಮರಳಲು ಸಾಧ್ಯವಿರುವುದನ್ನು ನಾವು ಈ ಸಂಶೋಧನೆಯನ್ನು ಕಂಡುಕೊಂಡಿದ್ದೇವೆ. ಇದಕ್ಕಾಗಿ ಕೆಮಿಕಲ್ ಕಾಕ್‌ಟೈಲ್‌ ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಮಾತ್ರೆಗಳನ್ನಾಗಿಯೂ ಪರಿವರ್ತಿಸಬಹುದು. ಪ್ರತಿ ಕಾಕ್ಟೈಲ್‌ನಲ್ಲಿ ವಿವಿಧ 5 ರಿಂದ 7 ರಾಸಾಯನಿಕ ಅಂಶಗಳನ್ನು ಒಳಗೊಂಡಿದ್ದು, ಈ ಕಾಕ್‌ಟೈಲ್‌ಗಳ ಅಭಿವೃದ್ಧಿಗಾಗಿ ಸತತ 3 ವರ್ಷಗಳಿಂದ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಜೊತೆಗೆ ಸಿಂಕ್ಲೇರ್ ಪ್ರಕಾರ “ಈ ಹೊಸ ಆವಿಷ್ಕಾರವು ಒಂದೇ ಮಾತ್ರೆಯೊಂದಿಗೆ ವಯಸ್ಸಾಗುವಿಕೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ನೀಡುತ್ತದೆ , ದೃಷ್ಟಿಯನ್ನು ಸುಧಾರಿಸುವುದರಿಂದ ಹಿಡಿದು ಹಲವಾರು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವವರೆಗೆ ಅನ್ವಯಿಸುತ್ತದೆ.” ಎನ್ನಲಾಗಿದೆ.

 

ಇದನ್ನು ಓದಿ: Madhya Pradesh: ಪತಿ ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟಿದ್ದ ಪತ್ನಿ ; ಗಂಡನ ‘ಅರ್ಧ ‘ ಕೆಜಿ ಟೊಮ್ಯಾಟೋ ನೋಡಿ ಪತ್ನಿ ವಾಪಸ್ ! 

You may also like

Leave a Comment