Home » Tragedy Love Story: 42 ರ ಆಂಟಿಯ ಜೊತೆ 25ವರ್ಷದ ಯುವಕನ ಸಲುಗೆ! ಆಂಟಿ ಸಾವು, ಯುವಕ ಜೈಲುಪಾಲು!! ಅಷ್ಟಕ್ಕೂ ನಡೆದದ್ದೇನು?

Tragedy Love Story: 42 ರ ಆಂಟಿಯ ಜೊತೆ 25ವರ್ಷದ ಯುವಕನ ಸಲುಗೆ! ಆಂಟಿ ಸಾವು, ಯುವಕ ಜೈಲುಪಾಲು!! ಅಷ್ಟಕ್ಕೂ ನಡೆದದ್ದೇನು?

1 comment
Tragedy Love Story

Tragedy Love Story: ಪ್ರೀತಿ ಮಾಯೆ ಹುಷಾರ್ ಎನ್ನುವ ಮಾತನ್ನು ಎಲ್ಲರೂ ಕೇಳಿರುವಂತದ್ದೆ !! 42ರ ಹರೆಯದ ಆಂಟಿಯ ಜೊತೆಗೆ ಪ್ರೇಮ ಸಲ್ಲಾಪದಲ್ಲಿ(Love Story)ಬಿದ್ದಿದ್ದ 25ರ ಯುವಕ ಆಂಟಿಗೆ ಕೈಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಿದ್ದಾನೆ. ಈ ಆಂಟಿ ಪ್ರೇಮ್ ಕಹಾನಿಯಲ್ಲಿ (Tragedy Love Story) ಮಗ ತಾಯಿಯನ್ನು ಕಳೆದುಕೊಂಡರೆ, ನವ ವಿವಾಹಿತೆ ತನ್ನ ಗಂಡನಿಂದ ದೂರವಾಗಿರುವ ಘಟನೆ ಚಿಕ್ಕಮಂಗಳೂರಿನಲ್ಲಿ ನಡೆದಿದೆ.

ದುಡಿಮೆಯ ಸಲುವಾಗಿ ಶೃಂಗೇರಿಗೆ ಬಂದಿದ್ದ 25ರ ಹರೆಯದ ಯುವಕ ತಾನು ಕೆಲಸ ಮಾಡುವ ಸ್ಥಳದಲ್ಲಿ ಆಂಟಿಯೊಂದಿಗೆ ಸ್ನೇಹ ಬೆಳೆಸಿದ್ದನಂತೆ. ಶೃಂಗೇರಿ ತಾಲೂಕಿನ ನೆಮ್ಮಾರು ನಿವಾಸಿಯಾಗಿದ್ದ ವಾಸಂತಿ (42) ಮತ್ತು ಕಳಸ ತಾಲೂಕಿನ ಪ್ರಕಾಶ್ ನಡುವೆ ಸ್ನೇಹ ಪ್ರೀತಿಯಾಗಿ ಬದಲಾಗಿದೆ.ಒಂದೂವರೆ ವರ್ಷ ಇಬ್ಬರ ನಡುವೆ ಸ್ನೇಹ ಸಂಬಂಧ ಚೆನ್ನಾಗಿತ್ತು.ಆದರೆ, ಬರು ಬರುತ್ತಾ ಆಂಟಿಯ ಮೇಲೆ ಇಂಟ್ರೆಸ್ಟ್ ಕಮ್ಮಿಯಾಗಿ ಹಳೇ ಆಂಟಿ ಬೋರ್ ಎನಿಸಿ ಹೊಸ ಹುಡುಗಿಯನ್ನು ಮದುವೆಯಾಗಲು(Marraige )ಯುವಕ ಮುಂದಾಗಿದ್ದ.

