Home » Death News: ಡ್ಯೂಟಿ ಮುಗಿಸಿ ರಾತ್ರಿ ಮನೆಗೆ ಬಂದು ಮಲಗಿದ ಟೆಕ್ಕಿ, ಬೆಳಗ್ಗೆ ಏಳುವಷ್ಟರಲ್ಲಿ ದುರಂತ ಸಾವು ?! ಅಷ್ಟಕ್ಕೂ ರಾತ್ರಿ ಬೆಳಗಾಗೋದ್ರೊಳಗೆ ಆದದ್ದೇನು?

Death News: ಡ್ಯೂಟಿ ಮುಗಿಸಿ ರಾತ್ರಿ ಮನೆಗೆ ಬಂದು ಮಲಗಿದ ಟೆಕ್ಕಿ, ಬೆಳಗ್ಗೆ ಏಳುವಷ್ಟರಲ್ಲಿ ದುರಂತ ಸಾವು ?! ಅಷ್ಟಕ್ಕೂ ರಾತ್ರಿ ಬೆಳಗಾಗೋದ್ರೊಳಗೆ ಆದದ್ದೇನು?

1 comment
Hyderabad

Hyderabad : ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ(Suicide)ಶರಣಾಗುತ್ತಿರುವ ಘಟನೆಗಳು ವರದಿಯಾಗುತ್ತಲೇ ಇರುವುದು ಆತಂಕದ ಸಂಗತಿ. ಇದೀಗ, ಹರೆಯದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಹೈದರಾಬಾದ್ (Hyderabad)ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಮಹಿಳಾ ಟೆಕ್ಕಿಯೊಬ್ಬರು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಮೃತ ದುರ್ದೈವಿಯನ್ನ ಮೌನಿಕ(23)ಎಂದು ಗುರುತಿಸಲಾಗಿದೆ. ನೆಹರು ನಗರದಲ್ಲಿ ತನ್ನ ಸ್ನೇಹಿತೆ ಸೌಮ್ಯ ಎಂಬಾಕೆಯ ಜೊತೆಗೆ ಮೌನಿಕಾ ನೆಲೆಸಿದ್ದರಂತೆ. ಮಾದಪುರದಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಮೌನಿಕಾ ಇತ್ತೀಚೆಗೆ ತವರಿಗೆ ಮರಳಿದ್ದಳು.

ಸೋಮವಾರ ರಾತ್ರಿ ರೂಮಿಗೆ ತೆರಳಿದ ಮೌನಿಕಾ ಮಂಗಳವಾರ ಬೆಳಗ್ಗೆ ರೂಮ್ ಬಿಟ್ಟು ಆಚೆಗೆ ಬಂದಿಲ್ಲ ಎನ್ನಲಾಗಿದೆ. ಮನೆಯವರು ಎಷ್ಟೇ ಕೂಗಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಗಾಬರಿಗೊಂಡ ಪೋಷಕರು ನೆರೆ ಮನೆಯವರ ಮೂಲಕ ಬಾಗಿಲು ಮುರಿದು ನೋಡಿದ ಸಂದರ್ಭ ಆಕೆ ಪ್ರಜ್ಞೆಯಿಲ್ಲದೆ ಬಿದ್ದ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಪಕ್ಕದಲ್ಲೇ ಕೀಟನಾಶಕ ಬಾಟೆಲ್ ಕೂಡ ಪತ್ತೆಯಾಗಿದ್ದು, ಹೀಗಾಗಿ, ಆತಂಕಕ್ಕೆ ಒಳಗಾದ ಕುಟುಂಬ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಅಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ.

ಮೌನಿಕ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದ ವಿಚಾರವನ್ನು 2 ತಿಂಗಳ ಹಿಂದೆ ಪಾಲಕರಿಗೆ ತಿಳಿಸಿದ್ದು, ಆದರೆ, ಈ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೌನಿಕ ಪೋಷಕರ ಜೊತೆಗೆ ಮಾತು ಬಿಟ್ಟಿದ್ದಾಳೆ. ಇತ್ತೀಚೆಗೆ ಆ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು,ಯುವಕನ ಮನೆಯವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿರುವ ವಿಚಾರ ಕೂಡ ಮೌನಿಕಾ ಪಾಲಕರಿಗೆ ತಿಳಿಸಿದ್ದಾರೆ. ಇದೇ ನೋವಿನಲ್ಲಿ ಆಕೆ ವಿಷ ಸೇವಿಸಿದ್ದಾಳೆ ಎಂದು ಪಾಲಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತಂತೆ ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Shocking News: ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಪೋಲೀಸರ ಅತಿಥಿಯಾದ ವರ !! ಒಬ್ಬೊಂಟಿಯಾದ ವಧು ಏನು ಮಾಡಿದ್ಲು ಗೊತ್ತಾ?

You may also like

Leave a Comment