Home » Delhi : ದೆಹಲಿ ಮೆಟ್ರೋ ಹತ್ತಿದ ಯುವಕನ ಖಾಸಗಿ ಭಾಗವನ್ನು ಪದೇ ಪದೇ ಮುಟ್ಟಿದ್ದ ಯುವತಿ – ಭಯಾನಕ ಅನುಭವ ಹಂಚಿಕೊಂಡ ಪ್ರಯಾಣಿಕ.!

Delhi : ದೆಹಲಿ ಮೆಟ್ರೋ ಹತ್ತಿದ ಯುವಕನ ಖಾಸಗಿ ಭಾಗವನ್ನು ಪದೇ ಪದೇ ಮುಟ್ಟಿದ್ದ ಯುವತಿ – ಭಯಾನಕ ಅನುಭವ ಹಂಚಿಕೊಂಡ ಪ್ರಯಾಣಿಕ.!

0 comments

Delhi: ಮೆಟ್ರೋ ಗಳಲ್ಲಿ, ಬಸ್ಸುಗಳಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಅಥವಾ ಅವರ ಎದುರುಗಡೆ ಪುರುಷರು ಅಸಭ್ಯವಾಗಿ ವರ್ತಿಸುವಂತಹ ಅನೇಕ ಪ್ರಕರಣಗಳನ್ನು ಇದುವರೆಗೂ ನಾವು ನೋಡಿದ್ದೇವೆ. ಆದರಿಗ ದೆಹಲಿ ಮೆಟ್ರೋದಲ್ಲಿ ಪುರುಷನೊಬ್ಬನಿಗೆ ಯುವತಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ.

ಹೌದು ದೆಹಲಿ(Delhi) ಮೆಟ್ರೋದಲ್ಲಿ ಕುಳಿತ ಅಂತ ಸಂದರ್ಭದಲ್ಲಿ ತಾನು ಅನುಭವಿಸಿದ ಲೈಂಗಿಕ ಕಿರುಕುಳದ ಪ್ರಕರಣವನ್ನು ಯುವಕನೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಅದರಲ್ಲಿ ಆತ ತನ್ನ ಪಕ್ಕ ಕುಣಿತ ಯುವತಿ ಆಗಾಗ ತನ್ನ ಖಾಸಗಿ ಅಂಗವನ್ನು ಮುಟ್ಟುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾನೆ.

ರೆಡ್ಡಿಟ್ ಬಳಕೆದಾರ, ಹಂಚಿಕೊಂಡಿರುವ ಈ ವಿವರ ಸಾರ್ವಜನಿಕ ಸ್ಥಳಗಳಲ್ಲಿನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಂಭೀರ ಕಾಳಜಿಯನ್ನು ಹುಟ್ಟುಹಾಕಿದೆ. ಅದರಲ್ಲಿ ಆತ ಒಬ್ಬ ಯುವತಿ ತನ್ನ ವೈಯಕ್ತಿಕ ಜಾಗವನ್ನು ಪದೇ ಪದೇ ಹೇಗೆ ಒಪ್ಪಿಗೆಯಿಲ್ಲದೆ ಸ್ಪರ್ಶಿಸಿದಳು ಎಂಬುದನ್ನು ಈ ಬಳಕೆದಾರರು ವಿವರಿಸಿದ್ದಾರೆ.

ಅಂದಹಾಗೆ ತನ್ನ ಪೋಸ್ಟ್‌ನಲ್ಲಿ ಆ ವ್ಯಕ್ತಿ ಏನಾಯಿತು ಎಂಬುದರ ವಿವರವನ್ನು ಹಂಚಿಕೊಂಡಿದ್ದಾರೆ, “ಇಂದು ಮೆಟ್ರೋದಲ್ಲಿ ನಾನು ಡೋರ್ ಪಕ್ಕದಲ್ಲಿ ನಿಂತಿದ್ದೆ. ಈ ಸಂದರ್ಭದಲ್ಲಿ ಓರ್ವ ಯುವತಿ ಬಂದು ನನ್ನ ಮುಂದೆ ನಿಂತಳು. ನಂತರ ಅವಳು ನನ್ನ ಖಾಸಗಿ ಜಾಗವನ್ನು ಅಶ್ಲೀಲವಾಗಿ ಸ್ಪರ್ಶಿಸಿದಳು” ಎಂದಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

You may also like

Leave a Comment