Home » AI News reader : ಮಾಧ್ಯಮ ರಂಗದಲ್ಲಿ ಮತ್ತೊಂದು ಹೊಸ ಕ್ರಾಂತಿ, ಸುದ್ದಿ ವಾಚಕಿಯಾಗಿ ಬಂದಿದ್ದಾಳೆ ಎಐ ಆ್ಯಂಕರ್ ಲೀಸಾ !

AI News reader : ಮಾಧ್ಯಮ ರಂಗದಲ್ಲಿ ಮತ್ತೊಂದು ಹೊಸ ಕ್ರಾಂತಿ, ಸುದ್ದಿ ವಾಚಕಿಯಾಗಿ ಬಂದಿದ್ದಾಳೆ ಎಐ ಆ್ಯಂಕರ್ ಲೀಸಾ !

by ಹೊಸಕನ್ನಡ
0 comments
AI News reader

AI News reader: ಆರ್ಟಿಫಿಶಿಯಲ್ ಇಂಟಲಿಜೆನ್ಸ್ -ಕೃತಕ ಬುದ್ಧಿಮತ್ತೆ (Artificial Intelligence) ಬಹುತೇಕ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಉದ್ಯೋಗಕ್ಕೆ ಕುತ್ತು ತರಬಹುದು ಎಂಬ ಸುದ್ದಿ ಇತ್ತೀಚೆಗೆ ಎಲ್ಲೆಡೆ ಹೆಚ್ಚು ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಸುದ್ದಿ ಓದುವ ಸುದ್ದಿ ವಾಚಕರಿಗೆ ಮೊದಲ ಉದ್ಯೋಗ ನಷ್ಟ ಭೀತಿ ತಂದಿಟ್ಟಿದ್ದಾಳೆ ಕೃತಕ ಸುದ್ದಿ ವಾಚಕಿ ‘ಲೀಸಾ’ !( Odisha TV launches States 1st Artificial enabled news reader)

ಇಂತಹದೊಂದು ಕ್ರಾಂತಿಕಾರಿಕ ಬದಲಾವಣೆಗೆ ಒಡಿಶಾ ಮೂಲದ ಖಾಸಗಿ ಸುದ್ದಿ ವಾಹಿನಿ ‘ಒಡಿಶಾ ಟಿವಿ’ ಹೆಜ್ಜೆ ಇಟ್ಟಿದೆ. ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಕೃತಕ ಸುದ್ದಿ ವಾಚಕಿಯನ್ನು (AI News reader) ಅದು ಪರಿಚಯಿಸಿದೆ. ಈ ಅತಿಮಾನುಷ ಆಂಕರ್‌ ‘ಲೀಸಾ’ ಇಂಗ್ಲೀಷ್‌ ಮತ್ತು ಒಡಿಯಾ ಎರಡೂ ಭಾಷೆಯಲ್ಲಿ ಸುದ್ದಿ ಓದಬಲ್ಲ ಚತುರಳು. ಈಕೆ ಒಡಿಶಾದ ಮೊದಲ ಮತ್ತು ದೇಶದ ಎರಡನೆಯ ‘AI’ ನಿರೂಪಕಿಯೂ ಕೂಡಾ. ಒಡಿಶಾ ಟಿವಿ ಸುದ್ದಿ ಸಂಸ್ಥೆಯ ಡಿಜಿಟಲ್‌ ವೇದಿಕೆಗಳಲ್ಲಿ ಆಕೆಯನ್ನು ಸುದ್ದಿವಾಚಕಿಯಾಗಿ ಬಳಸಲಾಗುವುದು. ಇದು ಒಡಿಶಾದ ಟಿವಿ ಪತ್ರಿಕೋದ್ಯಮಕ್ಕೆ ಸಂಸ್ಥೆಯ ಉಡುಗೊರೆಯೂ ಹೌದು ಎಂದು ಒಡಿಶಾ ಟಿವಿ ಹೇಳಿಕೊಂಡಿದೆ.

