Ujjwala yojana: ಉಜ್ವಲ ಯೋಜನೆಯ(Ujjwala yojana) ಫಲಾನುಭವಿಗಳಿಗೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಇನ್ಮುಂದೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡೋ ಪ್ಲ್ಯಾನ್ ಮಾಡಿದೆ ಸರ್ಕಾರ. ಇಂಥದ್ದೊಂದು ಯೋಜನೆಯನ್ನು ಕಾಂಗ್ರೆಸ್ ಸರಕಾರ ಯೋಜಿಸಿದೆ. ಒಟ್ಟು 14 ಲಕ್ಷ ಫಲಾನುಭವಿಗಳಿಗೆ 60 ಕೋಟಿ ರೂ. ಸಬ್ಸಿಡಿ ವರ್ಗಾವಣೆ ಮಾಡಿ ಕೊಡಮಾಡಲಿದೆ ಕಾಂಗ್ರೆಸ್ ಸರ್ಕಾರ.
ಉಜ್ವಲ ಸಿಲಿಂಡರ್‌ನ ಬೆಲೆ 500 ರೂ. ಗೆ ನೀಡುವ ಮೊದಲ ರಾಜ್ಯವಾಗಲಿದೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ. ಅಲ್ಲಿ ಬಿಪಿಎಲ್ ಗ್ಯಾಸ್ ಸಂಪರ್ಕ ಹೊಂದಿರುವವರಿಗೂ ಸಹಾಯಧನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಮೊನ್ನೆ, ಕಳೆದ ಸೋಮವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಜ್ಯಮಟ್ಟದ ಲಾಭಾರ್ತಿ ಉತ್ಸವದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತವನ್ನು ವರ್ಗಾಯಿಸಿದ್ದರು.
ಅವತ್ತು ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್, “ಬಿಜೆಪಿ ನಮ್ಮ ಯೋಜನೆಗಳನ್ನು ನಿಲ್ಲಿಸುತ್ತದೆ. ಆದ್ರೆ ನಾವು ಸಿಲಿಂಡರ್ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಪ್ರಚಾರ ನೀಡಿದ್ದೇವೆ” ಎಂದು ಅವರು ಹೇಳಿದ್ದಾರೆ. ಕಾನೂನನ್ನು ತಂದು ಆ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ ಅಶೋಕ್ ಗೆಹ್ಲೋಟ್. ” ನಮ್ಮದು ಚುನಾವಣಾ ಕೇಂದ್ರಿತ ಯೋಜನೆ ಅಲ್ಲ. ಏಕೆಂದರೆ ವಿದೇಶಗಳಲ್ಲಿ ಜನರಿಗೆ ಸಾಮಾಜಿಕ ಭದ್ರತೆಯನ್ನು ಕೊಡುವುದರ ರೀತಿಯಲ್ಲೇ ನಾವು ಕೊಡಲು ಉದ್ದೇಶಿಸಿದ್ದೇವೆ ಎಂದಿದ್ದಾರೆ ಅಶೋಕ್ ಗೆಹ್ಲೋಟ್ .
ಈಗ ನೀಡಿದ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಹಣದುಬ್ಬರ ಪರಿಹಾರ ಪ್ಯಾಕೇಜ್‌ನ ಭಾಗವಾಗಿದೆ. ರಾಜಸ್ಥಾನ ರಾಜ್ಯದಲ್ಲಿ ಸರಿಸುಮಾರು 76 ಲಕ್ಷ ಉಜ್ವಲ ಮತ್ತು ಬಿಪಿಎಲ್ ಫಲಾನುಭವಿಗಳಿದ್ದು, ಹಣದುಬ್ಬರ ಪರಿಹಾರ ಕ್ಯಾಂಪ್‌ಗಳಲ್ಲಿ 14 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 750 ಕೋಟಿ ರೂ. ಆರ್ಥಿಕ ಹೊರೆ ಬೀಳುವ ನಿರೀಕ್ಷೆ ಇದೆ.
ಜತೆಗೆ, ಈ ತಿಂಗಳ ಆರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕರ್ನಾಟಕದ ಗೃಹ ಜ್ಯೋತಿ ಯೋಜನೆಯಂತೆ ಫ್ರೀ ವಿದ್ಯುತ್ ಘೋಷಿಸಿದ್ದು, ಅವರಿಂದ100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದು, ಅದರಿಂದ 1.24 ಕೋಟಿ ಕುಟುಂಬಗಳಿಗೆ ಪ್ರಯೋಜನ ಆಗಲಿದೆಯಂತೆ.
ಇದನ್ನೂ ಓದಿ: Gruha Lakshmi Scheme: ಮಹಿಳೆಯರೇ ಇತ್ತ ಗಮನಿಸಿ, ಗುಡ್‌ನ್ಯೂಸ್! ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ!!!
