Home » Himachala pradesh: ಜನರು ಮಾಂಸ ತಿನ್ನುವುದೇ ಭೂಕಂಪ, ಮೇಘ ಸ್ಪೋಟಕ್ಕೆ ಕಾರಣ ?!! ಅರೇ.. ಏನಿದು ಶಾಕಿಂಗ್ ನ್ಯೂಸ್?

Himachala pradesh: ಜನರು ಮಾಂಸ ತಿನ್ನುವುದೇ ಭೂಕಂಪ, ಮೇಘ ಸ್ಪೋಟಕ್ಕೆ ಕಾರಣ ?!! ಅರೇ.. ಏನಿದು ಶಾಕಿಂಗ್ ನ್ಯೂಸ್?

0 comments

Himachala pradesh: ಹಿಮಾಚಲ ಪ್ರದೇಶದ(Himachala pradesh) ಮಂಡಿ ಐಐಟಿ ನಿರ್ದೇಶಕ ಲಕ್ಷ್ಮೀಧ‌ರ್ ಬೆಹೆರಾ(Lakshmidhar behera) ಅವರು ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಮೇಘಸ್ಫೋಟಕ್ಕೆ ಶಾಕಿಂಗ್ ರೀತಿಯಲ್ಲಿ ಕಾರಣವನ್ನು ತಿಳಿಸಿದ್ದು ಭಾರೀ ವಿವಾದಕ್ಕೆ ಕಾರಣರಾಗಿದೆ.

ಹೌದು, ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟಕ ಹಾಗೂ ಭೂಕುಸಿತಗಳ ಪರಿಣಾಮದಿಂದಾಗಿ ಸಾಕಷ್ಟು ಸಾವು ನೋವುಗಳು ಹಾಗೂ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ರೀತಿಯಾಗಲು ಜನರು ಹೆಚ್ಚು ಮಾಂಸ ಸೇವನೆ ಮಾಡುವುದೇ ಕಾರಣ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಜನರು ಮಾಂಸಾಹಾರ ತಿನ್ನೋದು ಜಾಸ್ತಿಯಾಗಿದೆ ಅದೇ ಕಾರಣಕ್ಕಾಗಿ ಇಲ್ಲಿ ಮೇಘಸ್ಪೋಟ ಹಾಗೂ ಭೂಕುಸಿತಗಳು ನಿರಂತರವಾಗಿ ಆಗುತ್ತಿದೆ ಎಂದು ಐಐಟಿ ಮಂಡಿಯ ನಿರ್ದೇಶಕ ಲಕ್ಷ್ಮೀಧರ್‌ ಬೆಹರಾ ವಿಲಕ್ಷಣ ತರ್ಕವನ್ನು ಮುಂದಿಟ್ಟಿದ್ದಾರೆ.

Chikkaballapura: ‘ಓ ನಲ್ಲಾ, ನೀ ನಲ್ಲಾ ಚಿಕ್ಕಬಳ್ಳಾಪುರಕ್ಕೆ ನೀ ಲಾಯಕ್ಕಲ್ಲ’ – ಅಭ್ಯರ್ಥಿ…

ಈ ಕುರಿತು ಮಾತನಾಡಿದ ಅವರು ಪ್ರಾಣಿಗಳ ವಧೆಯನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ಅವನತಿ ಹೊಂದುತ್ತದೆ. ಮುಗ್ಧ ಪ್ರಾಣಿಗಳಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಆದರೂ ಜನರು ತಮ್ಮ ಕೌರ್ಯವನ್ನು ನಿಲ್ಲಿಸುತ್ತಿಲ್ಲ. ಮಾಂಸ ತಿನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಹಿಮಾಚಲ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಬೆಹರಾ ಹೇಳಿದ್ದಾರೆ.

ವಿದ್ಯಾರ್ಥಿಗಳು ಮಾಂಸಾಹಾರ ಸೇವನೆಯಿಂದ ದೂರವಿರಬೇಕು ಎಂದು ಕರೆ ನೀಡಿದ ಅವರು, ಇದು ಉತ್ತಮ ಮನುಷ್ಯರಾಗುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ನಂತರದ ವಿವಾದಕ್ಕೆ ಬೆಹೆರಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರ ಹೇಳಿಕೆಗಳು ಆನ್‌ಲೈನ್ ಬಳಕೆದಾರರಿಂದ ಟೀಕೆಗೆ ಒಳಗಾಗಿದ್ದವು. ವಾಣಿಜ್ಯೋದ್ಯಮಿ ಮತ್ತು ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿ ಸಂದೀಪ್ ಮನುಧಾನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಧಃಪತನ ಎನ್ನುವುದು ಈಗ ಸಂಪೂರ್ಣವಾಗಿದೆ.

ccv

Veena Kashappanavar: ಕಾಂಗ್ರೆಸ್’ಗೆ ಮುಳುವಾದ ಕಾಂಗ್ರೆಸ್ ಶಾಸಕನ ಪತ್ನಿ !!

ಈ ಮೂಢನಂಬಿಕೆಯ ಮೂರ್ಖರು 70 ವರ್ಷಗಳ ಕಾಲ ನಿರ್ಮಾಣ ಮಾಡಿದ್ದನ್ನು ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ನಿರ್ದೇಶಕರ ಈ ಹೇಳಿಕೆ ಕುರಿತು ಸಾಕಷ್ಟು ವಿರೋಧ, ಟೀಕೆಗಳು ವ್ಯಕ್ತವಾಗಿವೆ. ಬಯೋಫಿಸಿಕ್ಸ್ ಪ್ರೊಫೆಸರ್ ಗೌತಮ್ ಮೆನನ್ ಈ ಬಗ್ಗೆ ಮಾತನಾಡಿದ್ದು “ಪ್ರಸ್ತುತ ದಿನಮಾನದಲ್ಲಿ, ಐಐಟಿ ಮಂಡಿಯ ನಿರ್ದೇಶಕರಂತಹ ವೀಕ್ಷಣೆಗಳು ಇಲ್ಲಿ ಕಾಣಿಸಿಕೊಂಡಿರುವುದು ಒಂದು ವೈಶಿಷ್ಟ್ಯವಾಗಿದೆ, ದೋಷವಲ್ಲ. ಇದು ಸರಳವಾಗಿ ದುಃಖಕರವಾಗಿದೆ ಎಂದಿದ್ದಾರೆ.

You may also like

Leave a Comment