Home » Gruha Lakshmi Yojana: ಗೃಹಲಕ್ಷ್ಮೀ ಹಣ ಬರದವರಿಗೆ ಮಹತ್ವದ ಸುದ್ದಿ- ಈ ಕೆಲಸ ಮಾಡಲು ರೆಡಿಯಾಗಿ

Gruha Lakshmi Yojana: ಗೃಹಲಕ್ಷ್ಮೀ ಹಣ ಬರದವರಿಗೆ ಮಹತ್ವದ ಸುದ್ದಿ- ಈ ಕೆಲಸ ಮಾಡಲು ರೆಡಿಯಾಗಿ

1 comment
Gruha Lakshmi Yojana

Gruha Lakshmi Yojana: ಗೃಹಲಕ್ಷ್ಮೀ ಯೋಜನೆಗೆ (Gruha lakshmi Yojana) ಅರ್ಜಿ ಸಲ್ಲಿಸಿ ಈವರೆಗೆ ಹಣ ಬಾರದೆ ಇರುವವರಿಗೆ, ಇನ್ನು ನಾಲ್ಕೈದು ದಿನದಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಹೀಗಾಗಿ ಮಹಿಳೆಯರ ಖಾತೆಗೆ ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಅಲ್ಲದೇ ಇನ್ನೂ ಹಣ ಸಿಗದವರು ಅದಾಲತ್‌ನಲ್ಲಿ ದೂರು ಕೊಡಲು ಅವಕಾಶ ಇದೆ.

ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದ್ದು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆಯಾ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಂದಿದ್ದಾರೆ. ಅದಲ್ಲದೆ ಈಗಾಗಲೇ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ ದುಡ್ಡು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಹೇಳಿದ್ದಾರೆ.

ಮುಖ್ಯವಾಗಿ ಬ್ಯಾಂಕ್‌ ಖಾತೆ, ಆಧಾರ್‌ ಲಿಂಕ್‌ ಆಗದ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ 9 ಲಕ್ಷಕ್ಕೂ ಅಧಿಕ ಕುಟುಂಬದವರಿಗೆ ಇನ್ನೂ ಗೃಹ ಲಕ್ಷ್ಮಿ ಹಣ ತಲುಪಿಲ್ಲ. ಹೀಗಾಗಿ ಪಡಿತರ ಚೀಟಿಯಲ್ಲಿರುವ ಬೇರೆ ಹಿರಿಯ ಮಹಿಳಾ ಸದಸ್ಯೆಯರ ಖಾತೆಗೆ ಹಣ ಹಾಕುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಈ ಸಂಬಂಧ ಗುರುವಾರ (ನ. 23) ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಇದನ್ನೂ ಓದಿ : 7th Pay Commission: ಬೆಳ್ಳಂಬೆಳಗ್ಗೆಯೇ ಸರ್ಕಾರಿ ನೌಕರರಿಗೆ ಬೊಂಬಾಟ್ ನ್ಯೂಸ್ – ಈ ಸಣ್ಣ ಬದಲಾವಣೆಯಿಂದ ವೇತನದಲ್ಲಾಗಿದೆ ಭರ್ಜರಿ 49, 420 ಹೆಚ್ಚಳ !!

You may also like

Leave a Comment