Home » Jammu and Kashmir: ಕಾಶ್ಮೀರದಲ್ಲಿ ಗುಂಡಿನ ದಾಳಿ: ಉಗ್ರರಿಗಾಗಿ ತೀವ್ರ ಶೋಧ

Jammu and Kashmir: ಕಾಶ್ಮೀರದಲ್ಲಿ ಗುಂಡಿನ ದಾಳಿ: ಉಗ್ರರಿಗಾಗಿ ತೀವ್ರ ಶೋಧ

119 comments

Jammu and Kashmir: ಇಂದು (ಸೋಮವಾರ) ಮುಂಜಾನೆ 6 ಗಂಟೆಗೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್‌ನಲ್ಲಿ ಸೇನಾ ವಾಹನವನ್ನು (Army Vehicle) ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಮಾಹಿತಿ ಪ್ರಕಾರ, ಭಯೋತ್ಪಾದಕರು ಸೇನಾ ಸೈನಿಕರು ಇರುವ ವಾಹನದ ಮೇಲೆ 3-4 ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಭದ್ರತಾ ಪಡೆಗಳು (Indian Army) ಇದೀಗ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯ ಗುಂಡಿನ ದಾಳಿಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

You may also like

Leave a Comment