Home » Monalisa Painting: ಮೋನಾಲಿಸಾ ಯಾರು? : ನೂರಾರು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ

Monalisa Painting: ಮೋನಾಲಿಸಾ ಯಾರು? : ನೂರಾರು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ

0 comments
Monalisa Painting

Monalisa Painting: ಸುಂದರವಾದ ಸ್ಟೈಲ್ ಹೊಂದಿರುವ ಸ್ತ್ರೀ ಆಕೃತಿಯ ಚಿತ್ರವೇ ಈ ಮೊನಾಲಿಸಾ. ಸಾಮಾನ್ಯವಾಗಿ ಟಿವಿ ಗಳಲ್ಲಿ ಮೋನಾಲಿಸಾ ಚಿತ್ರವನ್ನು ನೋಡಿರುತ್ತೇವೆ. ಆಕೆಯ ಚಿತ್ರವನ್ನು ನೋಡಿದರೆ ಒಂದೊಂದು ಸಲ ಒಂದೊಂದು ರೀತಿ ಕಾಣುತ್ತದೆ. ಕೆಲವೊಮ್ಮೆ ಮುಗುಳ್ಳಗುವುದು, ಕೆಲವೊಮ್ಮೆ ಬೇಸರದಲ್ಲಿರುವಂತೆ ಕಂಡು ಬರುತ್ತದೆ. ಅಸಲಿಗೆ ಯಾರು ಈ ಮೊನಾಲಿಸಾ? ಇದು ನೂರಾರು ವರ್ಷಗಳಿಂದ ಸಂಶೋಧಕರಿಗೆ ಉತ್ತರಿಸದ ಪ್ರಶ್ನೆಯಾಗಿಯೇ ಉಳಿದಿದೆ.

ಮೊನಾಲಿಸಾ ಚಿತ್ರವನ್ನು ಇಟಾಲಿಯನ್ ವಿಜ್ಞಾನಿ ಲಿಯೊನಾರ್ಡೊ ಡಾ ವಿನ್ಸಿ ಚಿತ್ರಿಸಿದ್ದಾರೆ. ಆ -ಚಿತ್ರದಲ್ಲಿನ ಮೂಲ ಮೋನಾಲಿಸಾ ಯಾರು? ಶತಮಾನಗಳಿಂದ ಸಂಶೋಧಕರನ್ನು ಗೊಂದಲಕ್ಕೀಡಾದ ಪ್ರಶ್ನೆಯಾಗಿದೆ.

ಮೋನಾಲಿಸಾ ಅವರ ನಿಜವಾದ ಹೆಸರು ಲಿಸಾ ಡೆಲ್ ಜಿಯೊಕೊಂಡೊ. ಅವಳು ಇಟಲಿಯ ಫ್ಲಾರೆನ್ಸ್‌ನ ರೇಷ್ಮೆ ವ್ಯಾಪಾರಿ ಗೆರಾರ್ಡಿಯನ್ನು ಮದುವೆಯಾದಳು. ಆಗ ಆಕೆಗೆ 15 ವರ್ಷ ವಯಸ್ಸಾಗಿತ್ತು, ತನ್ನ ಎರಡನೇ ಮಗನ ಜನನದ ಸಂದರ್ಭದಲ್ಲಿ ಈಕೆಯ ಪೇಂಟಿಂಗ್ ಮಾಡಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಇದಕ್ಕೂ ಸರಿಯಾದ ಆಧಾರವಿಲ್ಲ.

