Home » Chitradurga Murder Case : ಹೆತ್ತ ತಾಯಿಯನ್ನೇ ಚಾಕುವಿನಿಂದ ಚುಚ್ಚಿ ಕೊಂದ ಪಾಪಿ ಮಗ!

Chitradurga Murder Case : ಹೆತ್ತ ತಾಯಿಯನ್ನೇ ಚಾಕುವಿನಿಂದ ಚುಚ್ಚಿ ಕೊಂದ ಪಾಪಿ ಮಗ!

1 comment
Chitradurga Murder Case

Chitradurga Murder Case: ತಾಯಿ ಕಣ್ಣಿಗೆ ಕಾಣುವ ದೇವರು. ಅಂಥಹ ಜೀವವನ್ನೇ ಮಗನೊಬ್ಬ ಚಾಕುಚಿನಿಂದ ಚುಚ್ಚಿ ಕೊಂದಿರುವ ಘಟನೆಯೊಂದು ಚಿತ್ರದುರ್ಗದ(Chitradurga Murder Case) ಮೊಳಕಾಲ್ಮೂರು ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ.

ಅಂಜಿನಮ್ಮ (58) ಎಂಬಾಕೆಯೇ ಮೃತ ಮಹಿಳೆ. ಶಿವಾರೆಡ್ಡಿ (35) ಎಂಬಾತನೇ ಕೊಲೆಗೈದ ಪಾಪಿ ಮಗ.

ಶಿವಾರೆಡ್ಡಿ ಹಗಲು ರಾತ್ರಿಯೆನ್ನದೇ ಕುಡಿಯುವುದನ್ನ ವೃತ್ತಿಯನ್ನಾಗಿಸಿದ್ದ. ದಿನಾ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದ ಶಿವಾರೆಡ್ಡಿ ತಾಯಿ ಅಂಜಿನಮ್ಮ ಬೇಸತ್ತು ಹೋಗಿದ್ದರು. ಹಾಗಾಗಿ ಹಣ ಕೊಡುವುದನ್ನು ಅಂಜಿನಮ್ಮ ಈತನ ಕುಡಿತಕ್ಕೆ ನಿಲ್ಲಿಸಿದ್ದರು. ಶಿವಾರೆಡ್ಡಿ ಸುಮಾರು 10 ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದು, ಈತನ ಚಟಕ್ಕೆ ಬೇಸತ್ತ ಪತ್ನಿ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು.

ಇದೇ ಈತನ ಸಿಟ್ಟು ಹೆಚ್ಚಾಗಲು ಕಾರಣವಾಗಿತ್ತು. ಶಿವಾರೆಡ್ಡಿ ಕುಡಿಯಲು ಹಣ ನೀಡದ್ದಕ್ಕೆ, ಹಾಗೂ ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ ಎಂದು ಕ್ಯಾತೆ ತೆಗೆದಿದ್ದ. ಗಲಾಟೆ ಮಾಡಿದ್ದ. ನನ್ನ ಹೆಂಡ್ತಿ ಬಿಟ್ಟು ಹೋದಮೇಲೆ ನನಗೆ ಸರಿಯಾಗಿ ಊಟ ಹಾಕ್ತಿಲ್ಲ, ನೀನು ಇದ್ದು ಏನು ಪ್ರಯೋಜನ, ನಿನ್ನನ್ನು ಸಾಯಿಸಿದರೆ ನನಗೆ ನೆಮ್ಮದಿ ಎಂದು ಸಿಟ್ಟಿಗೆದ್ದು ಚಾಕುವಿನಿಂದ ತಾಯಿಗೆ ಚುಚ್ಚಿ ಕೊಂದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಂಜಿನಮ್ಮಳನ್ನು ಕಂಡು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸಲಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶಿವಾರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ರಾಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Pratap simha Name Change: ಹೆಸರು ಬದಲಿಸಿಕೊಂಡ ಪ್ರತಾಪ್‌ ಸಿಂಹ; ಹಾಗಾದರೆ ಇನ್ನು ಯಾವ ಹೆಸರು ಗೊತ್ತೇ?

You may also like

Leave a Comment