Home » CM Yogi: ಇನ್ಮುಂದೆ ಅಂಗಡಿಗಳ ಎದುರು ಮಾಲೀಕರು ಹೆಸರನ್ನೂ ನಮೂದಿಸಬೇಕು, ಸಿಎಂ ಯೋಗಿ ಖಡಕ್ ಆದೇಶ !! ಹೆಸರನ್ನೇ ಬದಲಿಸಿದ ಮುಸ್ಲಿಂ ವ್ಯಕ್ತಿ

CM Yogi: ಇನ್ಮುಂದೆ ಅಂಗಡಿಗಳ ಎದುರು ಮಾಲೀಕರು ಹೆಸರನ್ನೂ ನಮೂದಿಸಬೇಕು, ಸಿಎಂ ಯೋಗಿ ಖಡಕ್ ಆದೇಶ !! ಹೆಸರನ್ನೇ ಬದಲಿಸಿದ ಮುಸ್ಲಿಂ ವ್ಯಕ್ತಿ

0 comments
CM Yogi

CM Yogi: ಸಿಎಂ ಯೋಗಿ (CM Yogi) ಆದಿತ್ಯನಾಥ ಅವರು, ಕನ್ವರ್ ಮಾರ್ಗದಲ್ಲಿರುವ ಢಾಬಾಗಳು, ಅಂಗಡಿಗಳು ಅಥವಾ ಬಂಡಿಗಳ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿಸಿದ್ದಾರೆ.

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ4 ಆರೋಪಿ ರಘು ತಾಯಿ ನಿಧನ

25 ವರ್ಷಗಳಿಂದ ದೆಹಲಿ – ಡೆಹ್ರಾಡೂನ್‌ನ ರಾಂಪುರಿ ಬಳಿ ಸಲೀಂ ಎಂಬಾತ ಸಂಗಮ್ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ನಡೆಸುತ್ತಿದ್ದನು. ಈತ ಕನ್ವರ್ ಯಾತ್ರಿಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್-ಜಿಲ್ಲಾಡಳಿತವೂ ಅಂಗಡಿಯವರಿಗೆ ತಮ್ಮ ಗುರುತಿನ ಫಲಕವನ್ನು ಅಳವಡಿಸುವಂತೆ ಹೇಳಿದ್ದು ಇದೀಗ ಸಸ್ಯಹಾರಿ ರೆಸ್ಟೋರೆಂಟ್ ಗೆ ಸಲೀಂ ಪ್ಯೂರ್ ವೆಜಿಟೇರಿಯನ್ ರೆಸ್ಟೋರೆಂಟ್ ಎಂಬ ಬೋರ್ಡ್ ಅನ್ನು ಹಾಕಲಾಗಿದೆ.

ಆಹಾರ ಸುರಕ್ಷತಾ ಇಲಾಖೆಯ ನೋಂದಣಿಯಲ್ಲೂ ಸಲೀಂ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಕನ್ವರ್ ಮಾರ್ಗ್‌ನಲ್ಲಿರುವ ಎಲ್ಲಾ ಅಂಗಡಿಗಳು, ಢಾಬಾಗಳು ಮತ್ತು ಗಾಡಿಗಳಲ್ಲಿ ಅಂತಹ ಬದಲಾವಣೆಗಳು ಕಾಣಸಿಗುತ್ತಿವೆ. ಹೆಸರು ಮತ್ತು ಗುರುತು ಬಹಿರಂಗಪಡಿಸಲು ನನ್ನ ಅಭ್ಯಂತರವಿಲ್ಲ ಎಂದು ಧಾಬಾ ಮಾಲೀಕ ಸಲೀಂ ಹೇಳಿದ್ದಾರೆ.

ಡಿಎಂ ಅರವಿಂದ ಮಲ್ಲಪ್ಪ ಬಂಗಾರಿ ಮತ್ತು ಎಸ್‌ಎಸ್‌ಪಿ ಅಭಿಷೇಕ್ ಸಿಂಗ್ ಅವರು ಕನ್ವರಿ ಯಾತ್ರಿಗಳು ತಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಎಡವಟ್ಟಾದರೂ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಭಕ್ತರ ನಂಬಿಕೆಯ ದೃಷ್ಠಿಯಿಂದ ಹೋಟೆಲ್ ಮತ್ತು ಢಾಬಾ ನಿರ್ವಾಹಕರು ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಲು ಮನವಿ ಮಾಡಲಾಗಿತ್ತು. ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಜಿಂದಾಲ್ ಮಾತನಾಡಿ, ಗುರುತನ್ನು ಬಹಿರಂಗಪಡಿಸುವುದು ಒಳ್ಳೆಯದ್ದು, ಇದು ಯಾವುದೇ ದಿಕ್ಕಿನಲ್ಲಿ ಕಾನೂನುಬಾಹಿರವಲ್ಲ. ಏಕೆಂದರೆ ಇದರಿಂದ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ ಮತ್ತು ಯಾರ ಹಕ್ಕುಗಳಿಗೂ ಧಕ್ಕೆಯಾಗುವುದಿಲ್ಲ ಎಂದಿದ್ದಾರೆ.

Naresh crying video: ನರೇಶ್ ಗೆ ಮತ್ತೇ ಸಂಕಷ್ಟ! ʼಅವಳು ನನ್ನ ಬಿಟ್ಟು ಹೋದ್ಳುʼ ಅಂತ ಗೋಳಾಡಿದ ನರೇಶ್..! ಅಷ್ಟಕ್ಕೂ ಪವಿತ್ರಾಗೆ ಏನಾಯ್ತು?

 

You may also like

Leave a Comment