Home » DA Hike: ಕೊನೆಗೂ ಡಿಎ ಹೆಚ್ಚಳ ಘೋಷಿಸಿದ ಸರ್ಕಾರ- ಇನ್ನು ಸರ್ಕಾರಿ ನೌಕರರ ಕೈ ಸೇರಲಿದೆ ಈ ಭರ್ಜರಿ ಸಂಬಳ !!

DA Hike: ಕೊನೆಗೂ ಡಿಎ ಹೆಚ್ಚಳ ಘೋಷಿಸಿದ ಸರ್ಕಾರ- ಇನ್ನು ಸರ್ಕಾರಿ ನೌಕರರ ಕೈ ಸೇರಲಿದೆ ಈ ಭರ್ಜರಿ ಸಂಬಳ !!

2 comments
DA Hike

DA Hike: ಕೇಂದ್ರ ನೌಕರರಿಗೆ (Central Government)ಭರ್ಜರಿ ಸುದ್ದಿ ಇಲ್ಲಿದೆ ನೋಡಿ. ಸರ್ಕಾರ ಕೊನೆಗೂ ಡಿಎ ಹೆಚ್ಚಳ(DA Hike)ಘೋಷಿಸಿದ್ದು, ಹೀಗಾಗಿ, ಇನ್ನು ಈ ಸರ್ಕಾರಿ ನೌಕರರ ಭರ್ಜರಿ ಸಂಬಳ ಕೈ ಸೇರಲಿದೆ. ರಾಜ್ಯದ 1700 ಆವಿನ್ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ(DA)ಹೆಚ್ಚಳ ಮಾಡಲಾಗಿದ್ದು, ಡಿಎ ಶೇ.34ರಿಂದ ಶೇ.38ಕ್ಕೆ ಹೆಚ್ಚಳವಾಗಿದೆ.

ಈ ಹಿಂದೆ, ತಮಿಳುನಾಡು(Tamilnadu)ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಆರು ಜಿಲ್ಲಾ ಒಕ್ಕೂಟಗಳಲ್ಲಿ ಕೆಲಸ ಮಾಡುವ ನೌಕರರು 38% ದರದಲ್ಲಿ ಡಿಎ ಪಡೆಯುತ್ತಿದ್ದರು. ಇದಲ್ಲದೇ ಇತರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ(Central Government Employee)ಶೇ.34ರಷ್ಟು ಭತ್ಯೆ ನೀಡಲಾಗುತ್ತಿತ್ತು.

ನೌಕರರ ನಿರಂತರ ಬೇಡಿಕೆಯ ಪರಿಣಾಮ ಸರ್ಕಾರವು ಎಲ್ಲಾ ಆವಿನ್ ನೌಕರರಿಗೆ ಏಕರೂಪದ ಡಿಎ ದರವನ್ನು ಘೋಷಣೆ ಮಾಡಿದೆ. ಸರ್ಕಾರದ ಒಡೆತನದಲ್ಲಿರುವ ಆವಿನ್ ತಮಿಳುನಾಡು ರಾಜ್ಯದ ಅತಿದೊಡ್ಡ ಸಹಕಾರಿ ಮಾರುಕಟ್ಟೆ ಒಕ್ಕೂಟವಾಗಿದೆ. ಸರಕಾರದ ಡಿಎ ಹೆಚ್ಚಳದ ತೀರ್ಮಾನದಿಂದ 1700 ಆವಿನ್ ನೌಕರರಿಗೆ ಪ್ರಯೋಜನವಾಗಲಿದೆ.

ಇದನ್ನೂ ಓದಿ: Bus Ticket Price: ಮಹಿಳೆಯರ ಬೆನ್ನಲ್ಲೇ ಪುರುಷ ಪ್ರಯಾಣಿಕರಿಗೂ ಭರ್ಜರಿ ಗುಡ್ ನ್ಯೂಸ್ – ಕೇವಲ 1ರೂ. ಗೆ ಟಿಕೆಟ್ ಬುಕ್ ಮಾಡಿ, ಬಸ್ಸಿನಲ್ಲಿ ಪ್ರಯಾಣಿಸಿ

You may also like

Leave a Comment