Home » Cockroach Tips: ಜಿರಳೆಗಳನ್ನು ಮನೆಯಿಂದ ಓಡಿಸಲು ಈ ಒಂದು ಎಲೆ ಸಾಕು!

Cockroach Tips: ಜಿರಳೆಗಳನ್ನು ಮನೆಯಿಂದ ಓಡಿಸಲು ಈ ಒಂದು ಎಲೆ ಸಾಕು!

0 comments

Cockroach Tips: ಮನೆಯ ಮೂಲೆ ಮೂಲೆಯಲ್ಲಿ ಜಿರಳೆಗಳ ಕಾಟಕ್ಕೆ ಸೋತು, ಅವುಗಳನ್ನು ಓಡಿಸಲು ನೀವು ಈಗಾಗಲೇ ಸಾಕಷ್ಟು ಔಷಧಿ, ರಾಸಾಯನಿಕ ಸಿಂಪಡಿಸಿ ಸೋತು ಹೋಗಿರಬಹುದು. ಆದ್ರೆ ಈ ಒಂದು ಟಿಪ್ಸ್ ಮೂಲಕ ಯಾವುದೇ ಖರ್ಚು ಇಲ್ಲದೇ ಕೇವಲ ಒಂದು ಎಲೆಯ ಮೂಲಕ ಸುಲಭವಾಗಿ ಜಿರಳೆ (Cockroach) ಓಡಿಸಬಹುದು.

ಜಿರಳೆ ಓಡಿಸೋದು ಹೇಗೆ?

ನೀವು ಬೇ ಎಲೆಯ ಮೂಲಕ ಜಿರಳೆ ಓಡಿಸಬಹುದು. ಬೇ ಎಲೆಯ ಸಹಿಸಲಾರದ ಬಲವಾದ ನೈಸರ್ಗಿಕ ವಾಸನೆಯನ್ನು ಜಿರಳೆಗಳು ಸಹಿಸುವುದಿಲ್ಲ ತಕ್ಷಣವೇ ಓಡಿಹೋಗುತ್ತವೆ. ಈ ವಾಸನೆಯು ಜಿರಳೆಗಳು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಈ ಟಿಪ್ಸ್ ಬಳಸುವುದರಿಂದ ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ.

• ನೀವು ಒಣಗಿದ ಬೇ ಎಲೆ ಎಲೆಗಳನ್ನು ಅಡುಗೆಮನೆಯ ಸಿಂಕ್ ಅಡಿಯಲ್ಲಿ, ಕಪಾಟುಗಳಲ್ಲಿ, ಅಂಗಡಿ ಕೊಠಡಿಗಳಲ್ಲಿ ಮತ್ತು ಜಿರಳೆಗಳು ಹೆಚ್ಚು ಓಡಾಡುವ ಮೂಲೆಯಲ್ಲಿ ಇಡಬೇಕು.

• ಆಥವಾ ಒಣಗಿದ ಬೇ ಎಲೆಗಳನ್ನು ಒಣಗಿಸಿ ಅದನ್ನು ಪುಡಿ ಮಾಡಿ, ಪುಡಿಯನ್ನು ಜಿರಳೆಗಳು ಹೊರಬರುವ ಸ್ಥಳಗಳಲ್ಲಿ ಸಿಂಪಡಿಸಬೇಕು.

• ಇನ್ನೊಂದು ವಿಧಾನವೆಂದರೆ ಬೇ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ನೀರು ತಣ್ಣಗಾದ ನಂತರ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಮೂಲೆಗಳಲ್ಲಿ ಸಿಂಪಡಿಸಬೇಕು. ಇದು ಜಿರಳೆಗಳನ್ನು ಓಡಿಸುವ ಜೊತೆಗೆ ಮನೆಯನ್ನು ಉತ್ತಮ ಪರಿಮಳ ನೀಡುತ್ತೆ.

ಇದನ್ನೂ ಓದಿ:Cricket: ‘T-20 I’ ನಲ್ಲಿ ನಂ.1 ಸ್ಥಾನ ಪಡೆದ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ

ಈ ರೀತಿ ಕೆಲವು ವಾರಗಳವರೆಗೆ ಮಾಡಿದಲ್ಲಿ ಜಿರಳೆಗಳ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಅದಲ್ಲದೆ ಬೇ ಎಲೆ ಜಿರಳೆಗಳನ್ನು ಮಾತ್ರವಲ್ಲದೆ ಇರುವೆಗಳು ಮತ್ತು ಇತರ ಸಣ್ಣ ಕೀಟಗಳನ್ನು ಮನೆಯೊಳಗೆ ಪ್ರವೇಶಿಸದಂತೆ ಮಾಡುತ್ತೆ.

You may also like