Home » ಉಕ್ರೇನ್ ನಲ್ಲಿ ಭಾರತದ ಮತ್ತೋರ್ವ ವಿದ್ಯಾರ್ಥಿ ಸಾವು|ಸಾವಿನ ಹಿಂದಿರುವ ಕಾರಣ!?

ಉಕ್ರೇನ್ ನಲ್ಲಿ ಭಾರತದ ಮತ್ತೋರ್ವ ವಿದ್ಯಾರ್ಥಿ ಸಾವು|ಸಾವಿನ ಹಿಂದಿರುವ ಕಾರಣ!?

0 comments

ಉಕ್ರೇನ್ ರಷ್ಯಾದ ದಾಳಿಯಿಂದ ತತ್ತರಿಸಿ ಹೋಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ.ಇದೀಗ ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಇಂದು ಪಾರ್ಶ್ವವಾಯುನಿಂದ ಮೃತ ಪಟ್ಟಿದ್ದಾನೆ ಎನ್ನಲಾಗ್ತಿದೆ.ಆದರೆ ಈತನ ಸಾವಿಗೂ ಉಕ್ರೇನ್ ನಲ್ಲಿ ನಡೆಯುತ್ತಿರುವ ದಾಳಿಗೂ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.

ಚಂದನ್ ಜಿಂದಾಲ್ (22) ಅನ್ನೋ ಯುವಕ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೊವ್, ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾ ಉಕ್ರೇನ್ʼನಲ್ಲಿ ಅಧ್ಯಯನ ಮಾಡುತ್ತಿದ್ದನು. ಚಂದನ್ ಗೆ ಮಿದುಳಿಗೆ ರಕ್ತದ ಸಂಚಾರ ನಿಂತು,ಪಾರ್ಶ್ವವಾಯುವಿನ ಹೊಡೆತಕ್ಕೆ ಒಳಗಾಗಿದ್ದ ಅವರನ್ನು ವಿನಿಟ್ಸಿಯಾದ ಎಮರ್ಜೆನ್ಸಿ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ಇಸ್ಚೆಮಿಯಾ ಸ್ಟ್ರೋಕ್ʼನಿಂದ ಬಳಲುತ್ತಿದ್ದ ಚಂದನ್‌ನನ್ನು ನಂತರ ಐಸಿಯುಗೆ ಸ್ಥಳಾಂತರಿಸಲಾಯಿತು.

ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಈ ಮಾಹಿತಿ ಮನೆಯವರಿಗೂ ತಿಳಿದಿದ್ದು,ಅಂತಿಮ ಸಂಸ್ಕಾರಕ್ಕಾಗಿ ಮಗನ ಮೃತದೇಹವನ್ನ ದೇಶಕ್ಕೆ ತರಿಸಿಕೊಡುವಂತೆ ಮೃತ ಚಂದನ್‌ ತಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.

You may also like

Leave a Comment