Davangere: ದಾವಣಗೆರೆಯ ವಿಶ್ವವಿದ್ಯಾಲಯದ ಆವರಣದಲ್ಲೀ ಸಿನಿಮೀಯ ಮಾದರಿಯಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಕಿಡ್ನ್ಯಾಪ್ ಮಾಡಿದ ಘಟನೆಯೊಂದು ನಡೆದಿದೆ. ಈ ಕೃತ್ಯದ ವೀಡಿಯೋ ವೈರಲ್ ಆಗಿದ್ದು, ಯುವತಿಯ ತಾಯಿ ಮತ್ತು ಇಬ್ಬರು ಯುವಕರು ಸೇರಿ ಕಿಡ್ನ್ಯಾಪ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಕಿಡ್ನ್ಯಾಪ್ ಮಾಡುವ ಸಂದರ್ಭ ಯುವತಿ ಚೀರಾಡಿದ್ದು, ತಕ್ಷಣ ವಿವಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗ ಸ್ಥಳಕ್ಕೆ ಓಡಿ ಬಂದು ಯುವತಿಯ ರಕ್ಷಣೆ ಮಾಡಿದ್ದಾರೆ.
ಈ ಘಟನೆ ದಾವಣೆಗೆರೆ(Davangere) ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಇರುವ ದಾವಣಗೆರೆ ವಿಶ್ವವಿದ್ಯಾಲಯದ ಮುಂದೆ ನಡೆದಿದೆ. ಯುವತಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ. ಈ ಕಿಡ್ನ್ಯಾಪ್ ಹಿಂದಿದೆ ರೋಚಕ ಕಹಾನಿ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದಕ್ಕೆಲ್ಲ ಕೌಟುಂಬಿಕ ಸಮಸ್ಯೆ ಕಾರಣ ಎನ್ನಲಾಗಿದೆ. ಯುವತಿಗೆ ಬಾಲ್ಯವಿವಾಹವಾಗಿದ್ದು, ಇದು ನನಗೆ ಇಷ್ಟವಿಲ್ಲ ಎಂದು ಯುವತಿ ಹೇಳಿದ್ದಾಳೆ. ನನ್ನನ್ನು ಮದುವೆಯಾಗಿರುವವನು ಇನ್ನೊಬ್ಬಳ ಜೊತೆ ಅಫೇರ್ ಇಟ್ಟುಕೊಂಡಿದ್ದು, ಇದರ ಬಗ್ಗೆ ಎಲ್ಲಾ ಡಿಟೇಲ್ಸ್ ನನ್ನ ಫೋನ್‌ನಲ್ಲಿ ಇದೆ. ಇದನ್ನು ನನ್ನ ಹೆತ್ತವರು ತೆಗೆದುಕೊಂಡಿದ್ದಾರೆ ಎಂದು ಯುವತಿ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರಲ್ಲಿ ತನ್ನ ಹೇಳಿಕೆ ನೀಡಿದ್ದಾಳೆ.
ಪೋಷಕರ ಜೊತೆ ಹೋಗಲು ಯುವತಿ ಇಷ್ಟಪಡದ ಕಾರಣ ಪೊಲೀಸರು ಯುವತಿಯನ್ನು ವಿಶ್ವವಿದ್ಯಾಲಯದ ಹಾಸ್ಟೆಲ್‌ಗೆ ತೆರಳಿದ್ದಾಳೆ. ಯುವತಿಯನ್ನು ಮದುವೆಯಾಗಿರುವ ಯುವಕ ಬೇರೊಬ್ಬಳ ಜೊತೆ ಅಫೇರ್ ಇಟ್ಟುಕೊಂಡಿದ್ದಾನೆ ಯುವತಿ ದೂರು ನೀಡಿದ್ದು, ನನ್ನ ಫೋನ್‌ನಲ್ಲಿ ಎಲ್ಲಾ ಡಿಟೇಲ್ಸ್ ಇದೆ. ಅದು ಪೋಷಕರಲ್ಲಿ ಇದೆ ಎಂದು ಯುವತಿ ಪೊಲೀಸರಲ್ಲಿ ಹೇಳಿದ್ದಾಳೆ. ಪೋಷಕರ ಜೊತೆ ಹೋಗಲೊಪ್ಪದ ಯುವತಿ ಪೊಲೀಸರ ಮಧ್ಯಸ್ಥಿಕೆಯಿಂದ ಹಾಸ್ಟೆಲ್‌ಗೆ ವಾಪಸ್ ಹೋಗಿದ್ದಾಳೆ.
ಇದನ್ನೂ ಓದಿ: 17ವರ್ಷದ ವಿದ್ಯಾರ್ಥಿಗೆ ಪಕ್ಕದ ಮನೆಯ ಆಂಟಿಯೊಂದಿಗೆ ಅಕ್ರಮ ಸಂಬಂಧ! ಪದವಿ ವಿದ್ಯಾರ್ಥಿ ನಂತರ ಮಾಡಿದ್ದು ಘೋರ ಕೃತ್ಯ!!!
