Home » Chanakya Niti: ಗಂಡ ತನ್ನ ಹೆಂಡತಿ ಜೊತೆ ಈ ಕೆಲಸ ಮಾಡಿದರೆ ಒಳ್ಳೆಯದಲ್ಲ!

Chanakya Niti: ಗಂಡ ತನ್ನ ಹೆಂಡತಿ ಜೊತೆ ಈ ಕೆಲಸ ಮಾಡಿದರೆ ಒಳ್ಳೆಯದಲ್ಲ!

1 comment
Chanakya Niti

Relationship: ಗಂಡ ಹೆಂಡತಿಯ ಸಂಬಂಧ ಎರಡು ದೇಹದಂತೆ ಇದ್ದರೂ ಆತ್ಮ ಒಂದೇ ಎಂಬ ಮಾತಿದೆ. ಚಾಣಕ್ಯರ ಪ್ರಕಾರ ಗಂಡ ತನ್ನ ಹೆಂಡತಿಗೆ ಇದನ್ನು ಮಾಡಬಾರದು, ಅಥವಾ ಅವಳ ಮುಂದೆ ಮಾತನಾಡಬಾರದು ಎಂಬ ವಿಷಯಗಳು ಇದೆ. ಅಂದರೆ ಪತಿ ಪತ್ನಿಯೊಂದಿಗೆ ಕೆಲವು ವಿಷಯ ಹಂಚಬಾರದು. ಹಂಚಿದರೆ ಬಹುಬೇಗ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ನಿಮ್ಮ ನಿಮ್ಮ ದೌರ್ಬಲ್ಯಗಳನ್ನು ನಿಮ್ಮ ಸಂಗಾತಿಗೆ ಹೇಳಬಾರದು. ಏಕೆಂದರೆ ದೌರ್ಬಲ್ಯದ ಕ್ಷಣದಲ್ಲಿ ಅಥವಾ ಜಗಳದಲ್ಲಿ ಇದನ್ನು ಬಳಕೆ ಮಾಡಬಹುದು. ಇದರಿಂದ ನಂಬಿಕೆ ಕಳೆದುಕೊಳ್ಳುವ ಭಯ, ಜೊತೆಗೆ ಅವಮಾನವಾದರೆ ಅದನ್ನು ಸಹಿಸುವ ಶಕ್ತಿ ಇರುವುದಿಲ್ಲ. ಹಾಗಾಗಿ ಇದನ್ನು ನಿಮ್ಮ ಹೆಂಡತಿಯ ಬಳಿ ಹೇಳಬೇಡಿ. ಭವಿಷ್ಯದಲ್ಲಿ ಕೆಟ್ಟದಾಗಿ ಮಾತನಾಡುವ ಸಂದರ್ಭಗಳು ಬಂದರೆ ಜಾಗರೂಕಾಗಿರಿ. ನೋವನ್ನು ಹೇಳುವ ಸಂದರ್ಭದಲ್ಲೂ ಈ ಮಾತನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಲಾಗಿದೆ.

ಇದನ್ನೂ ಓದಿ: Egg: ಕೋಳಿ ಮೊಟ್ಟೆ ಚೆನ್ನಾಗಿದೆಯೋ ಇಲ್ಲ ಹಾಳಾಗಿದೆಯೋ ಎಂದು ತಿಳಿಯಲು ಇಲ್ಲಿದೆ ಸಿಂಪಲ್ ಟ್ರಿಕ್ಸ್ !!

ಹಾಗೆನೇ ನೀವು ಮಾಡುವ ದಾನ ಕೂಡಾ ಗೊತ್ತಾಗಬಾರದು. ಬಲಗೈಯಲ್ಲಿ ದಾನ ಮಾಡಿದರೆ ಎಡಗೈಗೆ ಗೊತ್ತಾಗಬಾರದು ಎಂದು ಹೇಳಲಾಗುತ್ತದೆ. ಇದನ್ನು ನಿಮ್ಮ ಹೆಂಡತಿಗೂ ಹೇಳಬಾರದು ಎಂದು ಚಾಣಕ್ಯನ ನೀತಿ ಹೇಳುತ್ತದೆ. ಇದು ವಾದಕ್ಕೆ ಕಾರಣವಾಗಬಹುದು. ಮನಸ್ತಾಪ ಉಂಟಾಗಬಹುದು.

You may also like

Leave a Comment