Home » Different Love Story: ಬ್ರಹ್ಮಚಾರಿಯೊಂದಿಗೆ 10 ಮಕ್ಕಳ ತಾಯಿ ಪರಾರಿ! ಮಕ್ಕಳ ಮೋಹಕ್ಕೆ ವಾಪಸ್ ಬಂದಾಗ ಗ್ರಾಮದಲ್ಲಿ ನಡೆದಿತ್ತು ಅಚ್ಚರಿ !

Different Love Story: ಬ್ರಹ್ಮಚಾರಿಯೊಂದಿಗೆ 10 ಮಕ್ಕಳ ತಾಯಿ ಪರಾರಿ! ಮಕ್ಕಳ ಮೋಹಕ್ಕೆ ವಾಪಸ್ ಬಂದಾಗ ಗ್ರಾಮದಲ್ಲಿ ನಡೆದಿತ್ತು ಅಚ್ಚರಿ !

1 comment
Different Love Story

Different Love Story : ಪ್ರೀತಿಗೆ ಕಣ್ಣಿಲ್ಲ ಎಂದು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ವಿಚಾರ. ಅಂತೆಯೇ, ಇದೀಗ ಉತ್ತರ (Uttar Pradesh) ಗೋರಖ್‌ಪುರದಲ್ಲಿ (Gorakhpur) ನಡೆದ ಘಟನೆ ಅದಕ್ಕೆ ಸಾಕ್ಷಿಯಾಗಿದೆ. 10 ಮಕ್ಕಳ ತಾಯಿಯಾಗಿರುವ (Mother) ಮಹಿಳೆಯೊಬ್ಬರು ಬ್ರಹ್ಮಚಾರಿ ಆಗಿದ್ದ ಯುವಕನೊಂದಿಗೆ ಪ್ರೀತಿಯ ಬಲೆಗೆ(different love story) ಬಿದ್ದಿದ್ದು, ಊರಿನವರೆಲ್ಲಾ ಸೇರಿ ಆ ಇಬ್ಬರಿಗೂ ಮದುವೆ ಮಾಡಿಸಿರುವ ಅಚ್ಚರಿಯ ಘಟನೆ ನಡೆದಿದೆ.

ಈ ಪ್ರಕರಣವು ಬಾದಲ್‌ಗಂಜ್ ಜಿಲ್ಲೆಯ ಚಿಲ್ಲುಪಾರ್ ಪ್ರದೇಶದಲ್ಲಿ ನಡೆದಿದೆ. ಸೋನಿ ದೇವಿ ಎಂಬುವವರ ಪತಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸೋನಿದೇವಿ 10 ಮಕ್ಕಳ ತಾಯಿಯಾಗಿದ್ದು, ಪತಿಯ ಮರಣದ ನಂತರ, ಪಕ್ಕದ ಕಿಲ್ ಗ್ರಾಮದ ನಿವಾಸಿ ಬಾಲೇಂದ್ರ ಅಲಿಯಾಸ್ ಬಲಾಯಿ ಯಾದವ್ ಎಂಬಾತನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಇಬ್ಬರ ನಡುವೆ ಬಹಳ ದಿನಗಳಿಂದ ಸಂಬಂಧ ನಡೆಯುತ್ತಿತ್ತು ಎನ್ನಲಾಗಿದ್ದು, ಕಳೆದ ಒಂದು ವರ್ಷದಿಂದ ಇಬ್ಬರೂ ಮನೆ ಬಿಟ್ಟು ನಾಪತ್ತೆಯಾಗಿದ್ದರು.

ಆದರೆ ಮಕ್ಕಳ ಮೇಲಿನ ಮಮತೆ ಅವಳನ್ನು ಮತ್ತೆ ಊರಿಗೆ ಬರುವಂತೆ ಮಾಡಿದೆ. ಮಹಿಳೆಯು ಒಂದು ವರ್ಷದ ನಂತರ ತನ್ನ ಮಕ್ಕಳನ್ನು ಭೇಟಿಯಾಗಲು ಗ್ರಾಮಕ್ಕೆ ಆಗಮಿಸಿದ್ದಾಳೆ. ಈ ವಿಷಯ ಹೇಗೋ ಗ್ರಾಮದವರಿಗೆ ಗೊತ್ತಾದಾಗ ಪಂಚಾಯತಿ ನಡೆಸಲಾಗಿದೆ.

ನಂತರ ಮಕ್ಕಳ ಒಪ್ಪಿಗೆ ಪಡೆದು ಮಹಿಳೆ ಮತ್ತು ಆಕೆಯ ಪ್ರೇಮಿ ಇಬ್ಬರೂ ಒಟ್ಟಿಗೆ ವಾಸಿಸುವ ಬಗ್ಗೆ ಮಾತನಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.

ಇದೀಗ ನಾನು ಬ್ರಹ್ಮಚಾರಿ ಎಂದು ತಿರುಗುತ್ತಿದ್ದ, ಬಾಳೇಂದ್ರ ಅಲಿಯಾಸ್ ಬಲಾಯಿ ದೇವರ ಸಾಕ್ಷಿಯಾಗಿ ಶಿವಾಲಯದಲ್ಲಿ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಸೋನಿಗೆ ತಾಳಿ ಕಟ್ಟಿದ್ದಾನೆ. ಮದುವೆಯಾದ ನಂತರ ವಧು ಸೋನಿಯನ್ನು ಗ್ರಾಮಸ್ಥರು ಬಾಲೇಂದ್ರ ಅಲಿಯಾಸ್ ಬಾಳ್ವೆ ಎಂಬಾತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಗ್ರಾಮದ ಪಿ.ಜಿ.ಕಾಲೇಜಿನ ವ್ಯವಸ್ಥಾಪಕ ಜಯಪ್ರಕಾಶ್ ಶಾಹಿ ಹಾಗೂ ಮುಖ್ಯ ಪ್ರತಿನಿಧಿ ಸತೀಶ್ ಶಾಹಿ ಎಂಬುವವರು ಈ ಬಗ್ಗೆ ಮಾತನಾಡಿ, ಬಾಲೇಂದ್ರ ಆಕೆಯನ್ನು ವಿವಾಹವಾಗಿ ಹೊಸ ಜೀವನ ನೀಡಿದ್ದಾನೆ. ಜೊತೆಗೆ 10 ಅನಾಥ ಮಕ್ಕಳಿಗೆ ತಂದೆಯ ನೆರಳು ಸಿಕ್ಕಿದೆ. ಈ ಸಂಬಂಧದಿಂದ ಇಬ್ಬರೂ ಸಂತೋಷವಾಗಿದ್ದಾರೆ. ಮಹಿಳೆಯ ಮಕ್ಕಳಿಗೂ ಈ ಸಂಬಂಧದಿಂದ ಯಾವುದೇ ತೊಂದರೆ ಇಲ್ಲ. ಮಕ್ಕಳಿಗೆ ಈ ಬಗ್ಗೆ ಮೊದಲೇ ತಿಳಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಯೋಗಿ ಬಯಸಿದ ಬೋಗ ತಾನಾಗಿ ದೊರಕಿದಂತೆ ಆಗಿದೆ.

ಇದನ್ನೂ ಓದಿ: ಮಾವು ಕಾಮೋತ್ತೇಜಕವೇ ? ಮೊಘಲ್ ಸಾಮ್ರಾಜ್ಯದ ದೊರೆ ಅದಕ್ಕಾಗೇ ಸವೀತಾ ಇದ್ದ ಮಾವು !

You may also like

Leave a Comment