Home » Supreme Court : ಇನ್ಮುಂದೆ ಬೀದಿ ನಾಯಿಗಳು ಕಚ್ಚಿದರೆ ಸರ್ಕಾರದಿಂದ ಪರಿಹಾರ – ಸುಪ್ರೀಂ ಕೋರ್ಟ್ ಆದೇಶ

Supreme Court : ಇನ್ಮುಂದೆ ಬೀದಿ ನಾಯಿಗಳು ಕಚ್ಚಿದರೆ ಸರ್ಕಾರದಿಂದ ಪರಿಹಾರ – ಸುಪ್ರೀಂ ಕೋರ್ಟ್ ಆದೇಶ

0 comments

 

Superme Court : ದೇಶಾದ್ಯಂತ ಎಲ್ಲೆಡೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ನಾನಾ ರೀತಿಯ ಕಾನೂನುಗಳನ್ನು, ಕಾಯ್ದೆಗಳನ್ನು ಜಾರಿಗೊಳಿಸಿದರೂ ಕೂಡ ಹತೋಟಿಗೆ ತರಲು ಆಗುತ್ತಿಲ್ಲ. ಕೆಲವು ಶ್ವಾನ ಪ್ರೇಮಿಗಳಂತೂ ಸರ್ಕಾರ ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾದಾಗಲೆಲ್ಲ ಅಡ್ಡಿ ಮಾಡಿರುವ ಉದಾಹರಣೆಗಳು ಇವೆ. ಇಷ್ಟೇ ಅಲ್ಲದೆ ಬೀದಿ ನಾಯಿಗಳ ಕಡಿತದಿಂದ ಇಂದು ಸಾವನ್ನಪ್ಪಿರುವ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಈ ಪರಿಸ್ಥಿತಿಯಲ್ಲಿ, ಇನ್ನು ಮುಂದೆ ಬೀದಿ ನಾಯಿಗಳು ಕಚ್ಚಿದರೆ ಸರ್ಕಾರ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಯಸ್, ದೆಹಲಿ-ಎನ್ಸಿಆರ್ ಸೇರಿದಂತೆ ದೇಶಾದ್ಯಂತ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಇಂದು (ಜನವರಿ 13, 2026), ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಯಿ ಕಡಿತದಿಂದ ಮಗು ಅಥವಾ ವೃದ್ಧ ವ್ಯಕ್ತಿ ಗಾಯಗೊಂಡರೆ ಅಥವಾ ಸತ್ತರೆ, ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿ ನಾಯಿಗಳಿಂದ 9 ವರ್ಷದ ಮಗು ಸಾವನ್ನಪ್ಪಿದರೆ ಯಾರು ಹೊಣೆಗಾರರಾಗಬೇಕು ಎಂದು ನ್ಯಾಯಪೀಠ ಪ್ರಶ್ನಿಸಿತು. ನ್ಯಾಯಾಲಯವು ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ ಎಂದು ನ್ಯಾಯಾಲಯ  ಕೇಳಿತ್ತು. ಕೇವಲ ನಾಯಿಯ ಮೇಲಷ್ಟೇ ಕನಿಕರವೇಕೆ?, ಮಾನವನ ಮೇಲಿನ ದಾಳಿಗಳ ಮೇಲೆ ಏಕೆ ಮಾತನಾಡುತ್ತಿಲ್ಲ. ಹೊಣೆಗಾರಿಕೆಗಾಗಿ ಕಠಿಣ ಚೌಕಟ್ಟನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಪೀಠ ಸೂಚಿಸಿದೆ. ನಾಯಿ ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಗಾಯಗಳಿಗೆ ರಾಜ್ಯವು ಪರಿಹಾರವನ್ನು ಪಾವತಿಸಬೇಕು. ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೆಯೂ ಜವಾಬ್ದಾರಿ ಇದ್ದು ಪರಿಹಾರ ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

You may also like