Home » Retail Markets: ವ್ಯಾಪಾರಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಚಿಲ್ಲರೆ ವ್ಯಾಪಾರ ನೀತಿ ಜಾರಿ!

Retail Markets: ವ್ಯಾಪಾರಿಗಳಿಗೆ ಸಿಹಿ ಸುದ್ದಿ; ಶೀಘ್ರವೇ ಚಿಲ್ಲರೆ ವ್ಯಾಪಾರ ನೀತಿ ಜಾರಿ!

0 comments
Retail Markets

Retail Markets : ಚಿಲ್ಲರೆ ವ್ಯಾಪಾರಿಗಳು ನೇರವಾಗಿ ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ನೀಡುವಲ್ಲಿ ತೊಡಗಿರುವ ವ್ಯಾಪಾರಿಗಳಾಗಿದ್ದು, ಈ ಚಿಲ್ಲರೆ ವ್ಯಾಪಾರಿಗಳು ಹಲವಾರು ಸಮಸ್ಯೆಗಳನ್ನು ವ್ಯಾಪಾರದಲ್ಲಿ ಎದುರಿಸುತ್ತಿದ್ದಾರೆ.

ಮುಖ್ಯವಾಗಿ ಭಾರತ ವಿಶ್ವದಲ್ಲಿ ಐದನೇ ಅತಿ ದೊಡ್ಡ ಚಿಲ್ಲರೆ ವ್ಯಾಪಾರ ವಲಯ ಹೊಂದಿದ ದೇಶವಾಗಿದ್ದು, ಇ- ಕಾಮರ್ಸ್ ಮಾತ್ರವಲ್ಲದೆ, ಭೌತಿಕ ವ್ಯಾಪಾರ ನಡೆಸುವವರಿಗೂ ಅನುಕೂಲವಾಗುವಂತೆ ನೀತಿ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಚಿಲ್ಲರೆ ವ್ಯಾಪಾರಿಗಳ (Retail markets) ಸುಧಾರಣೆಗೆ ಕೇಂದ್ರ ಸರ್ಕಾರ ಮುಖ್ಯವಾದ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ ಕೈಗೊಂಡಿದೆ. ಮುಖ್ಯವಾಗಿ ಕೇಂದ್ರ ವಾಣಿಜ್ಯ ಸಚಿವಾಲಯದಿಂದ ಹಣಕಾಸು ಇಲಾಖೆ ಜೊತೆ ಸೇರಿ ನಿಯಮಗಳನ್ನು ರೂಪಿಸಲಾಗುತ್ತದೆ ಎಂಬ ಮಾಹಿತಿ ಇದೆ.

ಚಿಲ್ಲರೆ ವ್ಯಾಪಾರ ನೀತಿ ಅಡಿ ವ್ಯಾಪಾರಿಗೆ ಸುಧಾರಿತ ಮೂಲ ಸೌಕರ್ಯ ಹಾಗೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲಾಗುವುದು. ಇನ್ನು ಚಿಲ್ಲರೆ ವ್ಯಾಪಾರದ ಆಧುನಿಕರಣ, ಡಿಜಿಟಲೀಕರಣ, ಸರಕು ವಿತರಣೆಗೆ ಆಧುನಿಕ ಮೂಲ ಸೌಕರ್ಯ, ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ, ಕಾರ್ಮಿಕರ ಉತ್ಪಾದಕತೆ ಹೆಚ್ಚಳ, ದೂರು ಪರಿಹಾರ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ ಇದೆ.

ಹೌದು, ಮೊದಲ ಬಾರಿಗೆ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ರಾಷ್ಟ್ರೀಯ ನೀತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅದಲ್ಲದೆ ಜಿ.ಎಸ್.ಟಿ. ಅಡಿ ನೋಂದಾಯಿತ ವ್ಯಾಪಾರಿಗಳಿಗೆ ಅಪಘಾತ ವಿಮೆ ಜಾರಿಗೊಳಿಸಲಾಗುವುದು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಣೆ ಗೊಳಿಸಲು, ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಕೊಡಿಸಲಾಗುವುದು ಎಂದು ತಿಳಿಸಲಾಗಿದೆ .

ಇದನ್ನೂ ಓದಿ: ಕರಾವಳಿಯಲ್ಲಿ ಅಲೆ ಎಬ್ಬಿಸಲು ಬರ್ತಿದ್ದಾರೆ ಹಿಂದೂ ಫೈರ್ ಬ್ರಾಂಡ್, ಬುಲ್ಡೋಜರ್ ಬಾಬಾ, ದಿನಾಂಕ ಗಮನಿಸಿ

 

You may also like

Leave a Comment