Srirama Sene: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರು ನೆರೆದಿದ್ದರು. ವಿಶೇಷ ಎಂದರೆ ನವರಾತ್ರಿ ಉತ್ಸವದಲ್ಲಿ ಭಕ್ತನೊಬ್ಬ ತನ್ನ ಭಕ್ತಿ ಯನ್ನು ವಿಚಿತ್ರವಾಗಿ ತೋರ್ಪಡಿಸಿದ್ದಾನೆ.
ಹೌದು, ಶ್ರೀರಾಮಸೇನೆ(Srirama Sene) ಕಾರ್ಯಕರ್ತನೊಬ್ಬ, ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ಬಸ್ತವಾಡ ಗ್ರಾಮದ ದುರ್ಗಾಮಾತಾ ಉತ್ಸವ ಕಮೀಟಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ ಮೂರ್ತಿಗೆ ತನ್ನ ಬೆರಳು ಕೊಯ್ದುಕೊಂಡು ಹಣೆಗೆ ರಕ್ತದ ತಿಲಕ ಹಚ್ಚಿದ್ದಾನೆ.
ನವರಾತ್ರಿ ಹಿನ್ನೆಲೆ ಹುಕ್ಕೇರಿ ತಾಲೂಕಿನ ವಿವಿಧೆಡೆ ‘ದುರ್ಗಾ ಮಾತಾ ದೌಡ್’ ಆಯೋಜನೆ ಮಾಡಲಾಗಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿ ತಲವಾರ್ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಕೈಯಲ್ಲಿ ತಲವಾರ್ ಹಿಡಿದು ಯುವಕ, ಯುವತಿಯರು ದೌಡ್‌ನಲ್ಲಿ ಭಾಗಿಯಾದರು.
ಸದ್ಯ ದುರ್ಗಾದೇವಿ ಮೂರ್ತಿಗೆ ತನ್ನ ಬೆರಳು ಕೊಯ್ದುಕೊಂಡು ಹಣೆಗೆ ರಕ್ತದ ತಿಲಕ ಹಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮೊಬೈಲ್ ಫೋನ್ ಗಳನ್ನು ಯಾವ ಜೇಬಲ್ಲಿ ಇಟ್ಕೊಳ್ಬೇಕು ?! ಇಲ್ಲಿದೆ ನೋಡಿ ಕುತೂಹಲಕಾರಿ ವಿಚಾರ
