Home » Summer Skin Care Tips: ಮುಖ ಕಪ್ಪಾಯ್ತು ಎಂಬ ಚಿಂತೆಯೇ? ಇಲ್ಲಿದೆ ಸುಲಭ ಉಪಾಯ

Summer Skin Care Tips: ಮುಖ ಕಪ್ಪಾಯ್ತು ಎಂಬ ಚಿಂತೆಯೇ? ಇಲ್ಲಿದೆ ಸುಲಭ ಉಪಾಯ

1 comment
Summer Skin Care Tips

 

Summer Skin Care Tips: ನಾವು ಕಾಲಕ್ಕೆ ಅನುಗುಣವಾಗಿ ನಮ್ಮ ತ್ವಚೆಯ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ತ್ವಚೆ ಹಾಳಾಗುವುದು ಜೊತೆಗೆ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ನಮ್ಮ ತ್ವಚೆಯು ಒಣಗುವುದು ಸಹಜ. ಆ ಪರಿಣಾಮವನ್ನು ತಡೆಯಲು ಈ ಕೆಳಗೆ ನೀಡಲಾದ ಸಲಹೆಗಳನ್ನು ಪಾಲಿಸಿದರೆ ಸಾಕು.

ಇದನ್ನೂ ಓದಿ: Mosquito control: ಮನೆಯಲ್ಲೇ ಇರೋ ಈ ವಸ್ತುವನ್ನು ಹೀಗೆ ಬಳಸಿ – ಒಂದು ಸೊಳ್ಳೆಯೂ ನಿಮ್ಮ ಮನೆ ಹತ್ತಿರ ಕೂಡ ಸುಳಿಯಲ್ಲ !!

ಬೇಸಿಗೆಯಲ್ಲಿ ತ್ವಚೆಯ ಕಾಳಜಿ ಮಾಡುವುದು ಹೇಗೆ?

ಬೇಸಿಗೆಯಲ್ಲಿ ನಮ್ಮ ತ್ವಚೆಯನ್ನು ಸೂರ್ಯನಿಂದ ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಿಸಿಲಲ್ಲಿ ಇದ್ದಷ್ಟು ನಮ್ಮ ಚರ್ಮ ಕಪ್ಪಾಗುವ ಜೊತೆಗೆ ಸುಕ್ಕು ಗಟ್ಟುತ್ತದೆ. ನಮ್ಮ ಚರ್ಮದ ನೀರಿನ ಅಂಶವು ಸಹ ಶಾಖಕ್ಕೆ ಆವಿಯಾಗುತ್ತದೆ.

ಬೇಸಿಗೆಯಲ್ಲಿ ಚರ್ಮದ ಆರೈಕೆ ಸುಲಭವಾಗಿ ಮಾಡಬುದು.

ಬೇಸಿಗೆಯ ಶೆಕೆಗೆ ಮೈ ತುರಿಕೆ ಹಾಗುವುದು ಸಹಜವಾಗಿದೆ. ತುಂಬ ಮೃದುವಾದ ಚರ್ಮವನ್ನು ಹೊಂದಿರುವವರು ಬಿಲಿಸಿಗೆ ಹೋದರೆ ಅವರ ಕತೆ ಮುಗಿಯಿತು. ನಿಮ್ಮ ತ್ವಚೆಯನ್ನು ಬಿಸಿಲಿನಿಂದ ಕಾಪಾಡಿಕೊಳ್ಳಬೇಕು.

ಮೊದಲು ನಿಮ್ಮ ಮುಖ ಸ್ವಚ್ಛಗೊಳಿಸಿ

ನೀವು ಬೇಸಿಗೆಯಲ್ಲಿ ಹೊರಗೆ ಹೋಗಿ ಬಂದಾಗ ತಣ್ಣೀರಿನಿಂದ ಮುಖ ತೊಳೆದು, ಅಲೋವೆರಾ ಜೆಲ್ ಅಥವಾ ಸೌತೆಕಾಯಿಯನ್ನು ಬಳಸಿ ಮುಖಕ್ಕೆ ಲೇಪನ ಮಾಡಿ. ಇದರಿಂದ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಅಥವಾ ಅಲೋವೆರಾ ಜೆಲ್ ಅನ್ನು ಐಸ್ ಕ್ಯೂಬ್ ಮಾಡಿ ಲೇಪಿಸಿ.

ನಿಮ್ಮ ಸ್ವಚ್ಛತೆ ಕಾಪಾಡಿಕೊಳ್ಳಿ

ದಿನಕ್ಕೆ ಕನಿಷ್ಠ ಎರಡು ಮೂರು ಬಾರಿ ಮುಖವನ್ನು ಸ್ವಚ್ಛಗೊಳಿಸಿ. ನಿಮ್ಮ ಫೇಸ್ವಾಷ್ ನಲ್ಲಿ ಆಲ್ಕೋಹಾಲ್ ಇಲ್ಲದೆ ಇರುವುದು ಉತ್ತಮ. ಅಂತಹ ಫೇಸ್ವಾಷ್ ಬಳಸಿ ಮುಖ ತೊಳೆಯಿರಿ.

ಸನ್‌ಸ್ಕ್ರೀನ್‌ ಮಾಯಿಶ್ಚರೈಸರ್‌ ಬಳಕೆ ಮಾಡಿ 

ನೀವು ಅತಿ ಹೆಚ್ಚು ಸುಗಂಧ ಬರೀತಾ ಮಾಯಿಶ್ಚರೈಸರ್‌ ಬಳಸಬೇಡಿ. ಇದು ಸೂಕ್ತವಲ್ಲ. ನಿಮ್ಮ ತ್ವಚೆಗೆ ಎಸ್‌ಪಿಎಫ್‌ 30 ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಿ.

ಹೆಚ್ಚು ನೀರು ಕುಡಿಯಿರಿ.

ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣಾಂಶ ಹೆಚ್ಚಿರುತ್ತದೆ. ನೀವು ನೀರನ್ನು ಹೆಚ್ಚು ಕುಡಿದಷ್ಟು ಆರೋಗ್ಯ ಚೆನ್ನಾಗಿರುತ್ತೆ. ನಿಮ್ಮ ಚರ್ಮ ಸಹ ಆರೋಗ್ಯ ವಾಗಿರುತ್ತದೆ.

ಛತ್ರಿ ಬಳಕೆ ಮಾಡಿ 

ನೀವು ಮನೆಯಿಂದ ಹೊರಗಡೆ ಹೋಗುವಾಗ ಕೊಡೆಯನ್ನು ಬಳಸಿ. ಸಾದ್ಯವಾದರೆ ಹತ್ತಿ ಬಟ್ಟೆ ಯನ್ನು ಬಳಸಿ, ಅಥವಾ ದುಪ್ಪಟವನ್ನು ಬಳಕೆ ಮಾಡಿ. ಇವುಗಳನ್ನು ಅನುಸರಿಸುವ ಮೂಲಕ ನಿಮ್ಮ ತ್ವಚೆಯನ್ನು ರಕ್ಷಣೆ ಮಾಡಬಹುದು.

You may also like

Leave a Comment