Sunday Astro Tips: ಭಾನುವಾರವು ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವನ್ನು ಹೊಂದಿದೆ. ಈ ದಿನವನ್ನು ಗ್ರಹಗಳ ರಾಜ ಸೂರ್ಯ ದೇವರಿಗೆ ಮುಡಿಪಾಗಿರಿಸಲಾಗಿದೆ. ಸೂರ್ಯ ದೇವರ ಆಶೀರ್ವಾದ ಪಡೆದ ಜನರು ಜೀವನದಲ್ಲಿ ಪ್ರಗತಿ ಕಾಣುತ್ತಾರೆ. ಎಲ್ಲಾ ಸಮಸ್ಯೆ ದೂರ ಹಾಕುವ ಶಕ್ತಿ, ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುವಂತೆ ಮಾಡುವ ಶಕ್ತಿ ಸೂರ್ಯದೇವರಿಗಿದೆ.
ಆದರೆ ಕೆಲವೊಂದು ಸಂಗತಿಗಳು ಭಾನುವಾರದಂದು ನಡೆಯುತ್ತದೆ. ಅದು ನಡೆಯಬಾರದು. ಅದರ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಅಂತಹ ಕೆಲಸಗಳು ಯಾವುದು? ಭಾನುವಾರ ಜನರು ತಪ್ಪಾಗಿಯೂ ಈ ಕೆಲಸ ಮಾಡಬಾರದು, ಅದು ಯಾವುದು? ಬನ್ನಿ ತಿಳಿಯೋಣ (Sunday Astro Tips) .
ಭಾನುವಾರದಂದು ಸೂರ್ಯದೇವರಿಗೆ ಸಂಬಂಧಿಸಿದ ವಸ್ತು ಮಾರಾಟ ಮಾಡಬಾರದು. ತಾಮ್ರದಿಂದ ಮಾಡಿದ ವಸ್ತುಗಳು ಕೂಡಾ ಇದರಲ್ಲಿ ಸೇರಿದೆ. ಸೂರ್ಯನ ಸ್ಥಾನವನ್ನು ಜಾತಕದಲ್ಲಿ ದುರ್ಬಲಗೊಳಿಸುತ್ತದೆ ಎಂದು ಹೇಳಲಾಗಿದೆ. ಹಾಗೆನೇ ಈ ದಿನ ನೀಲಿ, ಕಂದು ಮತ್ತು ಕಪ್ಪು ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಿದರೆ ಉತ್ತಮ. ಭಾನುವಾರದಂದು ಈ ಕಲರಿನ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ನಂಬಿಕೆಗಳ ಪ್ರಕಾರ, ಭಾನುವಾರ ಕೂದಲು ಕತ್ತರಿಸುವುದು ಮಂಗಳಕರವಲ್ಲ. ಇದರಿಂದ ಪ್ರತಿ ಕೆಲಸಕ್ಕೂ ಅಡೆತಡೆಗಳಿದ್ದು, ಸಣ್ಣಪುಟ್ಟ ವಿಚಾರಕ್ಕೂ ತೊಂದರೆಯಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಒಬ್ಬರು ಭಾನುವಾರದಿಂದ ಪ್ರಯಾಣಿಸುವುದನ್ನು ತಪ್ಪಿಸಿದರೆ ಉತ್ತಮ. ಭಾನುವಾರದಂದು ತಡವಾಗಿ ಏಳುವುದು ಕೂಡಾ ಒಳ್ಳೆಯದಲ್ಲ. ಇದು ಜಾತಕದಲ್ಲಿ ಸೂರ್ಯನ ಸ್ಥಾನವನ್ನು ದುರ್ಬಲಗೊಳಿಸುತ್ತದೆ, ಮತ್ತು ನಿಮ್ಮ ಇಡೀ ದಿನ ಭಾರವಾಗಿರುತ್ತದೆ. ಉಪ್ಪಿನ ಬಳಕೆ ಕೂಡಾ ಭಾನುವಾರದಂದು ನಿಷಿದ್ಧ. ಇದು ಪ್ರತಿ ಕೆಲಸಕ್ಕೂ ಅಡೆತಡೆಗಳನ್ನು ಉಂಟು ಮಾಡುತ್ತದೆ. ಭಾನುವಾರದಂದು ಉಪ್ಪಿನ ಬಳಕೆ ಮಾಡಬಾರದು. ಇದು ಕೂಡಾ ಪ್ರತಿ ಕೆಲಸಕ್ಕೆ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಭಾನುವಾರದಂದು ವಿಶೇಷವಾಗಿ ಸೂರ್ಯಾಸ್ತದ ನಂತರ ಉಪ್ಪಿನ ಸೇವನೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ: ಮದ್ಯ ಪ್ರಿಯರ ಬೇಡಿಕೆಗೆ ಕೊನೆಗೂ ಐಸಿನಂತೆ ಕರಗಿದ ಸರ್ಕಾರ, ಮದ್ಯ ಇನ್ನು ಅಗ್ಗ !
