Home » Vastu shastra: ಯಾವುದೇ ಕಾರಣಕ್ಕೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಇಟ್ರೆ ಮದುವೆಯೂ ಇಲ್ಲ, ದುಡ್ಡೂ ಕೈ ಸೇರಲ್ಲ !!

Vastu shastra: ಯಾವುದೇ ಕಾರಣಕ್ಕೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಇಟ್ರೆ ಮದುವೆಯೂ ಇಲ್ಲ, ದುಡ್ಡೂ ಕೈ ಸೇರಲ್ಲ !!

1 comment
Vastu Shastra

Vastu Shastra: ವಾಸ್ತು ಶಾಸ್ತ್ರದ (Vastu Shastra)ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ- ಸಮೃದ್ಧಿಯಾಗುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಅದೇ ರೀತಿ, ಮನೆಯಲ್ಲಿ ಯಾವುದೇ ವಸ್ತುವನ್ನೇ ಆದರೂ ಕೂಡ ವಾಸ್ತು ಪ್ರಕಾರ ಇಡಬೇಕು. ನಾವು ಮನೆಯಲ್ಲಿ ಇಡುವ ವಸ್ತುಗಳ ಸ್ಥಾನವು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ನೀವೇನಾದರೂ ಮಂಚದ ಕೆಳಗೆ ಈ ವಸ್ತುಗಳನ್ನು ಇಟ್ಟಿದ್ದರೆ ಮೊದಲು ತೆಗೆದುಬಿಡಿ!! ಇಲ್ಲದಿದ್ದರೆ ದಟ್ಟ ದಾರಿದ್ರ್ಯ ಕಾಡುವುದು ಎದುರಾಗುವುದು ಖಚಿತ!!

ಮಂಚದ ಕೆಳಗೆ ಯಾವ ವಸ್ತುಗಳನ್ನು ಇಡಬಾರದು? ಇದರಿಂದ ಆಗುವ ಪರಿಣಾಮಗಳೇನು??
* ಮಂಚದ ಕೆಳಗೆ ಪೆಟ್ಟಿಗೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಇಡುವ ಅಭ್ಯಾಸವಿದ್ದರೆ ಮೊದಲು ಅಲ್ಲಿಂದ ತೆಗೆದು ಬಿಡಿ! ಏಕೆಂದರೆ, ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ ಮಾತ್ರವಲ್ಲದೆ, ಈ ರೀತಿ ಚಿನ್ನ ಮತ್ತು ಬೆಳ್ಳಿ ಮಂಚದ ಕೆಳಗೆ ಇಟ್ಟರೆ ಆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗುತ್ತದೆ.
* ಮಂಚದ ಕೆಳಗೆ ಅಪ್ಪಿ ತಪ್ಪಿಯೂ ಆಹಾರವನ್ನು ಇಡಬೇಡಿ!! ಮಂಚದ ಕೆಳಗೆ ಆಹಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಡುವ ಪರಿಣಾಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಅಷ್ಟೇ ಅಲ್ಲದೆ, ಹಾಸಿಗೆಯ ಮೇಲೆ ಮಲಗಿರುವಾಗ ಕೆಟ್ಟ ಆಲೋಚನೆಗಳು ಹುಟ್ಟಬಹುದು.

* ಮಂಚದ ಕೆಳಗೆ ಕೆಲವು ಹಳೆಯ ಪೆಟ್ಟಿಗೆಗಳನ್ನು ಇಡಬಹುದು. ಆದರೆ ಈ ಪೆಟ್ಟಿಗೆಗಳಲ್ಲಿ ದೇವರ ಮೂರ್ತಿಇಲ್ಲವೇ ದೇವರ ಫೋಟೋಗಳನ್ನು ಇಡುವುದು ಒಳ್ಳೆಯದಲ್ಲ. ಇದರ ಜೊತೆಗೆ, ಸತ್ತ ಹಿರಿಯರ ಛಾಯಾಚಿತ್ರಗಳನ್ನು ಮಂಚದ ಕೆಳಗಿರುವ ಪೆಟ್ಟಿಗೆಗಳಲ್ಲಿ ಅಪ್ಪಿ ತಪ್ಪಿಯೂ ಇಡಬೇಡಿ. ಈ ತಪ್ಪು ನಿಮ್ಮಿಂದ ಆದರೆ, ಆರ್ಥಿಕ ಸಮಸ್ಯೆ ಉಂಟಾಗುವುದು ನಿಶ್ಚಿತ.
* ಮಂಚದ ಕೆಳಗೆ ನೀವೇನಾದರೂ ಹಣ ಇಡುತ್ತಿದ್ದರೆ, ಮೊದಲು ಈ ಅಭ್ಯಾಸ ನಿಲ್ಲಿಸಿ. ಈ ಅಭ್ಯಾಸದಿಂದ ಹೆಚ್ಚು ಆರ್ಥಿಕ ನಷ್ಟ ಉಂಟಾಗುವ ಸಂಭವವಿದೆ
* ನೀವೇನಾದರೂ ಮಂಚದ ಕೆಳಗೆ ಹಳೆಯ ಅಡುಗೆ ಸಾಮಾಗ್ರಿಗಳು ಇಡುತ್ತಿದ್ದರೆ, ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ, ಮಂಚದ ಕೆಳಗೆ ಜಾಗವಿದೆ ಎಂದು ಸಿಕ್ಕ ಸಿಕ್ಕ ಸಾಮಾನುಗಳನ್ನು ಇಡುವ ಮುನ್ನ ಎಚ್ಚರ ವಹಿಸಿ!! ಇಲ್ಲದಿದ್ದರೆ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: Actress Mrinal Navell: ಚಾನ್ಸ್ ಬೇಕಂದ್ರೆ ಇಡೀ ರಾತ್ರಿ ನನ್ನೊಂದಿಗೆ ಎಂಜಾಯ್ ಮಾಡ್ಬೇಕು- ಅಚ್ಚರಿ ಘಟನೆ ಬಿಚ್ಚಿಟ್ಟ ನಟಿ ಮೃಣಾಲ್

You may also like

Leave a Comment