ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೆ ಎಲ್ಲ ವ್ಯವಹಾರ ವಹಿವಾಟು ನಡೆಸಬಹುದಾಗಿದ್ದು, ಕೆಲಸದ ನಡುವೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಶಾಪಿಂಗ್ ಮಾಡಬಹುದು. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿ ಕೊಟ್ಟಿವೆ.
ನೀವು SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಶುಭ ಸುದ್ದಿ ನಿಮಗಾಗಿ ಕಾದಿವೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ವಹಿವಾಟು ಮಾಡಿದರೆ ಬರೋಬ್ಬರಿ ರೂ.25,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ನೀವು ಮೊಬೈಲ್ ಕೊಳ್ಳುವ ಯೋಜನೆ ಹಾಕಿದ್ದರೆ, ಅದರಲ್ಲಿ ಕೂಡ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದರೆ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ ನಿಮಗೆ ಸಿಹಿ ಸುದ್ದಿಯೊಂದು ಕಾದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಕ್ರೆಡಿಟ್ ಕಾರ್ಡ್ ವಿಭಾಗವು SBI ಕಾರ್ಡ್ ಮತ್ತು ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ 27.5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ.
ದಸರಾ, ದೀಪಾವಳಿ ಮಾರಾಟ ಇಲ್ಲವೇ ಬೇರೆ ಯಾವುದೇ ಸಂದರ್ಭದಲ್ಲಿ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳು ನಡೆಸುವ ಮಾರಾಟದ ಮೇಲೆ ಗರಿಷ್ಠ 10 ಪ್ರತಿಶತ ರಿಯಾಯಿತಿ ಇಲ್ಲವೇ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ನಿಮ್ಮದಾಗಿಸಿ ಕೊಳ್ಳಬಹುದು. ನೀವು 27.5 ಪ್ರತಿಶತ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ.
SBI ಕಾರ್ಡ್ ತಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ಸ್ಯಾಮ್‌ಸಂಗ್ ಉತ್ಪನ್ನಗಳ ಖರೀದಿಗೆ 27.5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುವ ಮೂಲಕ ಗ್ರಾಹಕರಿಗೆ ಆಫರ್ ನೀಡಿದೆ. ಈ ಕೊಡುಗೆಯು Paytm SBI ಕಾರ್ಡ್‌ಗಳು, ಕ್ಯಾಶ್‌ಬ್ಯಾಕ್ ಕಾರ್ಡ್‌ಗಳು, ಕಾರ್ಪೊರೇಟ್ ಕಾರ್ಡ್‌ಗಳನ್ನು ಹೊರತುಪಡಿಸಿ ಎಲ್ಲಾ SBI ಕಾರ್ಡ್‌ಗಳಿಗೆ ಅನ್ವಯವಾಗುತ್ತವೆ.
ಒಂದು ಕಾರ್ಡ್‌ನಲ್ಲಿ ಗರಿಷ್ಠ ರೂ.25,000 ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಆಫರ್ 31ನೇ ಡಿಸೆಂಬರ್ 2022 ರಂದು ಮುಗಿಯಲಿದೆ. ಈ ಆಫರ್ ಮೂಲಕ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ಶೇಕಡಾ 27.5 ಕ್ಯಾಶ್‌ಬ್ಯಾಕ್ ಪಡೆಯಲು ಬಯಸುವ ಗ್ರಾಹಕರು ಈ ವಿಚಾರವನ್ನು ಗಮನಿಸಬೇಕು.
