Home » Burj Khalifa: ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್

Burj Khalifa: ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್

0 comments

Burj Khalifa: ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾಗೆ ಸಿಡಿಲು ಬಡಿದಿರುವ ವೀಡಿಯೋ ವೈರಲ್ ಆಗಿದೆ. ದುಬೈ ರಾಜಕುಮಾರ ಶೇಕ್ ಹಮ್ದನ್ ಪೋಸ್ಟ್ ಮಾಡಿದ ಈ ದೃಶ್ಯವು, ಯುಎಇಯಲ್ಲಿನ ಅಸ್ಥಿರ ಹವಾಮಾನದ ನಡುವೆ ಸೆರೆಯಾಗಿದ್ದು, ಸಿಡಿಲಿನ ಬೆಳಕು ಕಟ್ಟಡದ ಮೇಲೆ ಸೊಗಸಾದ ಚಿತ್ತಾರ ಮೂಡಿಸಿದೆ.

ಕೆಲ ದಿನಗಳ ಹಿಂದೆ ಅರಬ್‌ ದೇಶಗಳಲ್ಲಿ ಹಿಮಾಲಯದಂತೆ ಮಂಜು ಬಿದ್ದು ಅಚ್ಚರಿ ಸೃಷ್ಟಿಸಿತ್ತು. ಅದಕ್ಕೂ ಮೊದಲು ಮಳೆಯೇ ಇಲ್ಲದ ಆ ಮರಳುಗಾಡಿನಲ್ಲಿ ಧಾರಾಕಾರ ಮಳೆ ಸುರಿದು ಪ್ರವಾಹ ಸೃಷ್ಟಿಯಾದಂತಹ ಘಟನೆ ನಡೆದಿದ್ದವು. ಈಗ ಮತ್ತೊಂದು ಅಚ್ಚರಿ ಎಂಬಂತೆ ಅಲ್ಲಿನ ವಿಶ್ವ ವಿಖ್ಯಾತ ಬುರ್ಜ್‌ ಖಲೀಫಾಗೆ ಸಿಡಿಲು ಬಡಿದಿದ್ದು, ಈ ಸಿಡಿಲಿನ ಬೆಳಕು ಸೊಗಸಾದ ಚಿತ್ತಾರ ಸೃಷ್ಟಿಸಿದೆ.

https://www.instagram.com/reel/DSZpLS0iR1a/?utm_source=ig_embed&ig_rid=f6db4f29-1f04-4b94-a3da-7b50a7fbe762&ig_mid=49175CF2-2D9B-4241-983D-7B05DEE89959#

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಒಮನ್ ದೊರೆ ಶೇಕ್ ಹಮ್ದನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತಂ ಅವರೇ ಸ್ವತಃ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಈ ಸಿಡಿಲಿನ ಬೆಳಕು ವಿಶ್ವದ ಅತೀ ಎತ್ತರದ ಕಟ್ಟಡ ಎನಿಸಿರುವ ಬುರ್ಜ್ ಖಲೀಫಾದ ಮೇಲೆ ಸೊಗಸಾದ ಚಿತ್ತಾರ ನಿರ್ಮಿಸಿದೆ.ದುಬೈ ಎಂಬ ಕ್ಯಾಪ್ಷನ್ ನೀಡಿ ದುಬೈ ರಾಜಕುಮಾರ್ ಶೇಕ್ ಹಂಮ್ದನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಅವರು ಮಳೆ ಹಾಗೂ ಸಿಡಿಲಿನ ಇಮೋಜಿಯನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಮಿಲಿಯನ್‌ಗೂ ಹೆಚ್ಚು ಜನರು ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

You may also like