Home » Marriage News: ಮದುವೆ ಊಟದಲ್ಲಿ ʼನಲ್ಲಿ ಮೂಳೆʼ ಸಿಗಲಿಲ್ಲ, ಮದುವೆ ಕ್ಯಾನ್ಸಲ್‌ ಮಾಡಿದ ವರ ಮಹಾಶಯ! ಅಷ್ಟೇ ಮುಂದೇನಾಯ್ತು?

Marriage News: ಮದುವೆ ಊಟದಲ್ಲಿ ʼನಲ್ಲಿ ಮೂಳೆʼ ಸಿಗಲಿಲ್ಲ, ಮದುವೆ ಕ್ಯಾನ್ಸಲ್‌ ಮಾಡಿದ ವರ ಮಹಾಶಯ! ಅಷ್ಟೇ ಮುಂದೇನಾಯ್ತು?

by Mallika
1 comment
Marriage News

Marriage News : ವರದಕ್ಷಿಣೆ ಕೊಡಲಿಲ್ಲ, ಕಾರು ಕೊಡಿಸಿಲ್ಲ ಹೀಗೆ ಹಲವಾರು ಕಾರಣಗಳಿಂದ ಮದುವೆ ರದ್ದಾಗ ಅನೇಕ ಉದಾಹರಣೆಗಳು ನಡೆದಿರುವುದು ನೀವು ಕಂಡಿರಬಹುದು. ಆದರೆ ತೆಲಂಗಾಣದಲ್ಲಿ ಮದುವೆ ಸಮಯದಲ್ಲಿ ಮಾಡಲಾದ ಮಾಂಸದ (ಮಟನ್‌) ಅಡುಗೆಯಲ್ಲಿ ಮೂಳೆ ಇರಲಿಲ್ಲ ಎಂದು ವರನ ಕಡೆಯವರು ಜಗಳ ಮಾಡಿದ್ದು, ಕೊನೆಗೆ ಮೂಳೆಗಾಗಿ ವರನ ಸಂಬಂಧಿಕರು ಮದುವೆಯನ್ನೇ ರದ್ದುಗೊಳಿಸಿದ ಘಟನೆಯೊಂದು ನಡೆದಿದೆ. ಇತ್ತ ಕಡೆ ವರನ ಕಡೆಯವರ ಮೇಲೆ ವಧುವಿನ ಕಡೆಯವರು ಹಿಡಿಶಾಪ ಹಾಕಿ ಹೋಗಿದ್ದಾರೆ.

 

ಇಂತಹ ಒಂದು ಘಟನೆ ನಡೆದಿರುವುದು ತೆಲಂಗಾಣದ ನಿಜಾಮಾಬಾದ್‌ನಲ್ಲಿ. ವಧು ಹಾಗೂ ವರನಿಗೆ ನವೆಂಬರ್‌ನಲ್ಲಿ ಮದುವೆ ಫಿಕ್ಸ್‌ ಆಗಿತ್ತು. ವಧುವಿನ ಕಡೆಯವರೇ ಮದುವೆಯ ಎಲ್ಲಾ ಜವಾಬ್ದಾರಿ ವಹಿಸಿಕೊಂಡಿದ್ದರು. ಮದುವೆ ದಿನ ಮಾಂಸದಡುಗೆ ಮಾಡಿ ಅದರಲ್ಲೂ ಮಟನ್‌ ಮಾಡಿಸಿ ಎಂಬುವುದು ವರನ ಕಡೆಯವರ ಬೇಡಿಕೆಯಾಗಿತ್ತು. ಹೇಗಾದರೂ ಪರ್ವಾಗಿಲ್ಲ ಎಂದು ಮದುವೆ ಮುಗಿದರೆ ಸಾಕು ಎಂದು ವಧುವಿನ ಕಡೆಯವರು ಒಪ್ಪಿಗೆ ನೀಡಿದ್ದಾರೆ.

ಇದನ್ನು ಓದಿ: Hijab: ಹಿಜಾಬ್‌ ವಿರುದ್ಧ ಕೇಸರಿ ಶಾಲು ಕಣಕ್ಕೆ-ವಿಶ್ವ ಹಿಂದೂ ಪರಿಷತ್‌ ಎಚ್ಚರಿಕೆ!!!

ಎಲ್ಲವೂ ಸುಗಮವಾಗಿಯೇ ನಡೆಯುತ್ತಿತ್ತು. ಮದುವೆ ದಿನ ಎಲ್ಲರೂ ಸಾಲಾಗಿ ಕುಳಿತು ಊಟ ಮಾಡುತ್ತಿದ್ದಾಗ ವರನ ಕಡೆಯ ಒಬ್ಬ ವ್ಯಕ್ತಿ ಮಾಂಸದಲ್ಲಿ ನಲ್ಲಿ ಮೂಳೆ ಹುಡುಕಿದ್ದಾನೆ. ಆದರೆ ಎಷ್ಟೇ ಹುಡುಕಿದರೂ ನಲ್ಲಿ ಮೂಳೆ ಸಿಗಲಿಲ್ಲ. ಕೂಡಲೇ ಆಕ್ರೋಶಗೊಂಡ ಆತ ವಧುವಿನ ಕಡೆಯವರ ವಿರುದ್ಧ ಜಗಳ ಮಾಡಿದ್ದಾನೆ. ಇದೇ ಸಮಯದಲ್ಲಿ ವರ ಹಾಗೂ ವಧುವಿನ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ. ಅನಂತರ ಈ ಪ್ರಕರಣ ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿದ್ದು, ಅಲ್ಲಿ ಕೂಡಾ ಇವರು ಜಗಳ ಮಾಡಿದ್ದಾರೆ.

 

ನಲ್ಲಿ ಮೂಳೆಗೋಸ್ಕರ ಮದುವೆ ನಿಲ್ಲಿಸಬೇಡಿ, ಮುಹೂರ್ತದ ಸಮಯಕ್ಕೆ ತಕ್ಕಂತೆ ವರ ತಾಳಿ ಕಟ್ಟಲಿ ಎಂದು ಪೊಲೀಸರು ಹೇಳಿದ್ದಾರೆ. ಆದೆ ಸಂಧಾನಕ್ಕೆ ಒಪ್ಪದ ವರನ ಕಡೆಯವರು ಅಲ್ಲೂ ಜಗಳ ಮಾಡಿದ್ದಾರೆ. ಕೊಎನಗೆ ನಮಗೆ ನಲ್ಲಿ ಮೂಳೆ ಬಡಿಸದರೆ ಅವಮಾನ ಮಾಡಿದ್ದಾರೆ ಎಂದು ಕೋಪದಿಂದ ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ.

You may also like

Leave a Comment