ಈ ಕೊಡುಗೆಯು EMI ವಹಿವಾಟುಗಳಿಗೆ ಮಾತ್ರ ಅನ್ವಯವಾಗಲಿದ್ದು, ಅಲ್ಲದೆ, 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ EMI ಆಯ್ಕೆಯನ್ನು ಆರಿಸಿಕೊಂಡವರಿಗೆ ಮಾತ್ರ ಈ ಕೊಡುಗೆಯ ಸದುಪಯೋಗ ಪಡಿಸಿಕೊಳ್ಳಬಹುದು. ಹೀಗಾಗಿ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿ, ಸೌಂಡ್ ಬಾರ್, ಎಸಿ, ಡಿಶ್‌ವಾಶರ್‌ನಂತಹ ಉತ್ಪನ್ನಗಳನ್ನು ಖರೀದಿಸುವವರು ಶೇಕಡಾ 27.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.
SBI ಕಾರ್ಡ್ ಹೆಚ್ಚಾಗಿ ಆನ್‌ಲೈನ್ ಶಾಪಿಂಗ್ ಜೊತೆಗೆ ಆನ್‌ಲೈನ್ ವಹಿವಾಟುಗಳನ್ನು ಮಾಡುವವರಿಗೆ ವಿಶೇಷ ಕ್ಯಾಶ್‌ಬ್ಯಾಕ್ SBI ಕಾರ್ಡ್ ಅನ್ನು ಒದಗಿಸುತ್ತಿದೆ. ಆನ್‌ಲೈನ್ ವಹಿವಾಟಿನ ಮೇಲೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದ್ದು ಮಾರ್ಚ್ 2023 ರ ಮೊದಲು ಕ್ಯಾಶ್‌ಬ್ಯಾಕ್ SBI ಕಾರ್ಡ್ ತೆಗೆದುಕೊಂಡರೆ, ಮೊದಲ ವರ್ಷಕ್ಕೆ ಯಾವುದೇ ವಾರ್ಷಿಕ ಶುಲ್ಕಗಳು ಇರದು. ಆ ಬಳಿಕ ವಾರ್ಷಿಕ ನವೀಕರಣ ಶುಲ್ಕ ರೂ.999 ಪಾವತಿಸಬೇಕಾಗುತ್ತದೆ.
ಆನ್‌ಲೈನ್ ವಹಿವಾಟಿನ ಮೇಲೆ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್, ಇತರ ವಹಿವಾಟುಗಳ ಮೇಲೆ ಶೇಕಡಾ 1 ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಮಾಸಿಕ ಸ್ಟೇಟ್‌ಮೆಂಟ್ ಸೈಕಲ್‌ನಲ್ಲಿ ಗರಿಷ್ಠ ರೂ.10,000 ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಮನೆ ಬಾಡಿಗೆ ಪಾವತಿ, ಇಂಧನ ಖರೀದಿ, ವ್ಯಾಲೆಟ್ ಠೇವಣಿ, ವ್ಯಾಪಾರಿ ಇಎಂಐ, ನಗದು ಮುಂಗಡ, ಬ್ಯಾಲೆನ್ಸ್ ವರ್ಗಾವಣೆ, ಎನ್‌ಕ್ಯಾಶ್, ಫ್ಲೆಕ್ಸಿಪೇ ಇತ್ಯಾದಿಗಳಲ್ಲಿ ಕ್ಯಾಶ್‌ಬ್ಯಾಕ್ ಅವಕಾಶ ದೊರೆಯದು.
ಈ ಕೊಡುಗೆಯು ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾತ್ರ ದೊರೆಯಲಿದ್ದು,ನೀವು ಯಾವುದೇ ಸ್ಟೋರ್‌ನಲ್ಲಿ ಈ ಆಫರ್ ಅನ್ನು ಪಡೆಯಲು ಬಯಸಿದರೆ, ಆ ಸ್ಟೋರ್‌ನಲ್ಲಿ 27.5 ಪ್ರತಿಶತ ಕ್ಯಾಶ್‌ಬ್ಯಾಕ್ ಆಫರ್ ದೊರೆಯಲಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಆಫರ್‌ನ ನಿಯಮಗಳು ಮತ್ತು ಷರತ್ತುಗಳನ್ನು SBI ಕಾರ್ಡ್ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.
