Home » Toilet Clean : ಟಾಯ್ಲೆಟ್‌ ಕ್ಲೀನ್‌ ಮಾಡಲು ಇಲ್ಲಿದೆ ಸುಲಭ ಉಪಾಯ! ಫಳಫಳ ಮಿಂಚುತ್ತೆ!

Toilet Clean : ಟಾಯ್ಲೆಟ್‌ ಕ್ಲೀನ್‌ ಮಾಡಲು ಇಲ್ಲಿದೆ ಸುಲಭ ಉಪಾಯ! ಫಳಫಳ ಮಿಂಚುತ್ತೆ!

0 comments
toilet clean

Toilet Clean: ನಾವು ಅಡುಗೆ ಮನೆಯಲ್ಲಿ (kitchen room ) ಎಷ್ಟೇ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಂಡರು, ನಮ್ಮ ಶೌಚಾಲಯ ಸ್ವಚ್ಛ ವಾಗಿ ಇಲ್ಲದೇ ಇದ್ದಲ್ಲಿ ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ ಶೌಚಾಲಯ ಮತ್ತು ಸ್ನಾನಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ.

ಪದೇ ಪದೇ ಟಾಯ್ಲೆಟ್ ಕ್ಲೀನ್ (Toilet Clean) ಮಾಡುವುದು ದೊಡ್ಡ ಸಮಸ್ಯೆ ಅಂದುಕೊಂಡಲ್ಲಿ ನಿಮ್ಮ ಅಭಿಪ್ರಾಯ ತಪ್ಪು. ಯಾಕೆಂದರೆ ಪ್ರತಿ ಬಾರಿ ಫ್ಲಶ್ ಮಾಡುವಾಗ ಟಾಯ್ಲೆಟ್ ಸ್ವಚ್ಚವಾಗಿಡಲು ಮಾರುಕಟ್ಟೆಯಲ್ಲಿ ದುಬಾರಿ ಲಿಕ್ವಿಡ್ ಗಳು ಬಳಸುವ ಬದಲಿಗೆ ನಿಮಗೆ ಇಲ್ಲಿ ಸುಲಭ ಉಪಾಯ ತಿಳಿಸಲಾಗಿದೆ. ಹೌದು, ದಿನನಿತ್ಯ ಟಾಯ್ಲೆಟ್ ಉಪಯೋಗಿಸುವಾಗ ನೀವು ಇಂಥದೊಂದು ಐಡಿಯಾ ಉಪಯೋಗಿಸಿದರೆ ಬೇಗ ಕೊಳೆಯಾಗುವುದಿಲ್ಲ.

ನೀವು ದಿನನಿತ್ಯ ಬಟ್ಟೆ ಒಗೆಯಲು ಉಪಯೋಗಿಸುವ ಸೋಪುಗಳನ್ನು ಬಳಸಿ ಅವು ಕರಗಿ ಚಿಕ್ಕ ಬಿಲ್ಲೆಗಳಾದಾಗ ಎಸೆಯುವ ಬದಲು ನಿಮ್ಮ ಟಾಯ್ಲೆಟ್ ಕಮೋಡ್ ಗೆ ಹಾಕಿ.
ಇದರಿಂದ ಪ್ರತಿ ಫ್ಲಶ್ ನಲ್ಲೂ ಸಾಬೂನಿನ ನೊರೆಯಿಂದಾಗಿ ಬಹಳ ಬೇಗ ನಿಮ್ಮ ಟಾಯ್ಲೆಟ್ ಕೊಳೆಯಾಗುವುದು ತಪ್ಪುತ್ತದೆ.

ಇದರ ಹೊರತು ಟಾಯ್ಲೆಟ್ ಬೌಲ್ ಅನ್ನು ಸ್ವಚ್ಛಗೊಳಿಸುವುದು ದೊಡ್ಡ ವಿಷಯವಲ್ಲ. ವಿನೆಗರ್ ಅನ್ನು ಸ್ಥಳದಲ್ಲಿ ಸಿಂಪಡಿಸಿ ಸ್ವಲ್ಪ ಕಾಲ ನೆನೆಸಿ. ನಂತರ ಸರಳವಾಗಿ ಸಾಬೂನು ಮತ್ತು ನೀರಿನಿಂದ ಶೌಚಾಲಯವನ್ನು ಫ್ಲಶ್ ಮಾಡಿ. ಮುಖ್ಯವಾಗಿ ವಿನೆಗರ್ ಬಳಸಿ ಸ್ವಚ್ಛಗೊಳಿಸುವಾಗ ಟಾಯ್ಲೆಟ್ ಹೊಳೆಯುತ್ತದೆ.

You may also like

Leave a Comment