Home » Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ

Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ

2 comments
Tulasi Vastu

Tulasi Vastu: ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ. ತುಳಸಿಯಿಂದ ಕುಟುಂಬಕ್ಕೆ ಸಾಮರಸ್ಯ ಮತ್ತು ಸಂತೋಷ ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Tulasi Vastu) ತಿಳಿಸಲಾಗಿದೆ.

ಮುಖ್ಯವಾಗಿ ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುವ ತುಳಸಿ ಕಟ್ಟೆ ಬಳಿ ಈ ನಾಲ್ಕು ವಸ್ತುಗಳನ್ನು ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖ ಮಾಡಲಾಗಿದೆ.

ತುಳಸಿ ಕಟ್ಟೆ ಇರುವ ಪರಿಸರದಲ್ಲಿ ಕಸದ ಬುಟ್ಟಿಯನ್ನು ಇರಬಾರದು. ಹೀಗೆ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೇರಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

ತುಳಸಿ ಗಿಡದ ಆಸುಪಾಸು ಚಪ್ಪಲಿಗಳನ್ನು ಇಡಬಾರದು. ಹೀಗೆ ಚಪ್ಪಲಿ ಇರಿಸಿದರೆ ತುಳಸಿಗೆ ಅವಮಾನ ಮಾಡಿದಂತೆ. ತಾಯಿ ಲಕ್ಷ್ಮೀಯನ್ನು ಕೂಡ ಅವಮಾನ ಮಾಡದಂತಾಗುತ್ತದೆ. ತುಳಸಿ ಸಸ್ಯದ ಸುತ್ತಮುತ್ತಲ ಪರಿಸರವನ್ನು ಕಡ್ಡಾಯವಾಗಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ತುಳಸಿ ಭಗವಾನ್​ ವಿಷ್ಣುವಿಗೆ ಅತ್ಯಂತ ಪ್ರೀತಿಕರ. ಆದ್ದರಿಂದ ತುಳಸಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ. ತುಳಸಿ ಹತ್ತಿರ ಎಂದಿಗೂ ಪೊರಕೆ ಇಡಬಾರದು. ಪೊರಕೆಯಿಟ್ಟರೆ ವಿಷ್ಣುಮೂರ್ತಿ ಮತ್ತು ಲಕ್ಷ್ಮೀ ದೇವಿ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

ತುಳಸಿ ಮುಂತಾದ ಮಹಾಮಹಿಮಾನ್ವಿತ ಸಸ್ಯದ ಸಮೀಪ ಮುಳ್ಳುಗಳು ಇರುವ ಸಸ್ಯಗಳನ್ನು ಇಡಬಾರದು. ಇದು ತುಂಬಾ ಅಶುಭ. ಈ ಮುಳ್ಳು ಸಸ್ಯಗಳ ಪರಿಸರದಲ್ಲಿ ತುಳಸಿ ಗಿಡವನ್ನು ಇರಿಸಿದರೆ ಅದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ತುಳಸಿ ಗಿಡದ ಬಳಿ ಕೊಳಕು ಪಾತ್ರೆಗಳು, ಕಸವನ್ನು ಇಡಬಾರದು. ಹಾಗೆಯೇ ತುಳಸಿ ಗಿಡದ ಜೊತೆ ಬೇರೆ ಗಿಡವನ್ನು ನೆಡಬಾರದು. ಇದರಿಂದ ತುಳಸಿ ಗಿಡಒಣಗಿ ಹೋಗುತ್ತದೆ. ಇದರಿಂದ ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆಯಂತೆ.

ಹಾಗೇ ತುಳಸಿ ಗಿಡದ ಬಳಿ ನೀರು ತುಂಬಿದ ಪಾತ್ರೆಗಳನ್ನು ಇಡಬಾರದಂತೆ. ಆದರೆ ತುಳಸಿ ಗಿಡದ ಬಳಿಯ ನೀರನ್ನು ಅಥವಾ ಹಾಲನ್ನು ಅರ್ಪಿಸಿದರೆ ಒಳ್ಳೆಯದಂತೆ. ಹಾಗೆಯೇ ತುಳಸಿ ಗಿಡಕ್ಕೆ ಸಂಜೆಯ ವೇಳೆ ನೀರನ್ನು ಅರ್ಪಿಸಬೇಡಿ. ಮತ್ತು ತುಳಸಿ ಗಿಡದ ಕೆಳಗೆ ದೀಪವನ್ನು ಹಚ್ಚಬೇಡಿ. ಇದರಿಂದ ಗಿಡಕ್ಕೆ ಹಾನಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

 

ಇದನ್ನು ಓದಿ: Rajasthan Royals: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ RRR ಚಿತ್ರ ತಂಡ: ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಟೀಂ, ಅಷ್ಟಕ್ಕೂ ನಡೆದದ್ದೇನು?

You may also like

Leave a Comment