ಮೋನಾಲಿಸಾ ವಿಶ್ವದ ಅತ್ಯಂತ ಪ್ರಸಿದ್ಧ ಚಿತ್ರವಾಗಿದ್ದು. ಡಾ ವಿನ್ಸಿ ಇದನ್ನು 1503-1506 ರ ನಡುವೆ ಚಿತ್ರಿಸಿದನೆಂದು ಹೇಳಲಾಗುತ್ತದೆ. ಇದು ಪಾಪ್ಟರ್ ಫಲಕದ ಮೇಲೆ ತೈಲ 3 ವರ್ಣಚಿತ್ರವಾಗಿದೆ. ಈ 3 ಚಿತ್ರಕಲೆಗಾಗಿ ದಾಳಿಗಳೂ ನಡೆದವು ಫ್ರಾನ್ಸ್ ರಾಜ ಫ್ರಾನ್ಸಿಸ್ ಈ ವರ್ಣಚಿತ್ರವನ್ನು -ಸ್ವಾಧೀನಪಡಿಸಿಕೊಂಡ ಮತ್ತು ಪ್ಯಾರಿಸ್ನರಿ ಲೌವೆ ಮ್ಯೂಸಿಯಂನಲ್ಲಿ ಈ ಚಿತ್ರವನ್ನು ಶಾಶ್ವತ ಪ್ರದರ್ಶನಕ್ಕೆ ಇರಿಸಿದ್ದ.

1950 ರ ದಶಕದ ಅಂತ್ಯದಲ್ಲಿ ಕೆಲವು ವಿಧ್ವಂಸಕರಿಂದ ಮೊನಾಲಿಸಾ ಚಿತ್ರ ಸ್ವಲ್ಪ ಹಾನಿಗೊಳಗಾಯಿತು. ಅದಕ್ಕಾಗಿಯೇ ಆಕೆಯ ಪೇಂಟಿಂಗ್ ಅನ್ನು ಪ್ರಸ್ತುತ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಮೋನಾಲಿಸಾ ಅವರ ತುಟಿಗಳ ಮೇಲಿನ ನಗುವನ್ನು ನೋಡಲು ಲಕ್ಷಾಂತರ ಜನರು ಪ್ರತಿ ವರ್ಷ ಪ್ಯಾರಿಸ್‌ಗೆ ಬರುತ್ತಾರೆ.

ಮೋನಾಲಿಸಾಗೆ ಹುಬ್ಬುಗಳು ಏಕೆ ಇಲ್ಲ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಪ್ಯಾಸ್ಕಲ್ ಕಾಟ್ ಎಂಬ ಎಂಜಿನಿಯರ್ ಈ ರಹಸ್ಯವನ್ನು ಪರಿಹರಿಸಿದರು. ಡಾ ವಿನ್ಸಿಯ ವರ್ಣಚಿತ್ರವು ಮೋನಾಲಿಸಾಳ ಹುಬ್ಬುಗಳನ್ನು ಹೊಂದಿದೆ. ಕಾಲಾನಂತರದಲ್ಲಿ ಅವರು ಚಿತ್ರವನ್ನು ಸ್ವಚ್ಛಗೊಳಿಸುತ್ತಿದ್ದಂತೆ ಕಣ್ಮರೆಯಾಯಿತು. ಮೊನಾಲಿಸಾ ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಣ್ಣಿನ ಸುತ್ತಲಿನ ಬಿರುಕುಗಳು ಸ್ವಲ್ಪಮಟ್ಟಿಗೆ ಮಾಯವಾದಂತೆ ಕಾಣಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮೋನಾಲಿಸಾ ಚಿತ್ರದ ಬೆಲೆ ಎಷ್ಟು ಗೊತ್ತಾ?

ಚಿತ್ರಕಲೆಗೆ ಒಂದು ಡಾಲರ್ ಅಂಕಿ ಅಂಶವು ಹರಾಜಿಗೆ -ಹಾಕಿದರೆ ಅದನ್ನು 5700 ಮಿಲಿಯನ್‌ಗಿಂತಲೂ ಹೆಚ್ಚು (ಭಾರತೀಯ ಕರೆನ್ಸಿಯಲ್ಲಿ 57,94,60,00,000) ಹಾಕುತ್ತದೆ. ಇದು ತುಂಬಾ ಅಮೂಲ್ಯವಾಗಿದೆ.

You may also like

Leave a Comment