ಒಡಿಶಾ ಟಿವಿಯ ಡಿಜಿಟಲ್ ಬಿಸಿನೆಸ್ ಹೆಡ್ ಲಿತಿಶಾ ಮಂಗತ್ ಪಾಂಡಾ ಲೀಸಾ ನ್ಯೂಸ್ ರೀಡರ್ ಆಗಿ ಬರುವ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಡಿಯಾದಲ್ಲಿ ಮಾತನಾಡಲು ತರಬೇತಿ ಕೊಡುವುದೇ ಲೀಸಾಗೆ ಒಂದು ದೊಡ್ಡ ಸಾಹಸವಾಗಿತ್ತು. ಅಂತೂ ಅದನ್ನು ಒಂದು ಹಂತದಲ್ಲಿ ಸಾಧಿಸಿದೆವು. ಆದರೆ ಇನ್ನೂ ಟ್ರೈನಿಂಗ್ ನಡೆಯುತ್ತಿದೆ. ಈ ವಿಷಯವಾಗಿ ಕೆಲಸ ಮಾಡುತ್ತಿದ್ದೇವೆ. ಆಕೆ ಇತರರೊಂದಿಗೆ ಸುಲಲಿತವಾಗಿ ಸಂವಹನ ಮಾತುಕತೆ ನಡೆಸುವ ಮಟ್ಟಕ್ಕೆ ಅವಳನ್ನು ತರಬೇತಿಗೆ ಕೊಡಬೇಕೆಂಬುದು ನಮ್ಮ ಉದ್ದೇಶ ಎಂದು ಓಡಿಸಾ ಟಿವಿಯ ಮುಖ್ಯಸ್ಥ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

1997 ರಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಪ್ರಾರಂಭಿಸಲಾದ ಈ ಟಿವಿ ನಂತರ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಹಬ್ಬಿತು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಸುದ್ದಿ ವಾಚನೆ ಮಾಡುವ ಪ್ರಯತ್ನ ಇದು ಮೊದಲನೆಯದಲ್ಲ. ಭಾರತದಲ್ಲಿ ಇದು ಎರಡನೆಯ ಐತಿಹಾಸಿಕ ಪ್ರಯತ್ನ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ‘ಆಜ್‌ ತಕ್‌’ ಹಿಂದಿ ಸುದ್ದಿ ವಾಹಿನಿಯು ‘ಸನಾ’ಳನ್ನು ಪರಿಚಯಿಸಿತ್ತು. ಆಕೆ ಭಾರತದ ಮೊದಲ ಎಐ ನ್ಯೂಸ್‌ ಆಂಕರ್‌ ಆಗಿದ್ದಾಳೆ. ಅದರ ನಂತರ ಏಪ್ರಿಲ್‌ನಲ್ಲಿ ‘ಕುವೈತ್‌ ನ್ಯೂಸ್‌’ ಎಂಬ ಕುವೈತ್‌ನ ಮಾಧ್ಯಮ ಸಂಸ್ಥೆ ‘ಫೆದಾಹ್‌’ ಎಂಬ ಎಐ ಸುದ್ದಿ ವಾಚಕಿಯನ್ನು ಪರಿಚಯಿಸಿತ್ತು. ಇನ್ಮುಂದೆ ಇಂತಹಾ ಸುದ್ದಿ ವಾಚನ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ವಾಚನ ಮಾಡುವ ಹೆಚ್ಚು ಹೆಚ್ಚು ‘ ಲೀಸಾ – ಸನಾ’ ರು ಬರುವ ಸಾಧ್ಯತೆ ಇದೆ. ಅದು ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಕ್ಕೂ ಕಾರಣವಾಗಬಹುದು.

ಇದನ್ನೂ ಓದಿ: Ragi ball eating competition: 13 ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿಂದು ಗೆದ್ದ ವೀರ, 12 ಮುದ್ದೆ ಮುರಿದು ತೇಗಿ ರನ್ನರ್ ಅಪ್ ಆದ 70ರ ವೃದ್ದ !

You may also like

Leave a Comment