ಚಿಕ್ಕಮಗಳೂರಿನಲ್ಲಿ 42 ವರ್ಷ ವಯಸ್ಸಿನ ಆಂಟಿ ಹಿಂದೆ ಬಿದ್ದಿದ್ದ 25ವರ್ಷದ ಯುವಕ ಆಂಟಿಗೆ ಕೈಕೊಟ್ಟು ಬೇರೆ ಹುಡುಗಿಯನ್ನು ಮದುವೆಯಾಗಿದ್ದ. ಈ ವಿಚಾರ ತಿಳಿದು ಆಂಟಿ ಬೇಸರದಿಂದ ಅವನನ್ನು ಭೇಟಿಯಾಗಿ ಬೇಸರ ಹೊರ ಹಾಕಿ ಜಗಳವಾಡಿದ್ದಾಳೆ. ಅವನನ್ನ ಕಾಫಿ ಎಸ್ಟೇಟ್‍ಗೆ(Coffee Estate)ಕರೆಸಿದ್ದ ವಾಸಂತಿ ತನ್ನ ಜೊತೆಗೆಯೇ ಇರಬೇಕಿತ್ತು. ಮತ್ತೊಂದು ಮದ್ವೆ ಆಗಿದ್ದು ಯಾಕೆ ಎಂದು ಖ್ಯಾತೆ ತೆಗೆದಿದ್ದಾಳೆ. ವಿಷ ಕುಡಿತೀನಿ ಎಂದು ಕೂಡ ಹೆದರಿಸಿದ್ದಾಳಂತೆ. ಈ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು 42ರ ಆಂಟಿಗೆ 25ರ ಯುವಕ ಕೊಟ್ಟ ಒಂದೇ ಒಂದು ಏಟಿಗೆ ಆಂಟಿ ಇಹಲೋಕದ ಪಯಣ ಮುಗಿಸಿಬಿಟ್ಟಿದ್ದಾಳೆ.

ವಾಸಂತಿ ಮೂರ್ಛೆ ಹೋಗಿದ್ದಾಳೆ ಎಂದುಕೊಂಡಿದ್ದ ಯುವಕ(Boy )ಆಕೆಯ ಮುಖಕ್ಕೆ ನೀರು ಹಾಕಿದರು ಆಕೆಗೆ ಪ್ರಜ್ಞೆ ಬಂದಿಲ್ಲ. ಕೊನೆಗೆ ಆಕೆ ಮೃತ ಪಟ್ಟಿರುವ ವಿಚಾರ ಗೊತ್ತಾಗುತ್ತಿದ್ದಂತೆ ಯುವಕ ಪ್ರಕಾಶ್ ಮೃತದೇಹವನ್ನ 25 ಮೀಟರ್ ಎಳೆದು ಮುರಿದು ಬಿದ್ದಿದ್ದ ಮರದ ಬುಡಕ್ಕೆ ಆಕೆಯ ಮೃತದೇಹ (Deadbody)ಹಾಕಿ ಮಣ್ಣು ಮುಚ್ಚಿ ಬಂದಿದ್ದನಂತೆ. ಇದಾದ ಬಳಿಕ ತನಗೇನು ಗೊತ್ತೇ ಇಲ್ಲವೇನೋ ಎಂಬಂತೆ ಯುವಕ ಹೆಂಡತಿ ಜೊತೆಗೆ ಸುಖವಾಗಿದ್ದ. ಈ ಘಟನೆ ನಡೆದು ಐದು ತಿಂಗಳ ಬಳಿಕ ಆರೋಪಿಯನ್ನು ಪತ್ತೆ ಹಚ್ಚಿರುವ ಶೃಂಗೇರಿ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Job Opportunities: KSRTC, BMTC ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಯ ಒಟ್ಟು 13 ಸಾವಿರ ಹುದ್ದೆಗಳಿಗೆ ಶೀಘ್ರ ಭರ್ತಿ! ಸಾರಿಗೆ ಸಚಿವರು ನೀಡಿದ್ರು ಬಿಗ್‌ ಅಪ್ಡೇಟ್‌!!!

You may also like

Leave a Comment