Home » Astro Tips: ಹೊಸ ವರ್ಷಕ್ಕೆ ಈ ಗಿಫ್ಟ್‌ಗಳನ್ನು ಖಂಡಿತಾ ನೀಡಬೇಡಿ; ದಾರಿದ್ರ್ಯ ಬರುತ್ತೆ, ಹುಷಾರ್‌!!!

Astro Tips: ಹೊಸ ವರ್ಷಕ್ಕೆ ಈ ಗಿಫ್ಟ್‌ಗಳನ್ನು ಖಂಡಿತಾ ನೀಡಬೇಡಿ; ದಾರಿದ್ರ್ಯ ಬರುತ್ತೆ, ಹುಷಾರ್‌!!!

by Mallika
1 comment
Astro Tips

Astro Tips: ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್‌ ಕೊಡುವುದು ಕೂಡಾ ಚಾಲ್ತಿಯಲ್ಲಿದೆ. ಹಾಗಾಗಿ ಇಲ್ಲಿ ನಾವು ನಿಮಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ವಸ್ತುಗಳನ್ನು ಹೊಸ ವರ್ಷಕ್ಕೆ ಗಿಫ್ಟ್‌ ರೂಪದಲ್ಲಿ ನೀಡಬೇಡಿ ಎನ್ನುವುದರ ಕುರಿತು ಮಾಹಿತಿ ನೀಡಲಿದ್ದೇವೆ. ಬನ್ನಿ ಅದೇನು ತಿಳಿಯೋಣ.

Astro Tips

ಹೊಸ ವರ್ಷಕ್ಕಾಗಲಿ, ಯಾವುದೇ ಸಂದರ್ಭದಲ್ಲಾಗಲಿ ಯಾರಿಗೂ ಕೂಡಾ ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಿ. ಕಪ್ಪು ಬಣ್ಣದ ಉಡುಗೊರೆಯು ನಕಾರಾತ್ಮಕತೆಯ ಪ್ರತೀಕ ಎನ್ನಲಾಗುತ್ತದೆ.
ತೀಕ್ಷ್ಣವಾದ, ಮೊನಚಾಗಿರುವ ವಸ್ತುಗಳನ್ನು ನೀಡಬೇಡಿ.
ದೇವ-ದೇವತೆಗಳ ವಿಗ್ರಹವನ್ನು ಉಡುಗೊರೆಯಾಗಿ ನೀಡುವ ಪರಿಪಾಠ ಕೆಲವರಿಗೆ ಇರುತ್ತದೆ. ಆದರೆ ಇದು ನಿಮ್ಮ ಅದೃಷ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಂಭವ ಹೆಚ್ಚು
ಕರವಸ್ತ್ರದಲ್ಲಿ ಏನಾದರೂ ಡಿಸೈನ್‌ ಮಾಡಿ ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಿ. ಇದು ನಿಮ್ಮ ಸಂಬಂಧವನ್ನು ಕೆಡಿಸುತ್ತದೆ.

ಇದನ್ನು ಓದಿ: Romantic Places: ಇದು ವಿಶ್ವದ ಅತ್ಯಂತ ರೋಮ್ಯಾಂಟಿಕ್‌ ಸ್ಥಳ! ಒಮ್ಮೆ ಹೋದರೆ ಖಂಡಿತಾ ಮರೆಯಲ್ಲ!!!
ಸಾಲ ಮಾಡಿ ಉಡುಗೊರೆ ಕೊಡುವುದನ್ನು ತಪ್ಪಿಸಿ. ಸಾಲ ಮಾಡಿದ ಗಿಫ್ಟ್‌ ನೀಡಿದರೆ ಪಡೆದುಕೊಂಡವರಿಗೆ ಅದು ಒಳ್ಳೆಯದಲ್ಲ.
ನೀವು ಉಪಯೋಗ ಮಾಡಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಅಂದರೆ ಆಭರಣ, ಬಟ್ಟೆ ಇವುಗಳು. ಇವೆಲ್ಲ ನಿಮ್ಮ ಪಾಸಿಟಿವ್‌ ವೈಬನ್ನು ಇನ್ನೊಬ್ಬರಿಗೆ ನೀಡಿದಂತೆ ಆಗುತ್ತದೆ. ಹಾಗಾಗಿ ಇದನ್ನು ತಪ್ಪಿಸಿ

You may also like

Leave a Comment