Home Decor Items: ಬಹುತೇಕರ ಮನೆಯ ಒಳಗೆ ಅಲಂಕಾರಿಕ ವಸ್ತುಗಳನ್ನು ಕಾಣಬಹುದು. ಅದರಲ್ಲೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಅಲಂಕಾರ ವಸ್ತು (Home Decor Items) ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಅಂತಹ ವಸ್ತುಗಳನ್ನು ನೀವು ಎಲ್ಲಿ ಹೇಗೆ ಇರಿಸಿದ್ದೀರಿ ಅನ್ನೋದು ಮುಖ್ಯ. ಹೌದು, ಕೆಲವೊಂದು ಅಲಂಕಾರಿಕ ವಸ್ತುಗಳನ್ನು ಇಂತಹದೇ ರೀತಿಯಲ್ಲಿ ಇರಿಸಬೇಕಾಗುತ್ತದೆ. ಭಾರತದಲ್ಲಿ ವಾಸ್ತುಶಾಸ್ತ್ರವಿದ್ದಂತೆ ಚೀನಾದಲ್ಲಿ ಈ ಸಂಸ್ಕೃತಿಯನ್ನು ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಕೆಲವು ಅಲಂಕಾರಿಕ ವಸ್ತುಗಳು ಹಣ ಮತ್ತು ಅದೃಷ್ಟವನ್ನು ತರುತ್ತವೆ. ಇವುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸಬೇಕಷ್ಟೆ. ಅವು ಯಾವುದು ಎಂದು ಇಲ್ಲಿ ತಿಳಿಸಲಾಗಿದೆ.
ಲಾಫಿಂಗ್ ಬುದ್ಧ (Laughing Buddha):
ನಗುತ್ತಿರುವ ಬುದ್ಧನ ವಿಗ್ರಹವು ಮನೆಯಲ್ಲಿ ಉತ್ಸಾಹವನ್ನು ಹೊರಸೂಸುತ್ತದೆ. ಧನಾತ್ಮಕ ಶಕ್ತಿಯನ್ನು, ಹಣದ ಹರಿವನ್ನು ಆಕರ್ಷಿಸುತ್ತದೆ.
ಹರಿಯುವ ನೀರಿನ ಪೇಂಟಿಂಗ್ (Flowing Water Painting): ಫೆಂಗ್ ಶೂಯಿ ಪ್ರಕಾರ ನೀರು ಶ್ರೀಮಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಹರಿಯುವ ನೀರಿನ ಚಿತ್ರಕಲೆಯನ್ನು ನಿಮ್ಮ ಮನೆ ಗೋಡೆಯಲ್ಲಿ ಪ್ರದರ್ಶಿಸಿದರೆ ಅದು ಹಣವನ್ನು ಆಕರ್ಷಿಸುತ್ತದೆ.
ದೃಷ್ಟಿ ಗೊಂಬೆ (Evil-Eye Hanging):
ದೃಷ್ಟಿ ಗೊಂಬೆಯನ್ನು ನಿಮ್ಮ ಲಿವಿಂಗ್ ರೂಂಗೆ ನೇತುಹಾಕಿದರೆ ಅಥವಾ ನಿಮ್ಮ ಕೀ ಚೈನ್ ಆಗಿ ಮಾಡಿಕೊಂಡರೆ ಅದೃಷ್ಟವನ್ನು ತರುತ್ತದೆ.
ಸ್ಫಟಿಕದ ಕಮಲ (Crystal Lotus): ಇದು ಸಮತೋಲನ, ಶುದ್ಧತೆ ಮತ್ತು ಶಾಂತತೆಯ ಸಂಕೇತವಾಗಿದೆ. ಇದನ್ನು ಕಿಟಕಿಯ ಹತ್ತಿರ ಇರಿಸಿದರೆ ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಇರಿಸಿದಾಗ ನಿಮ್ಮ ಪರಿಶ್ರಮದಿಂದ ಅದೃಷ್ಟ ಲಭಿಸುವಂತೆ ಮಾಡುತ್ತದೆ.
ಇನ್ನು ನೀವು ಮಲಗುವ ಕೋಣೆಯ ನೈರುತ್ಯ ಮೂಲೆಯಲ್ಲಿರಿಸಿದರೆ ಪ್ರೀತಿ ಪ್ರೇಮ ಸಂಬಂಧ ಹಸನಾಗುತ್ತದೆ.
ಕಪ್ಪೆ ವಿಗ್ರಹ (Money Toad): ಮೂರು ಕಾಲಿನ ಕಪ್ಪೆಯ ಆಕೃತಿಯ ವಿಗ್ರಹವನ್ನು ನಿಮ್ಮ ಮನೆಯ ಒಳಗೆ ಮುಂಭಾಗದ ಬಾಗಿಲಿನ ಹತ್ತಿರ ಇರಿಸಿ. ಅದಕ್ಕೆ ಕಡುಗೆಂಪು ಬಟ್ಟೆಯನ್ನು ಸುತ್ತಿ. ಇದು ಸಮೃದ್ಧಿ, ಅದೃಷ್ಟದ ಜೊತೆಗೆ ದೀರ್ಘಾಯುಷ್ಯವನ್ನೂ ನೀಡುತ್ತದೆ
ಮೆಟಲ್ ವಿಂಡ್ ಚೈಮ್ (Metal Wind Chime):
ಸಂತಾನ ಭಾಗ್ಯಕ್ಕಾಗಿ ಬಯಸಿದ್ದರೆ ಅಥವಾ ಉದ್ಯೋಗದಲ್ಲಿ ಪ್ರಗತಿ ಬಯಸಿದ್ದರೆ ನಿಮ್ಮ ಮನೆಯ ಪಶ್ಚಿಮದಲ್ಲಿ ಆರು-ಲೋಹದ ವಿಂಡ್ ಚೈಮ್ ಅನ್ನು ನೇತುಹಾಕಿ.
ಇದನ್ನೂ ಓದಿ: ಈ ಕಪ್ಪು ಕಾಳನ್ನು ದಾಸವಾಳದೊಂದಿಗೆ ಬೆರೆಸಿ ಹಚ್ಚಿ- ಬಿಳಿ ಕೂದಲು ಕಪ್ಪಾಗೋದು ಮಾತ್ರವಲ್ಲ, ಮುಂದೆಂದೂ ಬಿಳಿ ಕೂದಲೇ ಬರೋದಿಲ್ಲ
