Home » ಬೆಳಕಿನ ಹಬ್ಬಕ್ಕೆ ಮೋದಿ ಸರ್ಕಾರದಿಂದ ಸಿಕ್ಕಿತು ಭರ್ಜರಿ ಆಫರ್!! ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಕ್ರಮ

ಬೆಳಕಿನ ಹಬ್ಬಕ್ಕೆ ಮೋದಿ ಸರ್ಕಾರದಿಂದ ಸಿಕ್ಕಿತು ಭರ್ಜರಿ ಆಫರ್!! ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಕ್ರಮ

0 comments

ನವದೆಹಲಿ:ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿಗೆ ಮೋದಿ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಏರಿಕೆ ಕಂಡಿದ್ದ ಇಂಧನ ಬೆಲೆಯು ಇಳಿಕೆ ಕಾಣಲಿದೆ. ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಂಡ ಬಳಿಕ ದೀಪಾವಳಿಯ ಮುನ್ನಾ ದಿನದಂದು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಎಂದು ಘೋಷಿಸಿದೆ.

ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 5 ರೂ. ಮತ್ತು 10 ರೂಪಾಯಿ ಇಳಿಕೆಯಾಗಲಿದೆ.

ಪೈಸೆಗಳ ಲೆಕ್ಕದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಹಲವು ಕಡೆ ಪೆಟ್ರೋಲ್ 120 ರೂ. ದಾಟಿದ್ದು, ಡೀಸೆಲ್ ದರ 110 ರೂ. ಗಡಿ ದಾಟಿದೆ. ಇಂಧನ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿತ್ತು. ಇದನ್ನು ಮನಗಂಡು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವುದಾಗಿ ಘೋಷಿಸಲಾಗಿದೆ.

ಒಟ್ಟಿನಲ್ಲಿ ಕಳೆದ ಹಲವು ಸಮಯಗಳಿಂದ ಏರಿಕೆ ಕಂಡಿದ್ದ ಇಂಧನ ಬೆಲೆಯೂ ನಿಧಾನವಾಗಿ ಇಳಿಕೆ ಕಾಣುವತ್ತ ಸಾಗುವಲ್ಲಿ ಇದು ಮೊದಲನೇ ಹೆಜ್ಜೆಯಾಗಿರಬಹುದು.ಅಂತೂ ಹಬ್ಬದ ದಿನದಂದೇ ಬೆಲೆ ಇಳಿಕೆ ಮಾಡಿದ ಮೋದಿಯ ಬಗೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ಜೊತೆಗೆ ಖುಷಿ ವ್ಯಕ್ತವಾಗಿದೆ.

You may also like

Leave a Comment