Home » ತನ್ನ ಕೊನೇ ಮಗನ ಹೆಂಡತಿಯೊಂದಿಗೆ ಮಾವನ ಪಲ್ಲಂಗ ಸುಖ| ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ| ವಿಷಯ ತಿಳಿದ ಹೆಂಡತಿ ಹಾಗೂ ಹಿರಿ ಸೊಸೆಯಿಂದ ನಡೆದೇ ಹೋಯ್ತು ಘೋರ ದುರಂತ

ತನ್ನ ಕೊನೇ ಮಗನ ಹೆಂಡತಿಯೊಂದಿಗೆ ಮಾವನ ಪಲ್ಲಂಗ ಸುಖ| ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ| ವಿಷಯ ತಿಳಿದ ಹೆಂಡತಿ ಹಾಗೂ ಹಿರಿ ಸೊಸೆಯಿಂದ ನಡೆದೇ ಹೋಯ್ತು ಘೋರ ದುರಂತ

0 comments

55 ವರ್ಷದ ವ್ಯಕ್ತಿಯೊಬ್ಬ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ ಆತನನ್ನು ಕೊಲೆ ಮಾಡಿದ ಘಟನೆ‌ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಗೆ ನಾಲ್ವರು ಗಂಡು‌ಮಕ್ಕಳು. ಅದರಲ್ಲಿ ಕಿರಿಯ ಮಗನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇವರಿಬ್ಬರ ಈ ಸಂಬಂಧ ಇಲ್ಲಿಯವರೆಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಈ ವಿಚಾರ ತಿಳಿದ ಪತ್ನಿ ಮತ್ತು ಹಿರಿಯ ಸೊಸೆ ವಿರೋಧ ವ್ಯಕ್ತಪಡಿಸಿದ್ದಾರೆ.

ಆಗ ಅವರ ನಡುವೆ ವಾಗ್ವಾದ ಪ್ರಾರಂಭ ಆಗಿ ವ್ಯಕ್ತಿ ಈ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾದ ಕಾರಣ ಇಬ್ಬರು ಸೇರಿ ವ್ಯಕ್ತಿಯ ಗಂಟಲು ಸೀಳಿ ಕೊಲೆ ಮಾಡಿದ್ದಾರೆ.

ಈ ಬಗ್ಗೆ ಕಿರಿಯ ಸೊಸೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment