ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮನೆಯ ಕೆಲ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯಲ್ಲಿ ರೋಗ, ಅಸಂತೋಷ ಮತ್ತು ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿಯೂ ನೆಲೆಸುವುದಿಲ್ಲ ಎಂಬ ನಂಬಿಕೆ ಇದೆ.
ಹಿಂದಿನ ಕಾಲದ ನಂಬಿಕೆಗೂ ಇಂದಿನ ಕಾಲದ ಜೀವನಕ್ಕೂ ಹೋಲಿಸಲು ಹೋದರೆ ಉತ್ತರ ಶೂನ್ಯ ಆಗಿರುತ್ತದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಜನರು ತಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯ ನಂಬಿಕೆಯೇ ಅವರ ಜೀವಾಳ ಆಗಿತ್ತು ಆದರೆ ಈಗಿನ ಕಾಲದವರರು ತಂತ್ರಜ್ಞಾನನಕ್ಕೆ ಒಗ್ಗಿಕೊಂಡರು ಸಹ ನಂಬಿಕೆಗಳು ಯಾವುತ್ತೂ ಸುಳ್ಳಾಗುವುದಿಲ್ಲ. ಜೀವನ ಶೈಲಿ ಬದಲಾದರೂ ನಂಬಿಕೆಗಳು ಸುಳ್ಳಾಗಳು ಸಾಧ್ಯವಿಲ್ಲ. ಇದಕ್ಕೆ ನಮ್ಮ ಹಿರಿಯರೇ ಸಾಕ್ಷಿ.
ಹಾಗೆಯೇ ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ, ನಿರ್ದಿಷ್ಟ ಸಮಯದಲ್ಲಿ ಮಾಡಬೇಕಾದ ಅನೇಕ ಕೆಲಸಗಳಿವೆ. ಕೆಲವು ಚಟುವಟಿಕೆಗಳನ್ನು ಸಂಜೆ ಅಥವಾ ಸೂರ್ಯಾಸ್ತದ ನಂತರ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ಹಾಗೆಯೇ ವಾಸ್ತು ಪ್ರಕಾರ ಮನೆಯ ಕೆಲವು ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಕನ್ನಡಿ ಹಾಕಬೇಡಿ ಎಂಬ ಸಲಹೆ ನೀಡಲಾಗಿದೆ. ಅಲ್ಲದೆ ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಫಲಿತಾಂಶವನ್ನು ಪಡೆಯದಿದ್ದರೆ, ಮನೆಯಲ್ಲಿ ವಾಸ್ತು ದೋಷಗಳಿವೆ ಎಂದು ಅರಿತುಕೊಳ್ಳಿ ಆದ್ದರಿಂದ ಮನೆಯಲ್ಲಿ ಎಲ್ಲವನ್ನೂ ವಾಸ್ತು ಪ್ರಕಾರ ಇಡಬೇಕು.
ಮುಖ್ಯವಾಗಿ ಹೆಣ್ಣು ಇಲ್ಲದ ಮನೆ ಮತ್ತು ಕನ್ನಡಿ ಇಲ್ಲದ ಮನೆಯೇ ಇಲ್ಲ. ವಾಸ್ತು ಪ್ರಕಾರ ಕನ್ನಡಿಯನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದು ಅವಶ್ಯಕ. ಇಲ್ಲದಿದ್ದರೆ ಮನೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಮನೆಯಲ್ಲಿ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ತಜ್ಞರು ಈ ರೀತಿ ಸಲಹೆ ನೀಡಿದ್ದಾರೆ.
- ಮುಖ್ಯವಾಗಿ ಮನೆಯಲ್ಲಿ ಕನ್ನಡಿಯನ್ನು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಅದೇ ಸಮಯದಲ್ಲಿ, ಮಂಜು ಕನ್ನಡಿಯನ್ನು ಮನೆಯಲ್ಲಿ ಇಡಬಾರದು. ಇದರಲ್ಲಿನ ಮುಖ ನೋಡಿದರೆ ಆ ವ್ಯಕ್ತಿಯ ವ್ಯಕ್ತಿತ್ವ ಕೆಡುತ್ತದೆ ಎಂಬ ನಂಬಿಕೆ ಇದೆ.
- ಅದಲ್ಲದೆ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮತ್ತು ಕಲಹಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಮನುಷ್ಯರಲ್ಲಿ ಭಯದ ಸ್ಥಿತಿಯನ್ನು ಸೃಷ್ಟಿಸುತ್ತದೆ. ಮತ್ತೊಂದೆಡೆ, ಮಲಗುವ ಹಾಸಿಗೆಯ ಮುಂದೆ ಕನ್ನಡಿ ಇದ್ದರೆ, ಅದನ್ನು ತೆಗೆದುಹಾಕಿ ಅಥವಾ ಮಲಗುವಾಗ ಬಟ್ಟೆಯಿಂದ ಮುಚ್ಚಿ.
- ಒಡೆದ ಕನ್ನಡಿಯನ್ನು ಯಾವತ್ತೂ ಮನೆಯಲ್ಲಿ ಇಡಬೇಡಿ. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯ ಸಂವಹನ ಪ್ರಾರಂಭವಾಗುತ್ತದೆ. ಹಠಾತ್ತನೆ ಒಡೆದ ಕನ್ನಡಿಯಿಂದಾಗಿ ಮನೆ ಅಥವಾ ಕುಟುಂಬದಲ್ಲಿ ಬರುವ ತೊಂದರೆಗಳು ದೂರವಾಗುತ್ತವೆ. ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ, ಅದನ್ನು ತೆಗೆದುಹಾಕುವುದು ಸೂಕ್ತ.
- ಮನೆ ಅಥವಾ ಕಚೇರಿಯ ದಕ್ಷಿಣ, ಪಶ್ಚಿಮ ಮತ್ತು ಆಗ್ನೇಯ ಗೋಡೆಯ ಮೇಲೆ ಕನ್ನಡಿಯನ್ನು ಎಂದಿಗೂ ಇಡಬಾರದು. ಇದರಿಂದ ಅಶುಭ ಬರಲಾರಂಭಿಸುತ್ತದೆ. ಹೀಗಾಗಿ, ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ, ತಕ್ಷಣ ಅದನ್ನು ತೆಗೆದುಹಾಕಿ. ಕೆಲವು ಕಾರಣಗಳಿಗಾಗಿ, ಈ ದಿಕ್ಕುಗಳ ಗೋಡೆಗಳಿಂದ ನೀವು ಕನ್ನಡಿಗಳನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ, ನಂತರ ಅವುಗಳನ್ನು ಬಟ್ಟೆಯಿಂದ ಮುಚ್ಚಿ.
ಹೌದು ಈ ಮೇಲಿನಂತೆ ನಿಮ್ಮ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಕನ್ನಡಿಯ ಸ್ಥಾನ ದ ಬಗ್ಗೆ ಎಚ್ಚರ ವಹಿಸಿ. ಕನ್ನಡಿ ನಮ್ಮ ಪ್ರತಿರೂಪ ದ ಜೊತೆಗೆ ಜೀವನದ ಪ್ರತಿಬಿಂಬ ದ ಸೂಚನೆ ನೀಡಬಲ್ಲದು ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.
