Home » Delhi: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಬಯಲಾಯಿತು ಜಡ್ಜ್ ಮುಖವಾಡ

Delhi: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಬಯಲಾಯಿತು ಜಡ್ಜ್ ಮುಖವಾಡ

0 comments

 

Delhi: ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳ ಮನೆಗೆ ಬೆಂಕಿ ಬಿದ್ದಿದ್ದು ಈ ಬೆಂಕಿಯನ್ನು ನಂದಿಸಲು ಹೋದಂತಹ ಸಂದರ್ಭದಲ್ಲಿ ಜಡ್ಜ್ ಮುಖವಾಡ ಬಯಲಾಗಿದೆ.

 

ಹೌದು, ದೆಹಲಿ ಹೈಕೋರ್ಟ್‌ (Delhi High Court) ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಈ ಸಂದರ್ಭದಲ್ಲಿ ಬೆಂಕಿ ನಂದಿಸಲು ಹೋದಾಗ ಅವರ ಮನೆಯಲ್ಲಿ ಕಂತೆಗಟ್ಟಲೆ ನೋಟ್ ಪತ್ತೆಯಾಗಿದ್ದು ಈ ಬೆಳವಣಿಗೆ ಭಾರಿ ಚರ್ಚೆಗೆ ಕಾರಣವಾಗಿದೆ.

 

ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಸುಪ್ರೀಂಕೋರ್ಟ್ ಕೊಲಿಜಿಯಂ ಸಲಹೆ ಮೇರೆಗೆ ಅವರನ್ನು ಅಲಹಾಬಾದ್ ಹೈಕೋರಟ್​​ ಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಾಧೀಶರು ಮನೆಯಲ್ಲಿ ಇಲ್ಲದ ವೇಳೆ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.

 

ಅಂದಹಾಗೆ ಈ ವೇಳೆ ಕುಟುಂಬಸ್ಥರು ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದರು. ಬೆಂಕಿ ನಂದಿಸಲು ಆಗಮಿಸಿದ ವೇಳೆ ಹಲವು ರೂಂಗಳಲ್ಲಿ ಭಾರಿ ಪ್ರಮಾಣ ನಗದು ಪತ್ತೆಯಾಗಿತ್ತು. ಮಾಹಿತಿ ಪಡೆದ ನಂತರ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಕೊಲಿಜಿಯಂ ಸಭೆ ಕರೆದರು. ಅಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

You may also like