BH Number Plate: ವಾಹನಗಳ ವಿಚಾರವಾಗಿ ಕೇಂದ್ರ ಸರ್ಕಾರವು ಒಂದಲ್ಲ ಒಂದು ಹೋಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಟ್ರಾಫಿಕ್ ರೂಲ್ಸ್, ಡ್ರೈವಿಂಗ್ ಲೈಸೆನ್ಸ್, RC, ನಂಬರ್ ಪ್ಲೇಟ್ ಹೀಗೆ ವಾಹನಕ್ಕೆ, ಮಾಲೀಕರಿಗೆ ಸಂಬಂಧಪಟ್ಟಂತೆ ಏನಾದರೂ ಒಂದು ರೂಲ್ಸ್ ತರುತ್ತಿದೆ. ಅಂತೆಯೇ ಇದೀಗ BH ನಂಬರ್ ಪ್ಲೇಟ್(BH Number plate) ಕುರಿತು ಕೇಂದ್ರವು ಮಹತ್ವದ ಆದೇಶವನ್ನು ಹೊರಡಿಸಿ ವಾಹನ ಮಾಲಿಕರಿಗೆ ಸಿಹಿ ಸುದ್ದಿ ನೀಡಿದೆ.
ಹೌದು, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಹ ವಾಹನಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ. ಅದೇನೆಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಹ BH ಸೀರೀಸ್ ನಂಬರ್ ಪ್ಲೇಟ್ ಗಳನ್ನು ಹಳೆಯ ವಾಹನಗಳಿಗೂ ಕೂಡ ವರ್ಗಾಯಿಸಬಹುದು ಎಂಬುದಾಗಿ ಸರ್ಕಾರ ತಿಳಿಸಿದೆ.
BH ಸೀರೀಸ್ ನಂಬರ್ ಪ್ಲೇಟ್ ಗಳಿಂದಾಗೋ ಲಾಭ ಏನು?
BH ಸೀರೀಸ್ ನಂಬರ್ ಪ್ಲೇಟ್ ಅನ್ನು ದೇಶವ್ಯಾಪಿ ಒಂದೇ ಎಂಬುದಾಗಿ ಗುರುತಿಸಲಾಗುತ್ತದೆ. ಅಂದರೆ BH ನಂಬರ್ ಪ್ಲೇಟ್ ಇರುವಂತ ವಾಹನಗಳನ್ನು ಮಾರಾಟ ಅಥವಾ ಖರೀದಿಸುವುದು ಅತ್ಯಂತ ಸುಲಭ ವಾಗಿರುತ್ತದೆ. ರಾಜ್ಯದಿಂದ ರಾಜ್ಯಗಳಿಗೆ ಇದನ್ನು ವರ್ಗಾವಣೆ ಮಾಡುವುದು ಕೂಡ ಅತ್ಯಂತ ಸುಲಭವಾಗಿರುತ್ತದೆ. ಭದ್ರತೆ ಹಾಗೂ ಗುರುತಿಸುವಿಕೆಯ ವಿಶೇಷತೆಗಳು ಕೂಡ ಬೇರೆ ವಾಹನಗಳಿಗಿಂತ ವಿಶೇಷವಾಗಿರುತ್ತದೆ.
BH ನಂಬರ್ ಪ್ಲೇಟ್ ಪಡೆಯಲು ಬೇಕಾದ ದಾಖಲೆಗಳು :
• ವಾಹನದ ರಿಜಿಸ್ಟ್ರೇಷನ್ ಸರ್ಟಿಫಿಕೇಟ್
• ವಾಹನದ ಮಾಲೀಕರ ವಿಳಾಸದ ವಿವರ
• ವಾಹನದ ಮಾಲೀಕರ ಐಡೆಂಟಿಟಿ ಪ್ರೂಫ್
• ರೋಡ್ ಟ್ಯಾಕ್ಸ್ ರಿಸಿಪ್ಟ್
ಅಂದಹಾಗೆ BH ಸೀರೀಸ್ ನಂಬರ್ ಪ್ಲೇಟ್ ಗಾಗಿ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಶುಲ್ಕವನ್ನು ಕಟ್ಟಲು ಎರಡು ಸಾವಿರ ರೂಪಾಯಿಗಳಿಂದ ಇರುತ್ತದೆ ಹಾಗೂ ಇದು ಆಯಾಯ ರಾಜ್ಯಗಳಿಗೆ ವಿಭಿನ್ನವಾಗಿರುತ್ತದೆ. ಅರ್ಜಿ ಸಲ್ಲಿಸಿದ ನಂತರ ನೋಟಿಸ್ ಬರುತ್ತಿದ್ದಂತೆ ಇದರ ಪೇಮೆಂಟ್ ಮಾಡಬೇಕಾಗಿರುತ್ತದೆ.
ಇದನ್ನೂ ಓದಿ: Gujarath: ‘ಜೈನ ಮುನಿಗಳನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿ’ – ಬಿಜೆಪಿ ಮುಖಂಡನಿಂದ ಪ್ರಚೋದನಾತ್ಮಕ ಹೇಳಿಕೆ !!
