Home » Khalistani Terrorist: ಭಾರತದಲ್ಲಿ ಅಮಾಯಕ ಯುವಕರನ್ನು ಭಯೋತ್ಪಾದನೆ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರನ ಬಂಧನ!

Khalistani Terrorist: ಭಾರತದಲ್ಲಿ ಅಮಾಯಕ ಯುವಕರನ್ನು ಭಯೋತ್ಪಾದನೆ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರನ ಬಂಧನ!

0 comments

Khalistani Terrorist: ಅಮಾಯಕ ಯುವಕರನ್ನು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹಾಗೂ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ ಸಹಾಯಕ ಅರ್ಶ್‌ದೀಪ್‌ ಡಲ್ಲಾನನ್ನ (Arshdeep Dalla) ಕೆನಡಾ ಭದ್ರತಾ ಏಜೆನ್ಸಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಪ್ರಕಾರ, ಅಕ್ಟೋಬರ್ 27-28 ರಂದು ಕೆನಡಾದಲ್ಲಿ (Canada) ಮಿಲ್ಟನ್‌ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿದಂತೆ ಡಲ್ಲಾನನ್ನ ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಭದ್ರತಾ ಏಜೆನ್ಸಿಗಳು ಸ್ಪಷ್ಟಪಡಿಸಿವೆ. 28 ವರ್ಷದ ಡಲ್ಲಾ ತನ್ನ ಪತ್ನಿಯೊಂದಿಗೆ ಕೆನಡಾದ ಸರ್ರೆಯಲ್ಲಿ ನೆಲೆಸಿದ್ದಾನೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ತಿಳಿಸಿವೆ.

ಈಗಾಗಲೇ ಡಲ್ಲಾ ಸುಲಿಗೆ, ಕೊಲೆ ಮತ್ತು ಇತರ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ. ಅಲ್ಲದೇ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪಂಜಾಬ್‌ನ ಜಾಗರಾನ್‌ನಿಂದ ಎಲೆಕ್ಟ್ರಿಷಿಯನ್ ಪರಮ್‌ಜೀತ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡ ನಂತರ ಈತನ ವಿರುದ್ಧ ಪಂಜಾಬ್ ಪೊಲೀಸರು ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಿದ್ದರು.

ಅದಲ್ಲದೆ 2020ರ ನವೆಂಬರ್‌ನಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಮನೋಹರ್ ಲಾಲ್‌ನನ್ನ ಅಪಹರಣ, ಹತ್ಯೆಗೆ ಸಂಚು ರೂಪಿಸುವ ಪ್ರಕರಣದಲ್ಲೂ ಭಾಗಿಯಾಗಿದ್ದ. ಜೊತೆಗೆ ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆ ನಡೆಸಲು ಯುವಕರನ್ನು ಪ್ರೇರೇಪಿಸುತ್ತಿದ್ದ, ಆಮೂಲಾಗ್ರಿಕರಣ ಮಾಡುವಲ್ಲಿ ಪರಿಣಿತನಾಗಿದ್ದ ಎಂದು ವರದಿಗಳು ಉಲ್ಲೇಖಿಸಿವೆ.

You may also like

Leave a Comment