Home » Skin Care Tips : 40ರ ವಯಸ್ಸಿನಲ್ಲಿ 18ರ ಯುವತಿ ತರಹ ಮುಖ ಹೊಳೆಯಬೇಕೇ? ಇಲ್ಲೊಂದು ಉಪಾಯವಿದೆ ನೋಡಿ!

Skin Care Tips : 40ರ ವಯಸ್ಸಿನಲ್ಲಿ 18ರ ಯುವತಿ ತರಹ ಮುಖ ಹೊಳೆಯಬೇಕೇ? ಇಲ್ಲೊಂದು ಉಪಾಯವಿದೆ ನೋಡಿ!

0 comments

ಮನುಷ್ಯರು ಎಂದಿಗೂ ತಮ್ಮ ಯವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ಫ್ಯಾಶನ್ ಎಂದಾಗ ಸ್ವಲ್ಪ ಜಾಗರುಕತೆ ವಹಿಸಬೇಕಾಗುತ್ತದೆ. ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ, ಹಾಗಂತ ನಾವು ಫ್ಯಾಷನ್ ಮೊರೆ ಹೋಗಿ ನಮ್ಮ ಆರೋಗ್ಯ ಕೆಡಿಸಬಾರದು. ಉಡುಗೆ ತೊಡುಗೆಗಳಿಂದ ಹಿಡಿದು ಮೇಕಪ್‌ವರೆಗೆ ಎಲ್ಲಾ ಹೊಸ ಫ್ಯಾಷನ್ ಅನ್ನು ಅಳವಡಿಸಿಕೊಳ್ಳುವಾಗ ಆರೋಗ್ಯದ ಕಡೆಗೆ ಗಮನ ವಹಿಸುವುದು ಉತ್ತಮ.

ಅದಲ್ಲದೆ ಹೆಚ್ಚುತ್ತಿರುವ ವಯಸ್ಸಿನ ಕಾರಣ ಹಲವರು ತಮ್ಮ ತ್ವಚೆಯ ಬಗ್ಗೆ ಚಿಂತಿತರಾಗುತ್ತಾರೆ, ಆದರೆ, ಕೆಲವು ಉಪಾಯಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ತಪ್ಪಿಸಬಹುದು.

ಹೌದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಕೆಲ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ವಯಸ್ಸನ್ನು 10 ವರ್ಷ ಕಡಿಮೆ ಮಾಡಿಕೊಳ್ಳಬಹುದು. ಯಾವ ವಿಧಾನಗಳನ್ನು ಅನುಸರಿಸುವ ಮೂಲಕ ನಮ್ಮ ವಯಸ್ಸನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ತ್ವಚೆಯನ್ನು ಯೌವ್ವನಭರಿತವಾಗಿಡಲು ಸಲಹೆಗಳು :

  • ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. ಇದು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಇದು ದೇಹದಲ್ಲಿನ ಉತ್ತಮ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ, ಆದರೆ ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಸುಕ್ಕುಗಳನ್ನು ತೆಗೆದುಹಾಕುತ್ತದೆ ಮತ್ತು ದೇಹದ ರಂಧ್ರಗಳನ್ನು ತುಂಬುತ್ತದೆ. ಮೊಸರಿನಲ್ಲಿ ಕಂಡುಬರುವ ವಿಟಮಿನ್ ಬಿ 12 ಚರ್ಮವನ್ನು ಹೊಳೆಯುವಲ್ಲಿ ಸಹಾಯ ಮಾಡುತ್ತದೆ.
  • ನಿಮ್ಮ ತ್ವಚೆಯನ್ನು ದೀರ್ಘಕಾಲ ಯೌವನವಾಗಿರಿಸಲು ನೀವು ಬಯಸಿದರೆ, ಪ್ರತಿದಿನ ಪಪ್ಪಾಯಿಯನ್ನು ಸೇವಿಸಿ. ಏಕೆಂದರೆ ಇದು ವಯಸ್ಸಾಗುವಿಕೆಯ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಚರ್ಮದ ಆರೈಕೆಗಾಗಿ ಪಪ್ಪಾಯಿಯನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಅದರಿಂದ ಇದು ವಯಸ್ಸಾಗುವಿಕೆಯ ವಿರುದ್ಧ ಹೋರಾಡುತ್ತದೆ.
  • ದಾಳಿಂಬೆಯಲ್ಲಿ ಪ್ಯೂನಿಕಾಲಾಜಿನ್ ಎಂಬ ಸಂಯುಕ್ತ ಇದೆ. ಇದು ಕಾಲಜನ್ ಅನ್ನು ಸಂರಕ್ಷಿಸುತ್ತದೆ ಮತ್ತು ನಿಮ್ಮ ವಯಸ್ಸಾಗುವಿಕೆಯನ್ನು ತಡೆಯುತ್ತದೆ.ಹೀಗಾಗಿ ನಿಮ್ಮ ತ್ವಚೆಯು ದೀರ್ಘಕಾಲ ಯೌವನವಾಗಿ ಇರಬೇಕೆಂದು ನೀವು ಬಯಸಿದರೆ, ನೀವು ದಾಳಿಂಬೆಯನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ನೀವು 40 ವರ್ಷ ವಯಸ್ಸಿನಲ್ಲೂ 30 ಆಗಿ ಕಾಣಿಸುತ್ತೀರಿ.
  • ಹಸಿರು ಎಲೆಗಳ ತರಕಾರಿಗಳಲ್ಲಿನ ಕ್ಲೋರೊಫಿಲ್ ಚರ್ಮದಲ್ಲಿ ಕಾಲಜನ್ ಅನ್ನು ಹೆಚ್ಚಿಸುತ್ತದೆ. ಇದು ವಯಸ್ಸಾಗುವಿಕೆಯ ವಿರುದ್ಧ ಹೋರಾಡಲು ದೇಹದ ಅಂಶಗಳಿಗೆ ಸಹಾಯ ಮಾಡುತ್ತದೆ.

ಈ ಮೇಲಿನಂತೆ ನೀವು ಕೆಲವು ಆಹಾರವನ್ನು ಸೇವಿಸಿದಲ್ಲಿ ನೀವು ನಿಮ್ಮ ಯವ್ವನವನ್ನು ಕಾಪಾಡಿಕೊಳ್ಳ ಬಹುದಾಗಿದೆ.

You may also like

Leave a Comment