Home » Helmet: ಬೈಕ್ ಸವಾರರೇ ಗಮನಿಸಿ ಹೆಲ್ಮೆಟ್ ಕುರಿತು ಬಂತು ಹೊಸ ರೂಲ್ಸ್ !!

Helmet: ಬೈಕ್ ಸವಾರರೇ ಗಮನಿಸಿ ಹೆಲ್ಮೆಟ್ ಕುರಿತು ಬಂತು ಹೊಸ ರೂಲ್ಸ್ !!

1 comment
Helmet

Helmet: ಕೇಂದ್ರ ಸರ್ಕಾರ(Central Government)ಹೆಲ್ಮೆಟ್‌ (Helmet) ಗುಣಮಟ್ಟ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತ್ಯೇಕ ಮೂರು ಗುಣಮಟ್ಟ ನಿಯಂತ್ರಣದ ಆದೇಶವನ್ನು ಹೊರಡಿಸಿದೆ.

ಕೇಂದ್ರ ಸರ್ಕಾರ ಪೊಲೀಸ್‌ ಪಡೆಗಳು, ನೀರಿನ ಬಾಟಲ್‌ಗ‌ಳ ವಿತರಕರು, ಬಾಗಿಲುಗಳನ್ನು ಜೋಡಿಸುವವರು ಧರಿಸುವ ಶಿರಸ್ತ್ರಾಣ (ಹೆಲ್ಮೆಟ್‌)ಗಳು ಹೇಗೆ ಇರಬೇಕು ಎಂಬ ಬಗ್ಗೆ ಕಡ್ಡಾಯ ಗುಣಮಟ್ಟದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿಗೆ. ಈ ಕುರಿತು ಮೂರು ಪ್ರತ್ಯೇಕ ಗುಣಮಟ್ಟ ನಿಯಂತ್ರಣದ ಆದೇಶಗಳನ್ನು ಹೊರಡಿಸಿದೆ.ಈ ಮೂರು ಆದೇಶಗಳ ಅನ್ವಯ ಭಾರತೀಯ ಗುಣಮಟ್ಟ ಮಾಪಕ (ಬಿಐಎಸ್‌)ಗಳ ಮಾನ್ಯತೆಯಿಲ್ಲದೆ ಕಳಪೆ ಗುಣಮಟ್ಟದ ಶಿರಸ್ತ್ರಾಣಗಳನ್ನು ಉತ್ಪಾದನೆ, ಇತರ ದೇಶಗಳಿಂದ ಆಮದು ಮಾಡಬಾರದು.

ಕೇಂದ್ರ ಸರ್ಕಾರ ದೇಶೀಯವಾಗಿ ಹೆಲ್ಮೆಟ್‌ಗಳನ್ನು ಉತ್ಪಾದನೆ ಮಾಡುವುದಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ ಯಾವ ದಿನದಿಂದ ಆದೇಶವನ್ನು ಹೊರಡಿಸಲಾಗುತ್ತದೋ ಅಲ್ಲಿಂದ ಆರು ತಿಂಗಳ ಅವಧಿಗೆ ಇದು ಜಾರಿಯಲ್ಲಿರುತ್ತದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಮಂಡಳಿ (ಡಿಪಿಐಐಟಿ) ತಿಳಿಸಿದೆ

ಇದನ್ನೂ ಓದಿ: Mangaluru: ತಂಡದಿಂದ ಚೂರಿ ಇರಿತ; ಮೂವರಿಗೆ ಗಾಯ ,ಆಸ್ಪತ್ರೆಗೆ ದಾಖಲು!

You may also like

Leave a Comment