Onion Price Hike: ಗಗನ ಕುಸುಮವಾಗಿದ್ದ ಕೆಂಪು ಸುಂದರಿ ಟೊಮೇಟೊ (Tomato Price Down)ಬೆಲೆ ಇದೀಗ ಕೊಂಚ ಮಟ್ಟಿಗೆ ಇಳಿಕೆ ಕಂಡು ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ. ದಿನಂಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಏಕಾಏಕಿ ಈರುಳ್ಳಿ ಬೆಲೆ ಹೆಚ್ಚಳ ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶಾದ್ಯಂತ (Onion Price Hike in India)ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಏಕಾಏಕಿ ಶೇ.57ರಷ್ಟು ಬೆಲೆ ಏರಿಕೆ ಕಂಡ ಹಿನ್ನೆಲೆ ಗ್ರಾಹಕರ ಚಿಂತೆಗೆ ಕಾರಣವಾಗಿದೆ. ದೆಹಲಿಯಲ್ಲಿ ಈರುಳ್ಳಿ ಕೆಜಿಗೆ 47-50 ರೂಪಾಯಿಯಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 60 ರೂಪಾಯಿ ಇದೆ. ಪ್ರಸ್ತುತ ದೇಶದ ಬಹುತೇಕ ಭಾಗಗಳಲ್ಲಿ ಒಂದು ಕಿಲೋ ಈರುಳ್ಳಿ 50-60 ರೂ. ಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.ಕರ್ನಾಟಕದಲ್ಲಿ ಕೂಡ ಈರುಳ್ಳಿ ಬೆಲೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನೇಮಕಾತಿ ಖುಷಿಯಲ್ಲಿದ್ದ 13,000 ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್- ಮತ್ತೆ ಕಾನೂನು ಮೊರೆ ಹೋದ ಅಭ್ಯರ್ಥಿಗಳು
