Home » Vastu Tips: ವೈವಾಹಿಕ ಜೀವನ ಸುಖಮಯವಾಗಿರಬೇಕೆಂದರೆ ಮದುವೆಯ ಫೋಟೋ ಮನೆಯ ಈ ಜಾಗದಲ್ಲಿ ಇಡಬೇಡಿ!

Vastu Tips: ವೈವಾಹಿಕ ಜೀವನ ಸುಖಮಯವಾಗಿರಬೇಕೆಂದರೆ ಮದುವೆಯ ಫೋಟೋ ಮನೆಯ ಈ ಜಾಗದಲ್ಲಿ ಇಡಬೇಡಿ!

1 comment
Vastu Tips

Vastu tips: ವಾಸ್ತು ಶಾಸ್ತ್ರದ (Vastu tips)ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ-ಸಮೃದ್ಧಿಯಾಗುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಹೀಗಾಗಿ, ಮನೆಯ ಪ್ರತಿ ಕೋಣೆಯ(Rooms)ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ನಿರ್ಮಿಸುವುದು ಕೂಡ ಮುಖ್ಯವಾಗುತ್ತದೆ. ಸಮಸ್ಯೆ ಯಾರಿಗಿಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರದ್ದೇ ಆದ ತರಹೇವಾರಿ ಸಮಸ್ಯೆಗಳಿರುತ್ತವೆ. ಒಮ್ಮೆ ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎಂದು ಪರದಾಡುತ್ತಿರುತ್ತಾರೆ. ನಮ್ಮ ಅದೆಷ್ಟೋ ತೊಂದರೆಗಳಿಗೆ ಪರಿಹಾರವೆಂಬ ಕೀಲಿಕೈ ಜ್ಯೋತಿಷ್ಯ ಶಾಸ್ತ್ರ ಹಾಗೂ ನಮ್ಮ ವಾಸ್ತುವಿನಲ್ಲಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಾವು ಮಾಡುವ ಕೆಲವು ತಪ್ಪು ಕೆಲಸಗಳು ವಾಸ್ತು ದೋಷಗಳನ್ನು ಉಂಟುಮಾಡುವ ಜೊತೆಗೆ ದಾಂಪತ್ಯ ಜೀವನಕ್ಕೆ ಸಮಸ್ಯೆ ಉಂಟು ಮಾಡಬಹುದು.

ಹೆಚ್ಚಿನವರು ತಮ್ಮ ಮದುವೆಯ ಫೋಟೋಗಳನ್ನು ಮನೆಯಲ್ಲಿಯೇ ಚೌಕಟ್ಟಿನಲ್ಲಿ ಇಡುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ಕೂಡ ಹೀಗೆ ಮಾಡಿದ್ದರೆ ಆ ಮದುವೆಯ ಫೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಉತ್ತಮ. ದಂಪತಿಗಳ ನಡುವೆ ಸಮಸ್ಯೆಗಳು ಹೆಚ್ಚಾಗಲಿದ್ದು, ಮದುವೆಯ ಫೋಟೋಗಳನ್ನು ಇರಿಸಲು ಮಲಗುವ ಕೋಣೆಯ ಪೂರ್ವ ದಿಕ್ಕು ಉತ್ತಮವಾಗಿದೆ.

# ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ
ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ಪತಿ ಪತ್ನಿಯರಿಬ್ಬರು ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಹೆಚ್ಚಿನ ಆಯಾಸ ಉಂಟಾಗಲಿದ್ದು, ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ದಾಂಪತ್ಯ ಜೀವನಕ್ಕೆ ವಿವಾಹಿತ ದಂಪತಿಗಳು ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು. ಇದರಿಂದಾಗಿ ದಂಪತಿಗಳ ನಡುವಿನ ಸಂಬಂಧ ಗಟ್ಟಿಯಾಗಿರುವ ಜೊತೆಗೆ ದಾಂಪತ್ಯ ಜೀವನದಲ್ಲಿ ಸುಖ ಸಂತೋಷದಿಂದ ಕೂಡಿರುತ್ತದೆ.

# ಮಲಗುವ ಕೋಣೆ ಸ್ವಚ್ಛವಾಗಿರಬೇಕು
ಮಲಗುವ ಕೋಣೆ ಸ್ವಚ್ಛವಾಗಿದ್ದು, ಸುಖಮಯ ದಾಂಪತ್ಯ ಜೀವನಕ್ಕಾಗಿ, ಮಲಗುವ ಕೋಣೆಯಲ್ಲಿ ಪುಸ್ತಕಗಳು, ಲ್ಯಾಪ್‌ಟಾಪ್‌ನಂತಹ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಡದಿರುವುದು ಉತ್ತಮ. ಮಲಗುವ ಕೋಣೆಯಲ್ಲಿ ಸೂಕ್ಷ್ಮವಾದ ಹೂವುಗಳನ್ನು ಇಟ್ಟರೆ ಅದು ದಂಪತಿಗಳ ನಡುವಿನ ಬಾಂಧವ್ಯ ಚೆನ್ನಾಗಿರುತ್ತದೆ.

# ತಪ್ಪು ದಿಕ್ಕಿನಲ್ಲಿ ಹಾಸಿಗೆ
ವಾಸ್ತು ಪ್ರಕಾರ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧ ಹೊಂದಿದೆ. ಮದುವೆಯಾದ ದಂಪತಿಗಳ ಜೀವನ ಸುಖಮಯವಾಗಿರಬೇಕಾಗಿದರೆ ದಂಪತಿಗಳ ಹಾಸಿಗೆ ವಾಯುವ್ಯ ಮತ್ತು ಉತ್ತರ ದಿಕ್ಕಿನಲ್ಲೇ ಇರಬೇಕು. ಇದರಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಹಾಗೂ ಸಂತೃಪ್ತಿಯಿಂದ ಕೂಡಿರುತ್ತದೆ.

ಇದನ್ನೂ ಓದಿ: Mangli Marriage: ʼಕಣ್ಣೇ ಅದಿರಿಂದಿʼ ಹಿಟ್‌ ಸಾಂಗ್‌ ಫೇಮ್‌ ಸಿಂಗರ್‌ ಮಂಗ್ಲಿ ಮದುವೆ!!! ಹುಡುಗ ಯಾರು ಗೊತ್ತಾ? ಗಾಯಕಿ ಈ ಬಗ್ಗೆ ಏನಂದ್ರು?

You may also like

Leave a Comment